ಬಿಬಿಎಂಪಿ ಚುನಾವಣೆ ಅಂದ್ರೆ ಬಿಜೆಪಿಗೆ ಅಲರ್ಜಿನಾ; ಮತ್ಯಾಕೆ ಮೂರು ವರ್ಷವಾದ್ರೂ ಚುನಾವಣೆ ನಡೆಸುತ್ತಿಲ್ಲ

Bengaluru: ಹೌದು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(BBMP) ಅನಾಥವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಪಾಲಿಕೆಗೆ(bbmp not conducting elections) ಮೂರು ವರ್ಷಗಳಿಂದ ಚುನಾವಣೆಯೇ ನಡೆದಿಲ್ಲ. ಪಾಲಿಕೆಗೆ ಮೇಯರ್‌, ಆಡಳಿತ ಪಕ್ಷ, ವಿರೋಧ ಪಕ್ಷಗಳಿಲ್ಲದೆ ಪ್ರಜೆಗಳ ದನಿಗೆ ಬೆಲೆಯೇ ಇಲ್ಲದಂತಾಗಿದೆ.

ಈ ಬಗ್ಗೆ ನ್ಯಾಯಾಲಯ ಹಲವು ಬಾರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ್ರೂ ನಮ್ಮನ್ನಾಳುತ್ತಿರುವ ಬಿಜೆಪಿ(BJP) ಸರ್ಕಾರಕ್ಕೆ ಬಿಬಿಎಂಪಿ ಎಲೆಕ್ಷನ್‌ ಅಂದ್ರೆ ಯಾಕೋ ಅಲರ್ಜಿ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯು ಪ್ರತಿಸಾರಿ ಐದು ವರ್ಷಕ್ಕೊಮ್ಮೆ ನಡೆಯುತ್ತದೆ.

2015ರಲ್ಲಿ ಬಿಬಿಎಂಪಿ ಚುನಾವಣೆ ಆಗಿತ್ತು, ನಂತರ 2020ರಲ್ಲಿ ಬಿಬಿಎಂಪಿ ಚುನಾವಣೆ ನಡೆಯಬೇಕಾಗಿತ್ತು.

ಆದರೆ ಈಗ 2023 ಜನೆವರಿ ತಿಂಗಳು ಪ್ರಾರಂಭವಾಗಿ ಮುಕ್ತಾಯ ಹಂತದಲ್ಲಿದೆ. ಈಗಾಗಲೇ ಬಿಬಿಎಂಪಿ ಚುನಾವಣೆ ಆರಂಭವಾಗಿ ಹೊಸ ಪ್ರತಿನಿಧಿಗಳು ಆಡಳಿತದ ಚುಕ್ಕಾಣೆ ಹಿಡಿದು ಮೂರು ವರ್ಷಗಳು ಕಳೆಯಬೇಕಾಗಿತ್ತು.

ಆದರೆ ಇನ್ನು ಕೂಡ ಬಿಬಿಎಂಪಿ ಎಲೆಕ್ಷನ್(BBMP Election) ಆಗದಿರುವುದು , ಹಲವಾರು ಅನುಮಾನಗಳಿಗೆ ಏಡೆಮಾಡಿಕೊಟ್ಟಿದೆ.

ಬಹು ನಿರೀಕ್ಷಿತ ಚುನಾವಣೆ ವಿಳಂಬವಾಗಲು ಬಿಬಿಎಂಪಿ ವಾರ್ಡ್‌ಗಳನ್ನು ಮರುವಿನ್ಯಾಸ ಮಾಡುವ ಅಗತ್ಯವು ಒಂದು ಪ್ರಮುಖ ಕಾರಣ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ.

ಸೆಪ್ಟೆಂಬರ್ 2020 ರಿಂದ ಇಲ್ಲಿವರೆಗೆ ಬಿಬಿಎಂಪಿಗೆ ಚುನಾಯಿತ ಕೌನ್ಸಿಲ್ ಇಲ್ಲ. ಜನರ ಪ್ರತಿನಿಧಿಗಳು ಇಲ್ಲದ ಬೆಂಗಳೂರಿನ ಜನತೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.

