ಸ್ಮಾರ್ಟ್‌ಫೋನನ್ನು EMI ನಲ್ಲಿ ಖರೀದಿಸುವ ಮುನ್ನ ಎಚ್ಚರಿಕೆ: ಇದೊಂದು ಟ್ರ್ಯಾಪ್

ದಿನಗಳು ಕಳೆದಂತೆ ಸ್ಮಾರ್ಟ್​ಫೋನನ್ನು (be aware of emi phone) ಬಳಸುವವರ ಸಂಖ್ಯೆಯು ಹೆಚ್ಚುತ್ತಿದು, ಸ್ಮಾರ್ಟ್​ಫೋನನ್ನು EMI ಮೂಲಕ ಖರೀದಿಸಬೇಕೇ ಅಥವಾ ಬೇಡವೇ

ಎಂಬ ಪ್ರಶ್ನೆ ಎಲ್ಲರಲ್ಲೂ ಇರುತ್ತದೆ. ಯಾವುದೇ ಪ್ರಾಡಕ್ಟ್ ಗಳನ್ನು (Product) ಖರೀದಿಸುವುದರಿಂದ ಅನುಕೂಲಗಳು ಇದೆ ಜೊತೆಗೆ ಅನಾನುಕೂಲಗಳು ಸಹ ಇವೆ. ಅದು ಹೇಗೆ ಇದರಿಂದ

ಯಾವರೀತಿ ನಷ್ಟ ಆಗುತ್ತದೆ (be aware of emi phone) ಎಂಬುದನ್ನು ತಿಳಿಯೋಣ.

ಹೆಚ್ಚಿನವರು ದುಬಾರಿ ಸ್ಮಾರ್ಟ್‌ಫೋನ್ ಖರೀದಿಸಲು ಮುಂದಾದರೆ ಹಾಗೂ ಒಂದು ವೇಳೆ ಬಜೆಟ್ (Budget) ಕಡಿಮೆ ಇದ್ದರೆ ಆಯ್ಕೆ ಮಾಡುವುದು ಮೊದಲಿಗೆ ಇಎಂಐ ಆಯ್ಕೆ. ಒಂದೇ ಬಾರಿಗೆ

ಪೂರ್ಣ ಮೊತ್ತವನ್ನು ಪಾವತಿಸುವ ಬದಲು ಮಾಸಿಕ ಕಂತುಗಳ ಮೂಲಕ ಅಂದರೆ ಇಎಂಐ ಮೂಲಕ ಸ್ಮಾರ್ಟ್​ಫೋನ್ ಅನ್ನು ಖರೀದಿಸುತ್ತಾರೆ.

ಈಗ ಹೆಚ್ಚಿನ ಇ-ಕಾಮರ್ಸ್ (E-Commerce) ಸೈಟ್‌ಗಳು ಮತ್ತು ಚಿಲ್ಲರೆ ಅಂಗಡಿಗಳು ಫೋನ್‌ಗಳಿಗೆ ಸುಲಭವಾಗಿ ಮಾಸಿಕ EMI ಆಯ್ಕೆಯನ್ನು ಒದಗಿಸುತ್ತಿವೆ. ಹೀಗಾಗಿ ಇದು ಸವಾಲಿನ ಕೆಲಸ ಅಲ್ಲ.

3 ರಿಂದ 36 ತಿಂಗಳವರೆಗೆ EMI ಗಳ ಮೂಲಕ ವಿವಿಧ ಬ್ಯಾಂಕ್‌ಗಳಿಂದ ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಒಂದು ಪ್ಲಾಟ್‌ಫಾರ್ಮ್‌ನಿಂದ (Platform) ಪಡೆಯಬಹುದು. ಡೆಬಿಟ್ ಮತ್ತು

ಕ್ರೆಡಿಟ್ ಕಾರ್ಡ್‌ಗಳು ಸೇರಿದಂತೆ ಇತರ ವಿಧಾನಗಳ ಮೂಲಕ ಕೂಡ ಈ ಸೌಲಭ್ಯಗಳು ಲಭ್ಯವಿರುತ್ತದೆ. ಆದರೂ ಹೆಚ್ಚಿನ ಬ್ಯಾಂಕುಗಳು 12 ರಿಂದ 18 ರಷ್ಟು ವಾರ್ಷಿಕ ಬಡ್ಡಿ ದರದಲ್ಲಿ ಇಎಂಐ ಗಳನ್ನು ಕೊಡುತ್ತವೆ.

