ವಿಧಾನಸಭೆ ಎಲೆಕ್ಷನ್ ಮುಗಿಯುತ್ತಿದ್ದಂತೆಯೇ ಬಿಬಿಎಂಪಿ ಚುನಾವಣೆ ಡೇಟ್ ಫಿಕ್ಸ್?

Bengaluru : ಕಾಂಗ್ರೆಸ್ (Congress) ಪಕ್ಷ ಅಧಿಕಾರಕ್ಕೆ ಬಂದರೆ ಬೆಂಗಳೂರಿನ ಜನತೆ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಬಿಬಿಎಂಪಿ (BBMP election date fixed) ಚುನಾವಣೆ ನಡೆಸುವುದಾಗಿ

ಪಣ ತೊಟ್ಟಿತ್ತು. ಈ ಭರವಸೆಯನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷವೂ ಇದೇ ಭರವಸೆಯನ್ನು ನೀಡಿದೆ. ಹಾಗಾಗಿ ಮುಂಬರುವ ಬಿಬಿಎಂಪಿ ಚುನಾವಣೆಯ ಮುನ್ಸೂಚನೆ ಸಿಕ್ಕಿದೆ.


ಎರಡು ವರ್ಷಗಳಿಂದ ನಡೆಯದಿದ್ದ ಬಿಬಿಎಂಪಿ ಚುನಾವಣೆಗೆ ಈಗ ಕಾಲ ಕೂಡಿ ಬಂದಿದೆ. ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಅಧಿಕಾರ ಸಿಕ್ಕರೆ ಬಿಬಿಎಂಪಿ ಚುನಾವಣೆ ನಡೆಸುವುದಾಗಿ ಪಣ ತೊಟ್ಟಿದ್ದು,

ಸದ್ಯ ಆ ಭರವಸೆ ಈಡೇರಿಸಲು ಸಿದ್ಧತೆ ನಡೆಸಿದೆ. ಇದಲ್ಲದೆ, ಬೆಂಗಳೂರಿನ (Bengaluru) ಕಾಂಗ್ರೆಸ್ ಪಕ್ಷದ ನಾಯಕರು ಚುನಾವಣಾ ಪ್ರಕ್ರಿಯೆಯನ್ನು ಮುಂದಕ್ಕೆ ತಳ್ಳಲು ರಾಜ್ಯ ಸರ್ಕಾರದೊಳಗಿನ ವರಿಷ್ಠರ ಮನವೊಲಿಸಲು

ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಕಾಂಗ್ರೆಸ್ಸಿನ ಬಲವಿದೆ. ಸದ್ಯದ ರಾಜಕೀಯ ವಾತಾವರಣವನ್ನು ಗಮನಿಸಿದರೆ, ಈಗಲೇ ಚುನಾವಣೆ ನಡೆದರೆ ಕಾಂಗ್ರೆಸ್ (Congress) ಪಕ್ಷ ಹೆಚ್ಚಿನ

ಸ್ಥಾನಗಳನ್ನು ಪಡೆಯಲಿದೆ ಎಂದು ಮಾನವಿ ವಿಶ್ವಾಸ (BBMP election date fixed) ವ್ಯಕ್ತಪಡಿಸಿದ್ದಾರೆ.

ಚುನಾವಣೆಗೆ ಹೈ ಕೋರ್ಟ್ಆದೇಶ ನೀಡಿದ್ದರೂ ವಿಳಂಬವಾದ ಚುನಾವಣೆ
ಬಿಬಿಎಂಪಿ ಕಾರ್ಪೊರೇಟರ್‌ಗಳ (Corporator) ಅಧಿಕಾರಾವಧಿ ಮುಗಿದು ಎರಡು ವರ್ಷಗಳಾಗಿವೆ. ಬಿಜೆಪಿ ಸರಕಾರ ನಾನಾ ನೆಪ ಹೇಳಿ ಬಿಬಿಎಂಪಿ ಚುನಾವಣೆ ವಿಳಂಬ ಮಾಡುತ್ತಿತ್ತು. ಸದ್ಯ ಬಿಬಿಎಂಪಿಯಲ್ಲಿ 198 ವಾರ್ಡ್

