ಲಿಪ್ ಸ್ಟಿಕ್ ಮಾಸದಂತೆ ಹೆಚ್ಚು ಕಾಲ ಇರಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ!

ಲಿಪ್ ಸ್ಟಿಕ್ ಯಾವ ಹೆಣ್ಣುಮಕ್ಕಳಿಗೆ ಇಷ್ಟವಾಗುವುದಿಲ್ಲ ಹೇಳಿ ಅದರಲ್ಲೂ ಹುಡುಗಿಯರು ಊಟ ಬಿಟ್ಟರೂ ಕೂಡ ಲಿಪ್ ಸ್ಟಿಕ್ ಮಾತ್ರ ಬಿಡುವುದಿಲ್ಲ. ಇದು ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಸಹಾಯ ಮಾಡುತ್ತದೆ. ಹಾಗಿದ್ರೆ ಲಿಪ್ ಸ್ಟಿಕ್ ಮಾಸದಂತೆ ಹೆಚ್ಚು ಕಾಲ ಇರಲು ಏನು ಮಾಡಬೇಕು ಎಂದು ಯೋಚಿಸ್ತಿದ್ರೆ ಈ ಲೇಖನವನ್ನು ಮಿಸ್ ಮಾಡ್ದೇ ಓದಿ.

ಮಾಯಿಶ್ಚರೈಸರ್:

ಈ ಒಣ ತುಟಿ ಅಥವಾ ಫ್ಲಾಪಿ ಲಿಪ್ ನಮ್ಮ ಲಿಪ್ ಸ್ಟಿಕ್  ಅನ್ನು ದೀರ್ಘ ಕಾಲ ಇರಲು ಬಿಡುವುದಿಲ್ಲ.ಇದಕ್ಕಾಗಿ ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಲಿಪ್ ಬಾಮ್ ಅಥವಾ ತೆಂಗಿನ ಎಣ್ಣೆಯನ್ನು ಹಚ್ಚುವುದು ಉತ್ತಮ.

ಈ ಲಿಪ್ ಸ್ಟಿಕ್ ಹಚ್ಚುವ ಮುನ್ನ ನಿಮ್ಮ ತುಟಿಯನ್ನು ಹತ್ತಿಯಿಂದ ಒರೆಸಿ ಆನಂತರ ಮೊದಲು ಲಿಪ್ ಬಾಮ್ ಅಥವಾ ಪೆಟ್ರೋಲ್ ಬಾಮ್ ಗಳನ್ನು ಹಚ್ಚಿ ತದನಂತರ ಲಿಪ್ ಸ್ಟಿಕ್ ಅಪ್ಲೈ ಮಾಡುವುದರಿಂದ ಲಾಂಗ್ ಲಾಸ್ಟಿಂಗ್ ಲಿಪ್ ಸ್ಟಿಕ್ ನಿಮ್ಮದಾಗಲಿದೆ.

ಮೊದಲು ಕನ್ಸೀಲರ್ ನಿಂದ ನಿಮ್ಮ ತುಟಿಯ ಹೊರಭಾಗವನ್ನು ಔಟ್ ಲೈನ್ ಆಗಿ ಮಾಡಿಕೊಳ್ಳಿ. ಇದು ಲಿಪ್ ಪ್ರೈಮರ್ ಆಗಿಯೂ ಕೂಡ ಕಾರ್ಯ ನಿರ್ವಹಿಸುತ್ತದೆ ಮತ್ತು ತುಟಿಯ ಅಂಚಿನಲ್ಲಿ ಕಾಣಿಸಿಕೊಳ್ಳುವ ಸೋರಿಕೆ ಮತ್ತು ಸ್ಲೆಡ್ಜಿಂಗ್ ಅಂತಹ ತೊಂದರೆಗಳನ್ನು ತಡೆಯುತ್ತದೆ. ಹೀಗೆ ಮಾಡುವುದರಿಂದ ತುಟಿಯ ಅಂಚಿನ ಸುತ್ತಲೂ ರಕ್ತಸ್ತ್ರಾವ ಕಡಿಮೆಯಾಗಿ ನಿಮ್ಮ ಲಿಪ್ ಸ್ಟಿಕ್ ಹೆಚ್ಚು ಕಾಲ ಉಳಿಯುತ್ತದೆ.

