ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸುವರಿಗೆ ಶಿಕ್ಷಣ ಸಚಿವರ ನೇರ ಪ್ರಶ್ನೆಗಳು!

Textbook

ಪಠ್ಯಪುಸ್ತಕ ಪರಿಷ್ಕರಣೆ(Textbook Syllabus Revised) ವಿರೋಧಿಸುವರಿಗೆ ಶಿಕ್ಷಣ ಸಚಿವರ(Education Minister) ನೇರ ಪ್ರಶ್ನೆಗಳು.

ನೂತನ ಪಠ್ಯಪುಸ್ತಕ ಪರಿಷ್ಕರಣೆಯನ್ನು ವಿರೋಧಿಸುತ್ತಿರುವರಿಗೆ ರಾಜ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್(BC Nagesh) ಅವರು ನೇರವಾಗಿ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಹಿಂದೆ ಬರಗೂರು ರಾಮಚಂದ್ರಪ್ಪ(Bargur Ramachandrappa) ಸಮಿತಿ ಮಾಡಿದ್ದ ಪರಿಷ್ಕರಣೆ ಮತ್ತು ರೋಹಿತ್ ಚಕ್ರತೀರ್ಥ(Rohith Chakratheertha) ನೇತೃತ್ವದ ಸಮಿತಿ ಮಾಡಿರುವ ಪರಿಷ್ಕರಣೆಯನ್ನು ಸಾಮ್ಯತೆ ಮಾಡಿದಾಗ ಮಾತ್ರ ಸತ್ಯ ತಿಳಿಯುತ್ತದೆ.

ಹೀಗಾಗಿ ಕಾಂಗ್ರೆಸ್ ಮಾಡಿದ್ದ ಪರಿಷ್ಕರಣೆಗಳ ಉದಾಹರಣೆಗಳ ಸಮೇತ ಶಿಕ್ಷಣ ಸಚಿವರು ನೂತನ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸುವರಿಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಜೊತೆಗೆ ಸ್ಪಷ್ಟನೆಯನ್ನು ನೀಡಿದ್ದಾರೆ.

  1. ಜವಾಹರ ಲಾಲ್ ನೆಹರೂ ಅವರು ತಮ್ಮ ಮಗಳಿಗೆ ಬರೆದ ಪತ್ರವನ್ನು ಮಕ್ಕಳು ಏಕೆ ಓದಬೇಕು..? ಈ ಹಿಂದೆ ಬರಗೂರು ಸಮಿತಿ ‘ಸಿಂಧೂ ಸಂಸ್ಕೃತಿ’ ಕುರಿತಾದ ಪಠ್ಯವನ್ನು ತೆಗೆದು ನೆಹರೂ ಪಠ್ಯ ಸೇರಿಸಿದ್ದು ಸರಿಯೇ.?
  2. ಬೆಂಗಳೂರು ನಗರದ ಕುರಿತಾದ ಪಠ್ಯವಿತ್ತು. ಆದರೆ ಅದರ ನಿರ್ಮಾತೃ ಕೆಂಪೇಗೌಡರ ಕುರಿತು ಒಂದು ಸಾಲು ಕೂಡಾ ಇರಲಿಲ್ಲ ಯಾಕೆ?
  3. ಹಿಂದೆ ಇದ್ದ ‘ಏರುತಿಹದು, ಹಾರುತಿಹದು ನಮ್ಮ ಬಾವುಟ’ ಪಾಠವನ್ನು ಬರಗೂರು ಸಮಿತಿ ತೆಗೆದು ಹಾಕಿತ್ತು. ಹಾಗಿದ್ದರೆ ಪಾಕಿಸ್ತಾನ ಬಾವುಟ ಹಾರಿಸಿದರೆ ಇವರಿಗೆ ಖುಷಿಯೇ?
  4. ಹೆಡಗೇವಾರ್ ಅವರ ಭಾಷಣದಲ್ಲಿ ಯಾವುದೇ ದೇಶದ್ರೋಹದ ಅಂಶಗಳಿಲ್ಲ. ಅದನ್ನು ಮಕ್ಕಳು ಓದಿದರೆ ಏನು ಸಮಸ್ಯೆ?
  5. ಬರಗೂರು ಸಮಿತಿ ಲಿಂಗಾಯಿತರಾಗಿದ್ದ ಪ್ರೊ.ಸಾ.ಶಿ.ಮರುಳಯ್ಯ, ಸಂಗಮೇಶ್ ನಿಡಗುಂದಿ, ಸಿದ್ದಯ್ಯ ಪುರಾಣಿಕ ಅವರ ಪಠ್ಯಗಳನ್ನು ಕೈಬಿಟ್ಟಿದ್ದು ಏಕೆ?
  6. ಬರಗೂರು ರೂಪಿಸಿದ್ದ ಪಠ್ಯದಲ್ಲಿ 19 ಬ್ರಾಹ್ಮಣ ಲೇಖಕರ ಅಧ್ಯಾಯಗಳಿದ್ದವು. ಅದನ್ನು ಯಾವ ಪಠ್ಯಪುಸ್ತಕ ಎನ್ನಬೇಕು?
  7. ‘ಹಿಂದೂ ಮಹಾಸಾಗರ’ವನ್ನು ‘ಇಂಡಿಯನ್ ಓಷನ್’ ಎಂದು ಬದಲಾವಣೆ ಮಾಡಿದ್ದು ಏಕೆ?
  8. ಟಿಪ್ಪುವಿನ ಪಠ್ಯವನ್ನು 6 ಪುಟಕ್ಕೆ ಹೆಚ್ಚಿಸಿದ್ದ ಬರಗೂರು ಸಮಿತಿ ಮೈಸೂರು ಮಹಾರಾಜರ ಕುರಿತು ನಾಲ್ಕು ಸಾಲುಗಳಲ್ಲಿ ಮುಗಿಸಿದ್ದು ಏಕೆ?
  9. ಅಂಬೇಡ್ಕರ್ ಮತ್ತು ಗಾಂಧಿಜೀ ಪಠ್ಯವನ್ನು ಕೈಬಿಟ್ಟಿದ್ದು ಯಾಕೆ? ಈಗ ನಾವು ಅವುಗಳನ್ನು ಮರುಸೇರ್ಪಡೆ ಮಾಡಿದ್ದೇವೆ.
  10. ಸಂಗೋಳಿ ರಾಯಣ್ಣ, ರಾಣಿ ಅಬ್ಬಕ್ಕ, ರಾಣಿ ಚೆನ್ನಮ್ಮ, ವೀರ ಮದಕರಿ ನಾಯಕರ ಪಠ್ಯವನ್ನು ಬರಗೂರು ಸಮಿತಿ ತೆಗೆದು ಹಾಕಿತ್ತು. ಈಗ ಅದನ್ನು ಮರು ಸೇರ್ಪಡೆ ಮಾಡಿದ್ದೇವೆ. ಅದು ತಪ್ಪಾ?
Exit mobile version