ಈ ದೇಶದಲ್ಲಿ ವಾರದಲ್ಲಿ ಕೇವಲ 4 ದಿನ ಕೆಲಸ!

ಕೆಲವು ದೇಶಗಳೇ ಹಾಗೆ ವಿಚಿತ್ರ, ಒಂದೊದು ದೇಶದಲ್ಲಿ ಒಂದೊಂದು ಕಾನೂನು ಇರುತ್ತದೆ. ಹಾಗೆ ಬೆಲ್ಜಿಯಂ ಸರ್ಕಾರ ಅಲ್ಲಿನ ಉದ್ಯೋಗಿಗಳಿಗೆ ಹೊಸ ಸುದ್ದಿಯೊಂದನ್ನು ನೀಡಿದೆ. ಆ ಹೊಸ ಸುದ್ದಿ ಏನು ಎಂದರೆ ವಾರದಲ್ಲಿ ಐದು ದಿನಗಳ ಬದಲಿಗೆ ನಾಲ್ಕು ದಿನದ ಕೆಲಸ (4 days work) ಮಾಡುವ ಅವಕಾಶವನ್ನು ನೀಡಿದೆ ಮತ್ತು ವೇತನದಲ್ಲೂ ಯಾವುದೇ ರೀತಿಯ ಕಡಿತ ಆಗುವುದಿಲ್ಲ ಎಂದು ತಿಳಿಸಿದೆ. ಕೆಲಸ ಕಡಿಮೆ ಸಂಬಳ ಮಾತ್ರ ಜಾಸ್ತಿ ಇರಬೇಕು ಅಂತಾ ಯಾರು ಬಯಸಲ್ಲ ಹೇಳಿ. ಹೀಗೊಂದು ಸುವರ್ಣಾವಕಾಶವನ್ನು ಬೆಲ್ಜಿಯಮ್ ಕಾರ್ಮಿಕ ಮಾರುಕಟ್ಟೆ (Market) ಸುಧಾರಣೆಗಳ ಅಡಿಯಲ್ಲಿ ಉದ್ಯೋಗಿಗಳಿಗೆ ಈ ವ್ಯವಸ್ಥೆ ಮಾಡಿದೆ. ವಾರದಲ್ಲಿ 4 ದಿನ ಕೆಲಸಕ್ಕೆ ಹಾಜರಾಗುವಂತೆ ಮತ್ತು ಪೂರ್ತಿ ವೇತನ (Full salary) ನೀಡುವ ಭರವಸೆಯನ್ನು ನೀಡಿದೆ.


ಮೂರು ದಿನಗಳ ವಾರಾಂತ್ಯವನ್ನು ಪಡೆಯಲು ಉದ್ಯೋಗಿಗಳು ಕೆಲಸದ ವಾರದಲ್ಲಿ ಹೆಚ್ಚು ಸಮಯ ಕೆಲಸ ಮಾಡಬೇಕಾಗುತ್ತದೆ. ಇದರರ್ಥ ಅವರು ಹೆಚ್ಚುವರಿ ಆಫ್ ಪಡೆಯಲು 4 ದಿನದಲ್ಲಿ 38-ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಅಂದರೆ ದಿನಕ್ಕೆ 10 ಗಂಟೆ ಕೆಲಸ ಮಾಡಿದ್ರೆ 3 ದಿನ ವೀಕೆಂಡ್ ಅನುಭವಿಸಬಹುದು. ನಾವು ಕೊರೋನಾದಿಂದಾಗಿ ಕಳೆದ ಎರಡು ವರ್ಷಗಳನ್ನು ಕಷ್ಟದಲ್ಲಿ ಕಳೆದಿದ್ದೇವೆ. ಈಗ ತಂದಿರುವ ವ್ಯವಸ್ಥೆ ನಾವು ಹೆಚ್ಚು ನವೀನ, ಸಮರ್ಥನೀಯ ಮತ್ತು ಡಿಜಿಟಲ್ ಆರ್ಥಿಕತೆಗೆ ದಾರಿದೀಪವನ್ನು ಪಡೆಯಲು ಸಹಾಯವಾಗುತ್ತದೆ ಜನರು ಮತ್ತು ವ್ಯವಹಾರಗಳನ್ನು ಬಲಿಷ್ಠಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಬೆಲ್ಜಿಯಂ ಪ್ರಧಾನಿ ಅಲೆಕ್ಸಾಂಡರ್ ಡಿ ಕ್ರೂ ಹೇಳಿದರು.