ಬ್ರಶ್ ಗಳನ್ನು ಬಳಸಿ:

ಲಿಪ್ ಸ್ಟಿಕ್ ಗಳನ್ನು ಅಪ್ಲೈ ಮಾಡಲು ಬ್ರಶ್ ಗಳನ್ನು ತಪ್ಪದೇ ಬಳಸಿ. 1 ಬಾರಿ ಲಿಪ್ ಸ್ಟಿಕ್ ಅನ್ನು ತುಟಿಯ ಮೇಲೆ ಗ್ಲೈಡ್ ಮಾಡುವುದರಿಂದ ಹೆಚ್ಚು ಕಾಲ ಲಿಪ್ ಸ್ಟಿಕ್ ಉಳಿಯುವುದಿಲ್ಲ. ಇದರಿಂದಾಗಿ ತುಟಿಯ ಮೇಲ್ಭಾಗ ಹಾಗೂ ಕೆಳ ಭಾಗಕ್ಕೆ ಲಿಪ್ ಸ್ಟಿಕ್ ಅನ್ನು ಹಚ್ಚುವ ಮೊದಲು ಬ್ರಷ್ ಗಳನ್ನು ಬಳಸಿ. ಆನಂತರ ಕೆಳತುಟಿಯಿಂದ ನಿಮ್ಮ ಲಿಪ್ ಸ್ಟಿಕ್ ಅನ್ನು ಅಪ್ಲೈ ಮಾಡಲು ಪ್ರಾರಂಭಿಸಿ ಅದನ್ನು ಮೇಲ್ ತುಟಿಯವರೆಗೂ ಅನುಸರಿಸಿ. ಎಕ್ಸ್ ಮಾರ್ಗದಲ್ಲಿ ಲಿಪ್ ಸ್ಟಿಕ್ ಹಚ್ಚುವುದು ಉತ್ತಮ ಹೀಗೆ ಮಾಡುವುದರಿಂದ ಲಿಪ್ ಸ್ಟಿಕ್ ಮಾಸದಂತೆ ಹೆಚ್ಚುಕಾಲ ಇರುತ್ತದೆ.

puff ಮತ್ತು ಟಿಶ್ಯೂವನ್ನು ಬಳಸಿ:

ನೀವು ಲಿಪ್ ಸ್ಟಿಕ್ ಅನ್ನು ಹಚ್ಚಿದ ನಂತರ 1 ಟಿಶ್ಯೂವನ್ನು ತೆಗೆದುಕೊಂಡು ತುಟಿಗಳ ನಡುವೆ ಒತ್ತಬೇಕು.ಹೀಗೆ ಮಾಡುವುದರಿಂದ ಹೆಚ್ಚುವರಿ ಲಿಪ್ ಸ್ಟಿಕ್ ಹೀರಿಕೊಳ್ಳುತ್ತದೆ. ತದನಂತರ ಮತ್ತೊಂದು ಟಿಶ್ಯೂವನ್ನು ತಗೆದುಕೊಂಡು ತುಟಿಯ ಮೇಲೆ ಇರಿಸಿ ಲೂಸ್ ಪೌಡರನ್ನು ಹಾಕಿ, ಆನಂತರ ಫೈನಲ್ ಕೋಟನ್ನು ಹಚ್ಚುವುದರಿಂದ ಬಣ್ಣ ಮಾಸದೆ ದೀರ್ಘ ಕಾಲ ಇರುತ್ತದೆ.

ಸ್ಮಡ್ಜ್ ತಡೆಯಲು ನ್ಯೂಡ್ ಲಿಪ್ ಲೈನರ್ ಬಳಸಿ:

ನಿಮ್ಮ ತುಟಿಗೆ ಹೊಂದಿಕೆಯಾಗುವ ಲಿಪ್ ಸ್ಟಿಕ್ ಅನ್ನು ಅಪ್ಲೈ ಮಾಡುವ ಮೊದಲು ನಿಮ್ಮ ತುಟಿಗೆ ಔಟ್ ಲೈನ್ ಮಾಡಲು ನ್ಯೂಡ್ ಲಿಪ್ ಲೈನರ್ ಗಳನ್ನು ಬಳಸಿ. ಇದನ್ನು ರಿವರ್ಸ್ ಲೈನಿಂಗ್ ಎಂದೂ ಕೂಡ ಕರೆಯುತ್ತಾರೆ. ಇದರಿಂದ ನಿಮ್ಮ ಲಿಪ್ ಲೈನರ್ ಅನ್ನು ಉತ್ತಮವಾಗಿ ಪತ್ತೆ ಹಚ್ಚಬಹುದು ಮತ್ತು ಸ್ಲೆಡ್ಜಿಂಗ್ ತೊಂದರೆ ಇಂದ ದೂರವಿರಬಹುದು. ಇದಿಷ್ಟು ಟಿಪ್ಸ್ ಗಳು ನಿಮ್ಮ ಲಿಪ್ ಸ್ಟಿಕ್ ಅನ್ನು ಲಾಂಗ್ ಲಾಸ್ಟಿಂಗ್ ಆಗಿ ಇರಲು ಸಹಾಯ ಮಾಡುತ್ತದೆ. ಹಾಗಿದ್ರೆ ಲಿಪ್ ಸ್ಟಿಕ್ ಹಚ್ಚುವ ಮುನ್ನ ಈ ಎಲ್ಲಾ ಕ್ರಮವನ್ನು ಪಾಲಿಸಿ ಲಾಂಗ್ ಲಾಸ್ಟಿಂಗ್ ಲಿಪ್ ಸ್ಟಿಕ್ ಅನ್ನು ಪಡೆಯಿರಿ.

Exit mobile version