BBMP ಬೆಂಕಿ: ಕೇಂದ್ರ ಕಚೇರಿ ಆವರಣದ ಲ್ಯಾಬ್‌ನಲ್ಲಿ ಬೆಂಕಿ ದುರಂತ : ಮುಖ್ಯ ಎಂಜಿನಿಯರ್‌ ಸೇರಿ 9 ಮಂದಿ ಸ್ಥಿತಿ ಗಂಭೀರ

Bengaluru (ಆ.12): ಬೃಹತ್ ಬೆಂಗಳೂರು ಮಹಾನಗರಪಾಲಿಕೆ (BBMP office lab fire) ಪ್ರಧಾನ ಕಚೇರಿಯ ಕಟ್ಟಡದಲ್ಲಿರುವ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ

(Lab) ಶುಕ್ರವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಪ್ರಯೋಗಾಲಯದ ಮುಖ್ಯ ಎಂಜಿನಿಯರ್(Engineer) ಸೇರಿದಂತೆ ಒಂಬತ್ತು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಂಜೆ 5 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಘಟನೆಯಲ್ಲಿ ಪ್ರಯೋಗಾಲಯದ ಮುಖ್ಯ ಎಂಜಿನಿಯರ್ ಶಿವಕುಮಾರ್ (Shiva Kumar), ಕಾರ್ಯಪಾಲಕ ಎಂಜಿನಿಯರ್‌ಗಳಾದ ಕಿರಣ್, ಸಂತೋಷ್ ಕುಮಾರ್,

ವಿಜಯಮಾಲಾ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀಧರ್, ಪ್ರಥಮ ದರ್ಜೆ ಸಹಾಯಕ ಸಿರಾಜ್, ಆಪರೇಟರ್ ಜ್ಯೋತಿ, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಶ್ರೀನಿವಾಸ, ಕಂಪ್ಯೂಟರ್

ಆಪರೇಟರ್ ಮನೋಜ್ ಗಾಯಗೊಂಡಿದ್ದಾರೆ. ಅಪಘಾತದಲ್ಲಿ 35% ರಿಂದ 40% ಸುಟ್ಟಗಾಯಗಳೊಂದಿಗೆ ಒಂಬತ್ತು ಜನರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ

(Victoria Hospital) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಈ ಘಟನೆ?:
ಬಿಬಿಎಂಪಿ ಕೇಂದ್ರ ಕಚೇರಿ ಕಟ್ಟಡದ 2ನೇ ಮಹಡಿಯ ಅನೆಕ್ಸ್‌ನಲ್ಲಿ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯ ಮತ್ತು ಕಚೇರಿ ಇದೆ. ಬಿಬಿಎಂಪಿ ಕಾಮಗಾರಿಗಳಿಗೆ ಸಂಬಂಧಿತ ಸಾಮಗ್ರಿಗಳನ್ನು

ಇಲ್ಲಿ ಗುಣಮಟ್ಟ ಪರೀಕ್ಷೆ ಮಾಡಲಾಗುತ್ತದೆ. ವಸ್ತುವಿನ ಗುಣಮಟ್ಟವನ್ನು ವೈಜ್ಞಾನಿಕವಾಗಿ ರಾಸಾಯನಿಕ (Chemical) ಪದಾರ್ಥಗಳೊಂದಿಗೆ ವಸ್ತುಗಳ ಗುಣಮಟ್ಟ ಪರೀಕ್ಷಿಸಲಾಗುತ್ತದೆ.