ಇದಕ್ಕೆ ಅತ್ಯುತ್ತಮ ಉದಾಹರಣೆ Covid-19 ಸಾಂಕ್ರಾಮಿಕದ ನಿರ್ವಹಣೆಯಲ್ಲಾದ ಲೋಪಗಳು.


ಡಿಸೇಂಬರ್ 2020 ರಲ್ಲಿ ಆರು ವಾರಗಳಲ್ಲಿ 198 ವಾರ್ಡ್ಗಳಿಗೆ ಚುನಾವಣೆಯನ್ನು ನಿಗದಿಪಡಿಸುವಂತೆ ಕರ್ನಾಟಕ ಹೈಕೋರ್ಟ್(High Court) ಈ ಹಿಂದೆ ರಾಜ್ಯ ಚುನಾವಣೆ ಆಯೋಗಕ್ಕೆ ನಿರ್ದೇಶನ ನೀಡಿತ್ತು.

ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಖಚಿತ: ಸತ್ರೂ ಬಿಜೆಪಿ ಜೊತೆ ಮತ್ತೆ ಕೈಜೋಡಿಸಲ್ಲ; ನಿತೀಶ್‌ ಕುಮಾರ್‌

ಆದರೆ ಹೊಸ ಬಿಬಿಎಂಪಿ ಕಾಯ್ದೆದೊಂದಿಗೆ ಸರ್ಕಾರವು 198 ರಿಂದ 243 ಕ್ಕೆ ವಾರ್ಡ್ಗಳನ್ನು ಹೆಚ್ಚಿಸಿದೆ.

ಡಿಸೆಂಬರ್ ತಿಂಗಳಲ್ಲಿ ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಮೀಸಲಾತಿ ಹಾಗೂ ರಾಜಕೀಯ ಹಿಂದುಳಿರುವಿಕೆಯ ಕಾರಣವನ್ನು ಮುಂದಿಟ್ಟುಕೊಂಡು ನ್ಯಾಯಲಯಕ್ಕೆ ಮತ್ತೆ ಮೂರು ತಿಂಗಳ ಸಮಯವನ್ನು ಕೇಳಿತ್ತು.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ್ರೆ ವಿಧಾನಸಭೆ ಚುನಾವಣೆ ಬಳಿಕವೇ ಬಿಬಿಎಂಪಿ ಚುನಾವಣೆ ನಡೆಯಲಿದೆ ಎನ್ನುವುದು ಸ್ಪಷ್ಟವಾಗುತ್ತಿದೆ.

ಸೋಲಿನ ಭಯನಾ? : ಬಿಬಿಎಂಪಿ ಚುನಾವಣೆಯನ್ನು ನಿಗದಿತ ಸಮಯಕ್ಕೆ ನಡೆಸದಿರುವುದಕ್ಕೆ ಪ್ರಮುಖ ಕಾರಣ ಸರ್ಕಾರದ ವೈಫಲ್ಯ ಮತ್ತು ಬೆಂಗಳೂರಿನ ಅಭಿವೃದ್ಧಿಗೆ ಆದ ಹಿನ್ನಡೆ.

ಬೆಂಗಳೂರಿನ ಅನೇಕ ಭಾಗಗಗಳು ಇಂದಿಗೂ ಮೂಲಭೂತ ಸೌಕರ್ಯ ಕೊರತೆಗಳಿಂದ ಬಳಲುತ್ತಿದೆ.

ರಸ್ತೆಗಳ ಅವ್ಯವಸ್ಥೆ, ಚರಂಡಿ ವ್ಯವಸ್ಥೆ ಇಲ್ಲದಿರುವುದು. ನೀರಿನ ಸಮಸ್ಯೆ, ಕಸ ವಿಲೇವಾರ ಸಮಸ್ಯೆ.