ಇಎಂಐ ಎಂದರೇ
ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಐಫೋನ್ 12 ಅನ್ನು ತೆಗೆದುಕೊಳ್ಳುತ್ತೀರಾ ಎಂದು ಅಂದುಕೊಳ್ಳೋಣ. ಆಗ ಫ್ಲಿಪ್‌ಕಾರ್ಟ್‌ನಲ್ಲಿ ಅದರ 64GB ಸ್ಟೋರೇಜ್ (Storage) ರೂಪಾಂತರವನ್ನು

ರೂ. 38,999 ಗೆ ಖರೀದಿಸಬಹುದು. 13 ಪ್ರತಿಶತದಷ್ಟು 3 ತಿಂಗಳ EMI ಯೋಜನೆಯನ್ನು ಆರಿಸಿದರೆ, ನೀವು ತಿಂಗಳಿಗೆ 13,283 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಈ ರೀತಿಯ ಪ್ರಕ್ರಿಯೆಯನ್ನು

ಇಎಂಐ ಅಂತ ಕರೆಯಬಹುದು.

ಹಾಗಾಗಿ ಈ ಐಫೋನ್‌ಗೆ (Iphone) ನೀವು 39,849 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಅಂದರೆ 850 ರೂ. ಹೆಚ್ಚುವರಿಯಾಗಿ ಕೊಡಬೇಕಾಗುತ್ತದೆ. ಒಂದುವೇಳೆ 15 ಪ್ರತಿಶತದ 36-ತಿಂಗಳ

EMI ಯೋಜನೆಯನ್ನು ಆರಿಸಿದರೆ, ನೀವು ತಿಂಗಳಿಗೆ 1352 ರೂಪಾಯಿಗಳನ್ನು ವೆಚ್ಚ ಮಾಡಬೇಕಾಗುತ್ತದೆ. ಆಗ ಈ ಫೋನ್‌ಗಾಗಿ ಒಟ್ಟು 48,672 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ.

ಅಂದರೆ 38,999 ರೂ. ಫೋನ್‌ಗೆ ನೀವು 9,673 ರೂಪಾಯಿಗಳನ್ನು ಹೆಚ್ಚು ಕಟ್ಟಬೇಕಾಗುತ್ತದೆ.

ಖರೀದಿಸಬೇಕೇ?:
ಫೋನ್ ಅನ್ನು EMI ನಲ್ಲಿ ಖರೀದಿಸಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುತ್ತದೆ. EMI ನಲ್ಲಿ ಯಾವುದೇ ಉತ್ಪನ್ನವನ್ನು ಖರೀದಿಸುವುದರಿಂದ ಅನುಕೂಲಗಳ ಜೊತೆಗೆ ಅನಾನುಕೂಲಗಳು

ಇದ್ದು, ಅನೇಕ ಬಾರಿ ಬಳಕೆದಾರರು ಖರೀದಿಸುವ ಸಮಯದಲ್ಲಿ ಯಾವ ವೆಚ್ಚದ EMI ಆಯ್ಕೆಯನ್ನು ಪಡೆಯುತ್ತಾರೆ ಎಂಬುದು ಮುಖ್ಯವಾಗಿರುತ್ತದೆ.

ಸ್ಮಾರ್ಟ್​ಫೋನ್ ಖರೀದಿಸಲೇಬೇಕು ಎಂದಿದ್ದರೆ ಸ್ಮಾರ್ಟ್​ಫೋನ್ (Smartphone) ಬಿಡುಗಡೆ ಎಡಿಎ ಮೇಲೆ ಅದರ ಬೆಲೆ ಮೂರು-ನಾಲ್ಕು ತಿಂಗಳು ಕಳಿದ ಬಳಿಕ ಕುಸಿಯುತ್ತದೆ. ಆಗ ನೀವು

ಸ್ಮಾರ್ಟ್​ಫೋನ್ ಖರೀದಿಸಬಹುದು. ಆದ್ದರಿಂದ ಹೆಚ್ಚಿನ ಬಡ್ಡಿದರದಲ್ಲಿ ಅದನ್ನು ಖರೀದಿಸುವುದು ಉತ್ತಮ ಆಯ್ಕೆಯಲ್ಲ.

ಇದನ್ನು ಓದಿ: ಪ್ರಕೃತಿ ವಿಕೋಪದಂತಹ ಸಮಯದಲ್ಲಿ ನಿಮ್ಮ ಮೊಬೈಲ್‌ಗೆ ಬರುತ್ತೆ ಎಚ್ಚರಿಕೆ ಸಂದೇಶ: ಪ್ರಯೋಗಾರ್ಥ ಪರೀಕ್ಷೆ

Exit mobile version