ಅನೇಕ ಔಷಧಿಯ ಗುