ನವೆಂಬರ್ ತಿಂಗಳಲ್ಲಿದೆ ಬರೋಬ್ಬರಿ 17 ರಜಾದಿನಗಳು

ನವದೆಹಲಿ ನ 1 ಈ ತಿಂಗಳಿನಲ್ಲಿ ಬ್ಯಾಂಕ್ ಸಂಬಂಧಿತ ಕೆಲಸಗಳಿದ್ದರೆ, ಈ ಸುದ್ದಿಯನ್ನು ಓದಿ. ಈ ತಿಂಗಳಲ್ಲಿ, ಒಟ್ಟು 17 ದಿನಗಳವರಗೆ ಬ್ಯಾಂಕ್ (Bank holiday) ಮುಚ್ಚಿರಲಿವೆ. ಈ ಹಿನ್ನೆಲೆಯಲ್ಲಿ ಯಾವುದೇ ತುರ್ತು ಕೆಲಸ ಇದ್ದರೆ, ತಕ್ಷಣ ಪೂರೈಸಿಕೊಳ್ಳಿ.  ಇಲ್ಲವಾದರೆ ಕಷ್ಟ ಎದುರಾಗಬಹುದು. 

17 ದಿನಗಳ ಕಾಲ ಬ್ಯಾಂಕ್‌ ರಜೆ :  
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನವೆಂಬರ್ ತಿಂಗಳ ಅಧಿಕೃತ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ನವೆಂಬರ್ ತಿಂಗಳಲ್ಲಿ ಬ್ಯಾಂಕ್ ಗೆ 17 ರಜೆಗಳಿವೆ. ಈ ಸಮಯದಲ್ಲಿ, ಭಾರತದ ಅನೇಕ ನಗರಗಳಲ್ಲಿ ಬ್ಯಾಂಕುಗಳು ನಿರಂತರವಾಗಿ ಮುಚ್ಚಲ್ಪಟ್ಟಿರುತ್ತವೆ. ಈ 17 ದಿನಗಳ ರಜೆಯಲ್ಲಿ ಸಾಪ್ತಾಹಿಕ ರಜಾದಿನಗಳನ್ನು ಸಹ ಸೇರಿಸಲಾಗಿದೆ. 

ನವೆಂಬರ್ 2021 ರಲ್ಲಿ ಬ್ಯಾಂಕ್ ರಜಾದಿನಗಳು :
ನವೆಂಬರ್ 1 – ಕನ್ನಡ ರಾಜ್ಯೋತ್ಸವ/  
ನವೆಂಬರ್ 3  – ನರಕ ಚತುರ್ದಶಿ – ಕರ್ನಾಟಕ 
ನವೆಂಬರ್ 4 – ದೀಪಾವಳಿ ಅಮವಾಸ್ಯೆ (ಲಕ್ಷ್ಮೀ ಪೂಜೆ) / ದೀಪಾವಳಿ / ಕಾಳಿ ಪೂಜೆ – ಕರ್ನಾಟಕ ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಬ್ಯಾಂಕ್ ರಜೆ 
ನವೆಂಬರ್ 5 – ದೀಪಾವಳಿ /  ಗೋವರ್ಧನ ಪೂಜೆ – (ಅಹಮದಾಬಾದ್, ಬೇಲಾಪುರ್, ಕರ್ನಾಟಕ , ಡೆಹ್ರಾಡೂನ್, ಗ್ಯಾಂಗ್ಟಾಕ್, ಜೈಪುರ, ಕಾನ್ಪುರ್, ಲಕ್ನೋ, ಮುಂಬೈ ಮತ್ತು ನಾಗ್ಪುರ )
ನವೆಂಬರ್ 6 – ಭಾಯಿ ದೂಜ್ / ಚಿತ್ರಗುಪ್ತ ಜಯಂತಿ / ಲಕ್ಷ್ಮಿ ಪೂಜೆ / ದೀಪಾವಳಿ / ನಿಂಗೋಲ್ ಚಕೋಬಾ – (ಗ್ಯಾಂಗ್ಟಾಕ್, ಇಂಫಾಲ್, ಕಾನ್ಪುರ, ಲಕ್ನೋ ಮತ್ತು ಶಿಮ್ಲಾ )
7 ನವೆಂಬರ್ – ಭಾನುವಾರ (ವಾರದ ರಜೆ)
10 ನವೆಂಬರ್ – ಛತ್ ಪೂಜೆ / ಸೂರ್ಯ ಷಷ್ಠಿ ದಲಾ ಛಾತ್ – (ಪಾಟ್ನಾ ಮತ್ತು ರಾಂಚಿ) 
11 ನವೆಂಬರ್ – ಛತ್ ಪೂಜೆ – (ಪಾಟ್ನಾ)
12 ನವೆಂಬರ್ – ವಂಗ್ಲಾ ಉತ್ಸವ – (ಶಿಲ್ಲಾಂಗ್‌ ) 
13 ನವೆಂಬರ್ – ಶನಿವಾರ (ತಿಂಗಳ ಎರಡನೇ ಶನಿವಾರ)
14 ನವೆಂಬರ್ – ಭಾನುವಾರ (ವಾರದ ರಜೆ)
19 ನವೆಂಬರ್ – ಗುರುನಾನಕ್ ಜಯಂತಿ / ಕಾರ್ತಿಕ್ ಪೂರ್ಣಿಮಾ
21 ನವೆಂಬರ್ – ಭಾನುವಾರ (ವಾರದ ರಜೆ)
22 ನವೆಂಬರ್ – ಕನಕದಾಸ ಜಯಂತಿ – (ಕರ್ನಾಟಕ )
23 ನವೆಂಬರ್  –  ಸೆಂಗ್ ಕುಟ್ಸ್ ನಮ್ -( ಶಿಲ್ಲಾಂಗ್‌ ) 
 27 ನವೆಂಬರ್ – ಶನಿವಾರ (ತಿಂಗಳ ನಾಲ್ಕನೇ ಶನಿವಾರ)
28 ನವೆಂಬರ್ – ಭಾನುವಾರ (ವಾರದ ರಜೆ)

Exit mobile version