ಇದನ್ನೂ ಓದಿ : ಕೊಟ್ಟ ಮಾತಿನಂತೆ ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇವೆ : ಸಿಎಂ ಸಿದ್ದರಾಮಯ್ಯ

ಬೆಂಜಿನ್‌(Benzene) ರಾಸಾಯನಿಕ ಬಳಸಿ ಪರೀಕ್ಷೆ ಮಾಡುವಾಗ ಸಂಜೆ 5 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದೆ. ಈ ವೇಳೆ ಮೂರು ಹಾಟ್‌ ಏರ್‌

ಓವನ್‌(Hot air Oven) ಪ್ರಯೋಗಾಲಯದಲ್ಲಿ ಇತ್ತು ಈ ಪೈಕಿ ಒಂದು ಓವನ್‌ಗೆ ಬೆಂಕಿ ತಾಕಿ ಸ್ಫೋಟಗೊಂಡಿದೆ. ಹೀಗೆ ಉಂಟಾಗಿರುವ ಸ್ಫೋಟದ ರಭಸಕ್ಕೆ ಇಡೀ

ಪ್ರಯೋಗಾಲಯಕ್ಕೆ ಬೆಂಕಿ (BBMP office lab fire) ಆವರಿಸಿರುವ ಸಾಧ್ಯತೆಯಿದೆ.

ಸ್ಫೋಟ ನಡೆದಿದ್ದ ಸಂದರ್ಭದಲ್ಲಿ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದ ಮುಖ್ಯ ಇಂಜಿನಿಯರ್ ಸೇರಿದಂತೆ ಒಂಬತ್ತು ಜನರು ಬೆಂಕಿಯಲ್ಲಿ ಗಾಯಗೊಂಡಿದ್ದಾರೆ. ಇವರೆಲ್ಲರೂ ತಮ್ಮ ಪ್ರಾಣ

ಉಳಿಸಿಕೊಳ್ಳಲು ಹೊರಗೆ ಓಡಿ ಬಂದಿದ್ದರು ಈ ವೇಳೆ ಜನಸಾಮಾನ್ಯರು ಹಾಗೂ ನೌಕರರು ಧಾವಿಸಿ ಒಂಬತ್ತು ಮಂದಿಯನ್ನು ರಕ್ಷಿಸಿ ಮೈ ಮೇಲೆ ಮುಖಕ್ಕೆ ನೀರು ಚಿಮುಕಿಸಿ ಬೆಂಕಿ ನಂದಿಸಿದರು.

ಬೆಂಕಿಯ ವಿಷಯ ತಿಳಿದ ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳು, ಹಲಸೂರು ಗೇಟ್ (Halasuru Gate) ಠಾಣೆ ಪೊಲೀಸರು (Police) ಮತ್ತು ಅಗ್ನಿಶಾಮಕ ದಳದವರು (Fire Brigade)

ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಆರಂಭಿಸಿದರು.

ಇದನ್ನೂ ಓದಿ : 2025-26ನೇ ಸಾಲಿನಿಂದ 1ನೇ ತರಗತಿ ಪ್ರವೇಶ ಪಡೆಯಲು ಮಗುವಿಗೆ 6 ವರ್ಷ ಕಡ್ಡಾಯ; ಹೈಕೋರ್ಟ್

ಮತ್ತೊಂದೆಡೆ, ತಕ್ಷಣ ಆಂಬ್ಯುಲೆನ್ಸ್‌ಗೆ(Ambulance) ಕರೆ ಮಾಡಿ ಗಾಯಾಳುಗಳನ್ನು ಹತ್ತಿರದ ಸೇಂಟ್ ಮಾರ್ಥಾಸ್(St. Martha’s) ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಲ್ಲಿ ಪ್ರಾಥಮಿಕ

ಚಿಕಿತ್ಸೆ(Primary treatment) ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಒಂಬತ್ತು ಮಂದಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಟ್ಟ ಗಾಯದ ಘಟಕದಲ್ಲಿ

(Burn Unit) ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಪ್ರಕರಣದ ಕುರಿತು ಹಲಸೂರು ಗೇಟ್‌ ಪೊಲೀಸ್ ಇಲಾಖೆ ಪ್ರಕರಣವನ್ನು ತೆರೆದಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸ್

ಅಧಿಕಾರಿಗಳು ತಿಳಿಸಿದ್ದಾರೆ.