ಹೀಗೆ ಬೆಂಗಳೂರು ಅವ್ಯವಸ್ಥೆಯ ಆಗರವಾಗುತ್ತಿದೆ. ಇದರಿಂದ ಜನ ಬೇಸತ್ತು ಹೋಗಿದ್ದಾರೆ.

ಹಾಗಾಗಿ ಆಡಳಿತ ಪಕ್ಷ ಚುನಾವಣೆಯನ್ನು ಮುಂದೂಡುತ್ತಾ, ಸಂವಿಧಾನಕ್ಕೆ ಅಪಚಾರ ಮಾಡುತ್ತಿದೆ ಅನ್ನೋದು ರಾಜಕೀಯ ತಜ್ಞರು ವಿಶ್ಲೇಷಣೆ.

ಅಭಿವೃದ್ಧಿಯ ನೆಪದಲ್ಲಿ ಸಾಲು ಸಾಲು ಹಗರಣಗಳು:

ಫ್ಲೈ ಓವರ್ ಹಗರಣ : ಯಾವುದೇ ಒಂದು ಕಾಮಗಾರಿ ನಡಿಯಬೇಕೆಂದರೆ ಟೆಂಡರ್ ಕರೆದು ಗುತ್ತಿಗೆ ನೀಡಿ ಕೆಲಸ ನಡೆಸಬೇಕು.

ವೆಸ್ಟ್ ಆಫ್ ಕಾರ್ಡ್(West of Chord) ರಸ್ತೆಯಿಂದ ಬಸವೇಶ್ವರ ನಗರಕ್ಕೆ(Basaveshwar Nagar) ಕಲ್ಪಿಸುವ ಫ್ಲೈ ಓವರ್ ಕಾಮಗಾರಿಗೆ ಟೆಂಡರ್ ಕರಿಯದೆ ಗುತ್ತಿಗೆ ನೀಡಲಾಗಿದೆ.

18.52 ಕೋಟಿ ವೆಚ್ಚದ ಒನ್ ವೇ ಪ್ಲೈವರ್ ಗೆ 23 ಕೋಟಿ ನೀಡಲಾಗುತ್ತಿದೆ ವೆಸ್ಟ್ ಆಫ್ ಕಾರ್ಡ್ ರೋಡಲ್ಲಿ 89.86 ಕೋಟಿಯ 3 ಪ್ಲೈಓವರ್ ಕಾಮಗಾರಿ ನಡೆಯುತ್ತಿದ್ದು. ಒಂದು ಪ್ಲೈಓವರ್ ಅರ್ಧಕ್ಕೆ ನಿಂತಿದೆ.

2 ವರ್ಷ ಆದರೂ ಒನ್ ವೇ ಕೆಲಸ ಮುಗಿಸದ ಕಂಪನಿಗೆ 2 ವೇ ಮಾಡಲು ಗುತ್ತಿಗೆ ನೀಡಿದ್ದು,

ಅಕ್ರಮವಾಗಿ ಈ ಕಾಂಟ್ರಾಕ್ಟನಲ್ಲಿ ಬಿಬಿಎಂಪಿ ಪ್ರಾಜೆಕ್ಟ್ ಚೀಫ್ ಇಂಜಿನಿಯರ್ ಲೋಕೇಶ್(Lokesh) ಭಾಗಿಯಾಗಿದ್ದಾರೆ ಅನ್ನೋ ಆರೋಪ ಕೇಳಿ ಬರುತ್ತಿದೆ.

ಇಂಥಾ ಒಂದಲ್ಲಾ ಎರಡಲ್ಲಾ ರಸ್ತೆ, ಫ್ಲೈ ಓವರ್‌, ಅಂಡರ್ ಪಾಸ್‌, ಸಿಮೆಂಟ್‌ ರಸ್ತೆ ಹೀಗೆ ಹತ್ತು ಹಲವು ಕಾಮಗಾರಿಗಳ ಹೆಸರಲ್ಲಿ ಅಧಿಕಾರಿಗಳು ಪಾಲಿಕೆಯನ್ನು ಕಮಿಷನ್ ದಂಧೆಯ ಕೂಪವನ್ನಾಗಿಸಿದ್ದಾರೆ.

