ಬಿಬಿಎಂಪಿಯಿಂದ ಪ್ರತಿದಿನ 1 ಲಕ್ಷ ಲಸಿಕೆ ನೀಡುವ ಗುರಿ

ಬೆಂಗಳೂರು ಸೆ 2 ; ಕೊರೊನಾವನ್ನು ಸಂಪೂರ್ಣವಾಗಿ ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶಾದ್ಯಂತ ಲಸಿಕಾ ಅಭಿಯಾನ ಆರಂಭಿಸಿದ್ದು, ಈ ಹಿನ್ನಲೆಯಲ್ಲಿ ರಾಜ್ಯಗಳಿಗೆ  ಹೆಚ್ಚು ಹೆಚ್ಚು ಲಸಿಕೆ ನೀಡುತ್ತಿದ್ದು ಹಾಗೆ ರಾಜ್ಯಕ್ಕೂ ಕೂಡ ದಾಖಲೆ ಪ್ರಮಾಣದ ಲಸಿಕೆಯನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ಲಸಿಕೆ ಹೆಚ್ಚು ಪ್ರಮಾಣದಲ್ಲಿ ಲಭಿಸುತ್ತಿರುವ ಹಿನ್ನಲೆಯಲ್ಲಿ ಬಿಬಿಎಂಪಿ ಕೂಡ ಇನ್ನು ಮುಂದಿನ ದಿನಗಳಲ್ಲಿ ಪ್ರತಿನಿತ್ಯ 1 ಲಕ್ಷ ಜನರಿಗೆ ಲಸಿಕೆಯನ್ನು ನೀಡುವ ಗುರಿ ಹೊಂದಿದೆ.

ಈಗಾಗಲೇ ಬಿಬಿಎಂಪಿ ಲಸಿಕಾ ವೇಗಕ್ಕೆ ಒತ್ತು ನೀಡಿದ್ದು ಈ ಹಿನ್ನಲೆಯಲ್ಲಿ ಪ್ರಸ್ತುತ ನಗರದಲ್ಲಿ ಗುರುತಿಸಿರುವ ಸ್ಥಿರ ಲಸಿಕಾ ಕೇಂದ್ರ‌ಗಳು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2.30 ರ ವರೆಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.

ಈ ಹಿನ್ನಲೆಯಲ್ಲಿ  ಮೊದಲ ಹಂತದಲ್ಲಿ ಬೃಹತ್ ಲಸಿಕಾ ಶಿಬಿರವನ್ನು 3 ಕೇಂದ್ರ‌ಗಳಲ್ಲಿ ಬೆಳಗ್ಗೆ 8 ಗಂಟೆಯಿಂದ, ರಾತ್ರಿ 9 ಗಂಟೆಯ ವರೆಗೆ ನಡೆಸಲಾಗುವುದು. ಲಸಿಕೆ ಪಡೆಯುವವರು ಹೆಚ್ಚಿದ್ದಲ್ಲಿ ಈ ಸಮಯವನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗ ಅಶಕ್ತರಿಗೆ ಮನೆಯ ಬಳಿಯೇ ಲಸಿಕೆ ನೀಡುವ ಯೋಜನೆ ಕೂಡ ಇದೆ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

Exit mobile version