ಕಂಪ್ಯೂಟರ್‌ ಮತ್ತು ಕಡತಗಳು ಬೆಂಕಿಗಾಹುತಿ:

ಪ್ರಯೋಗಾಲಯದ ಉಪಕರಣಗಳು,ಬಿಬಿಎಂಪಿಯ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳು(Files), ಪೀಠೋಪಕರಣಗಳಿಗೆ ಹಾಗೂ ಕಂಪ್ಯೂಟರ್‌ಗಳಿಗೆ(Computer) ಪ್ರಯೋಗಾಲಯದಲ್ಲಿ

ಸಂಭವಿಸಿದ ಬೆಂಕಿ ಅವಘಡದಲ್ಲಿ ಹಾನಿಯಾಗಿದೆ. ಬಿಬಿಎಂಪಿ ಅಧಿಕಾರಿಗಳೇ ಯಾವ ಕಾಮಗಾರಿಗೆ ಸಂಬಂಧಿಸಿದ ಕಡತಗಳು ಮತ್ತು ಎಷ್ಟುಕಡತಗಳು ಬೆಂಕಿಗಾಹುತಿಯಾಗಿವೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕಿದೆ.

ಎಫ್‌ಎಸ್‌ಎಲ್‌ ತಂಡ ಭೇಟಿ:

ವಿಧಿವಿಜ್ಞಾನ ಪ್ರಯೋಗಾಲಯ(Forensic Science Laboratory)ದ ತಜ್ಞರ ತಂಡ ಬೆಂಕಿ ಅವಘಡದ ಹಿನ್ನೆಲೆಯಲ್ಲಿ ಗುಣ ನಿಯಂತ್ರಣ ಪ್ರಯೋಗಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.

ಪ್ರಯೋಗಾಲಯಕ್ಕೆ ಈ ಬೆಂಕಿ ಅನಾಹುತದಿಂದ ಸುಟ್ಟಿರುವ ಕೆಲ ವಸ್ತುಗಳ (BBMP office lab fire) ಮಾದರಿಗಳನ್ನು ಸಂಗ್ರಹಿಸಿ ಕೊಂಡೊಯ್ದರು.

ರಕ್ತ ಸೋರುತ್ತಿತ್ತು: ಪ್ರತ್ಯಕ್ಷದರ್ಶಿ ಹೇಳಿಕೆ

ಪ್ರಯೋಗಾಲಯದಲ್ಲಿ ಸಂಜೆ 4.45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಈ ವೇಳೆ ಒಟ್ಟು 9 ಮಂದಿ ಅದರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಚೀರಾಡುತ್ತಾ ಬೆಂಕಿಗೆ ಸಿಲುಕಿ ಹೊರಗೆ ಬಂದರು.

ಈ ವೇಳೆ ಅಲ್ಲಿದ್ದ ನಾವೆಲ್ಲ ಅವರ ಮೈ ಮೇಲೆ ನೀರು ಹಾಕಿ ಬೆಂಕಿ ನಂದಿಸಿದೆವು.ಈ ಸಂದರ್ಭದಲ್ಲಿ ಹಲವರ ಕೈಗಳಿಂದ ಮತ್ತು ಮುಖದಿಂದ ಕೂಡ ರಕ್ತ(Blood) ಸೋರುತ್ತಿತ್ತು. ಕೈಗಳನ್ನು ಮಡಿಚಲು

ಗಾಯಾಳುಗಳು ಬಹಳ ಕಷ್ಟಪಡುತ್ತಿದ್ದರು ಎಂದು ಈ ಘಟನೆ ನಡೆದಾಗ ಅಲ್ಲೇ ಇದ್ದ ಪ್ರತ್ಯಕ್ಷದರ್ಶಿ ಕಮಲಮ್ಮ(Kamalamma) ಮಾಹಿತಿ ನೀಡಿದರು.

ರಶ್ಮಿತಾ ಅನೀಶ್

Exit mobile version