ಕೆಲಸದ ಸಮಯವನ್ನು ತಮಗೆ ಬೇಕಾದಂತೆ ಹೊಂದಾಣಿಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಜನರು ಮತ್ತು ಕಂಪನಿಗಳಿಗೆ ನೀಡುವುದು ಗುರಿಯಾಗಿದೆ ಎಂದು ಕೂಡ ಪ್ರಧಾನಮಂತ್ರಿ ಹೇಳಿದ್ದಾರೆ. ಅಲ್ಲದೇ ಕಡಿಮೆ ಅವಧಿ ವಾರದ ಕೆಲಸವನ್ನು ಮಾಡಬೇಕು ಎಂಬ ಉದ್ಯೋಗಿಗಳ ಮನವಿಯನ್ನು ತಿರಸ್ಕರಿಸುವ ಹಕ್ಕು ಉದ್ಯೋಗದಾತರಿಗೆ ಇದೆ. ಆದರೆ ಏಕೆ ತಿರಸ್ಕರಿಸಲಾಗಿದೆ ಎಂಬುದನ್ನು ಲಿಖಿತವಾಗಿ ವಿವರಿಸಬೇಕಾಗುತ್ತದೆ ಎಂದು ಉಪ ಪ್ರಧಾನಮಂತ್ರಿ ಮತ್ತು ಕಾರ್ಮಿಕ ಸಚಿವರಾದ ಪಿಯೆರೆ-ಯ್ವೆಸ್ ಡರ್ಮಗ್ನೆ ಹೇಳಿದ್ದಾರೆ. 20 ಕ್ಕಿಂತ ಹೆಚ್ಚು ಸಿಬ್ಬಂದಿಯನ್ನು ಹೊಂದಿರುವ ಎಲ್ಲಾ ಉದ್ಯೋಗದಾತರಿಗೆ ಹೊಸ ಕಾನೂನು ಅನ್ವಯಿಸುತ್ತದೆ.

Latest News

ಮಾಹಿತಿ

ITR ಸಲ್ಲಿಕೆ ಗಡುವು ಜುಲೈ 31 ಅಂತ್ಯ ; ದಂಡ ಶುಲ್ಕವಿಲ್ಲದೆ ಯಾರೆಲ್ಲಾ ITR ಸಲ್ಲಿಸಬಹುದು ಗೊತ್ತಾ?

ಗಡುವು ಮುಗಿದರೂ ಯಾರೆಲ್ಲ ದಂಡ ಶುಲ್ಕವಿಲ್ಲದೆ ಐಟಿಆರ್‌ ಸಲ್ಲಿಸಬಹುದು, ಇದಕ್ಕೆ ಸಂಬಂಧಿಸಿದಂತೆ ನಿಯಮ ಏನು ಹೇಳುತ್ತದೆ ಎನ್ನುವ ವಿವರ ಇಲ್ಲಿದೆ. ಮುಂದೆ ಓದಿ,

ದೇಶ-ವಿದೇಶ

“ನನ್ನ ಮಕ್ಕಳಿಗೆ ಆಹಾರ ನೀಡಬೇಕೇ? ಅಥವಾ ಅವರನ್ನು ಕೊಲ್ಲಬೇಕೇ?”: ಬೆಲೆ ಏರಿಕೆ ಬಗ್ಗೆ ಪಾಕ್ ಮಹಿಳೆ ಆಕ್ರೋಶ!

ನನ್ನ ಮಕ್ಕಳಿಗೆ ಹಾಲು ಮತ್ತು ಔಷಧಿಗಳನ್ನು ಖರೀದಿಸುವುದು, ನನ್ನ ಮಕ್ಕಳಿಗೆ ಆಹಾರ ನೀಡುವುದು ಯಾವುದು ನನ್ನಿಂದ ಸಾಧ್ಯವಾಗುತ್ತಿಲ್ಲ.

ಮಾಹಿತಿ

ಬುದ್ದಿವಂತರು ಜಗಳವನ್ನು ಹೇಗೆ ತಪ್ಪಿಸುತ್ತಾರೆ ಗೊತ್ತೇ? ; ಈ ಅಚ್ಚರಿ ಮಾಹಿತಿ ಓದಿ

ಕೆಟ್ಟ ವಾಗ್ವಾದವನ್ನು ತಡೆಯುವುದು ಹೇಗೆ ಮತ್ತು ಅದನ್ನು ಸರಿಯಾಗಿ ರೀತಿಯಲ್ಲಿ ಹೇಗೆ ನಿಭಾಯಿಸಬಹುದು ಎನ್ನುವುದಕ್ಕಾಗಿ ಕೆಲವು ಉಪಾಯಗಳು ಇಲ್ಲಿವೆ ನೋಡಿ.