ಗಣೇಶನ ಗಲಾಟೆಗೆ ಮಣಿದ ಬಿಬಿಎಂಪಿ

ಬೆಂಗಳೂರು ಸೆ 9 :  ಗಣೇಶೋತ್ಸವ ಸಮಿತಿಗಳ ಪ್ರತಿಭಟನೆಗೆ ಬಿಬಿಎಂಪಿ ಮಣಿದಿದ್ದು, ಗಣೇಶೋತ್ಸವ ಆಚರಣೆಗೆ ಈ ಮುಂಚೆಯಿದ್ದ ನಿಯಮಗಳನ್ನು ಬಿಬಿಎಂಪಿ ಸಡಿಲಗೊಳಿಸಿದ್ದು, ಒಂದು ವಾರ್ಡ್‌ನಲ್ಲಿ ಒಂದಕ್ಕಿಂತ ಹೆಚ್ಚು ಗಣೇಶನ ಮೂರ್ತಿಗಳನ್ನು ಕೂರಿಸಲು ಅನುಮತಿ ನೀಡಲಾಗಿದೆ.

ಬಿಬಿಎಂಪಿ ಹೊರಡಿಸಿರುವ ಹೊಸ ನಿಯಮಗಳು

1. ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಕೂರಿಸಲು 10 ದಿನಗಳ ವರೆಗೆ ಅವಕಾಶ ನೀಡಲಾಗಿದೆ.

2. ವಾರ್ಡ್‌ಗಳಲ್ಲಿ ಎಷ್ಟು ಮೂರ್ತಿಗಳನ್ನು ಬೇಕಾದರೂ ಪ್ರತಿಷ್ಠಾಪಿಸಬಹುದು.

3. ಗಣೇಶನ ಕೂರಿಸಲು ಬಿಬಿಎಂಪಿ ಅನುಮತಿ ಪಡೆಯುವುದು ಕಡ್ಡಾಯ.

4. 4 ಅಡಿಗಿಂತಲೂ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬಹುದು.

5. ಎಲ್ಲಾ ವಾರ್ಡ್‌ ಹಾಗೂ ಎಲ್ಲಾ ಬೀದಿಗಳಲ್ಲೂ ಗಣೇಶನ ಕೂರಿಸಲು ಅನುಮತಿ ನೀಡಲಾಗಿದೆ.

Exit mobile version