ಗಳು ಇವೆ ಆದರೆ ಆಡಳಿತ ದೃಷ್ಟಿಯಿಂದ 243 ವಾರ್ಡ್‍ಗಳನ್ನಾಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ.ಚುನಾವಣೆ ನಡೆಸಿ ಅಂತ ಈ ಬಗ್ಗೆ ಹೈಕೋರ್ಟ್ (High Command) ಕೂಡ ಅದೇಶ ನೀಡಿತ್ತು ಆದರೆ ಬಿಜೆಪಿ ಸರ್ಕಾರ

ಮತ್ತೆ ಮೀಸಲಾತಿ ಹೆಸರಲ್ಲಿ 6 ತಿಂಗಳ ಗಡುವು ಕೇಳಿತ್ತು.


ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷ ಅಧಿಕಾರಕ್ಕೆ ಬಂದ್ರೆ 6 ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ಮಾಡ್ತಿವಿ ಎಂದು ಹೇಳಿಕೆ ನೀಡಿದ್ರು.ಇನ್ನು ಕಾಂಗ್ರೆಸ್ ಪಕ್ಷದ ಪಾಲಿಕೆಯ ಮಾಜಿ ಅಡಳಿತ ಪಕ್ಷದ ನಾಯಕ

ಅಬ್ದುಲ್ ವಾಜೀದ್ (Abdul Wazeed) ಬಿಬಿಎಂಪಿ ಚುನಾವಣೆ ಅಕ್ಟೋಬರ್ ಅಥವಾ ನವಂಬರ್ (November) ಒಳಗೆ ನಡೆಸ್ತಿವಿ ನಮ್ಮ ನಾಯಕರಿಗೆ ಈ ಬಗ್ಗೆ ಮನವಿ ಮಾಡುತ್ತೇವೆ ಎಂದಿದ್ದಾರೆ.


ಸದ್ಯ ರಾಜಧಾನಿಯಲ್ಲಿ ಈಗ ಕಾಂಗ್ರೆಸ್ ಬಹುಮತ ಹಾಗೂ ಪ್ರಾಬಲ್ಯ ಹೊಂದಿದೆ.ಕಾಂಗ್ರೆಸ್ ನಾಯಕರು, ಮಾಜಿ ಸದಸ್ಯರು ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ನಾಯಕರಿಗೆ ಮಾನವಿ ಮಾಡಿದ್ದಾರೆ. ಈ

ಚುನಾವಣೆಯನ್ನು ನವೆಂಬರ್ ಒಳಗೆ ಮಾಡಿದರೆ ಹೆಚ್ಚು ಸ್ಥಾನ ಗಳಿಸಬಹುದು. ಕೋರ್ಟ್‌ನಲ್ಲಿರುವ (Court) ಪ್ರಕರಣವನ್ನು ಆದಷ್ಟು ಬೇಗ ಇತ್ಯರ್ಥ ಮಾಡಿಕೊಂಡು ಚುನಾವಣೆ ನಡೆಸಿ ಎಂದು ಹೈಕಮಾಂಡ್ ಗೆ 3

(High Command) ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದಾರೆ.


ಕೈ ನಾಯಕರೇ ಮೊದಲಿನಿಂದಲೂ ಚುನಾವಣೆ ನಡೆಸಲು ಒತ್ತಾಯ ಮಾಡುತ್ತಿದ್ದದ್ದು.ಬಿಬಿಎಂಪಿ (BBMP) ಪಾಲಿಕೆ ಚುನಾವಣೆ ನಡೆದರೆ ಸಾರ್ವಜನಿಕರ ತೊಂದರೆ ನಿವಾರಣೆ,ಸ್ವಲ್ಪ ಮಾಟ್ಟಿಗೆ ವಾರ್ಡ್ಗಳ ಅಭಿವೃದ್ಧಿ

ಅಗಬಹುದು ಎಂಬ ನಿರೀಕ್ಷೆಯಲ್ಲಿರುವ ಜನರು ಸದ್ಯ ಪಾಲಿಕೆಯ ಚುನಾವಣೆಯನ್ನ ಎದುರು ನೋಡ್ತಿದ್ದಾರೆ.

ರಶ್ಮಿತಾ ಅನೀಶ್

Exit mobile version