ಕಮಿಷನ್‌ಗಾಗಿಯೇ ಕಾಮಗಾರಿಗಳನ್ನು ರೂಪಿಸಿ ಜನರ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ಟೀಕಿಸಿದ ರಷ್ಯಾ ವಿದೇಶಾಂಗ ಸಚಿವ

ಇನ್ನು ಜನಸಾಮಾನ್ಯರಿಗೆ ಆಮೆಗತಿಯ, ಅವೈಜ್ಞಾನಿಕ(bbmp not conducting elections) ಕಾಮಗಾರಿಗಳಿಂದ ಆಗುತ್ತಿರುವ ತೊಂದರೆಗಳು ಬಿಬಿಎಂಪಿಯ ಅಧಿಕಾರಿಗಳಿಗೆ ಕಾಣಿಸುತ್ತಿಲ್ಲ.

ಅವರಿಗೆ ಅಕ್ರಮವಾಗಿ ದುಡ್ಡುಮಾಡುವ ಯೋಚನೆ ಒಂದೇ ಆಗಿರುತ್ತದೆ. ಇಂತಹ ಭ್ರಷ್ಟ ಅಧಿಕಾರಿ ಗಳು ಇರೋದರಿಂದ ನಮ್ಮ ಬೆಂಗಳೂರು(Bengaluru) ಅಭಿವೃದ್ಧಿಯಾಗದೆ ಇರುವುದು.

ಅದರಲ್ಲೂ ಮಳೆ ಬಂದರೆ ಸಾಕು ಬೆಂಗಳೂರು ರಸ್ತೆಗಳು ಸಮುದ್ರದಂತಾಗುತ್ತವೆ. ಪ್ರತೇಕ ಕಾಲುವೆಗಳಿಲ್ಲ, ರಸ್ತೆಯಲ್ಲಿ ತೆರೆದಗುಂಡಿಗಳು ಹಾಗೆ ಇರುತ್ತವೆ.

ಒಂದು ರಸ್ತೆಯ ಕಾಮಗಾರಿ ಪೂರ್ಣ ಗೊಳ್ಳಲು 4ತಿಂಗಳು ಮಾತ್ರ ಅವಧಿ ಇರುತ್ತೆ. ಗುತ್ತಿಗೆದಾರರು ಮಾತ್ರ ವಿಳಂಬರೀತಿಯ ಕಾಮಗಾರಿಮಾಡಿ ಒಂದುವರ್ಷ ಆದರೂ ಕಾಮಗಾರಿ ಮುಗಿಸಿರುವುದಿಲ್ಲ.

ಕೋಟಿ ಕೋಟಿ ರೂಪಾಯಿ ವೆಚ್ಚವು ಬಿಡುಗಡೆ ಆದರೂ,ಕಳಪೆಮಟ್ಟದ ಕಾಮಗಾರಿ ನಿರ್ಮಾಣ ಮಾಡಿ, ಅಪಘಾತಕ್ಕೆ ಎಡೆಮಾಡಿ ಸಾರ್ವಜನಿಕರ ಜೀವದ ಜೊತೆ ಆಟವಾಡುತ್ತಾರೆ.


ರಾಜ್ಯ ಸರ್ಕಾರವು ಬಿಬಿಎಂಪಿ ಚುನಾವಣೆಯನ್ನು ನಿಗದಿತ ಸಮಯಕ್ಕೆ ನಡೆಸದೆ ಪಾಲಿಕೆಯನ್ನು ಪಾಪರ್‌ ಮಾಡಿದೆ. ಪಾಲಿಕೆ ಬೊಕ್ಕಸ ಖಾಲಿಯಾಗಿದೆ ಎಂದು ಹೇಳಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಆಗಿರುವ ಅವಮಾನ ಅಲ್ಲದೆ ಮತ್ತಿನ್ನೇನು?

Exit mobile version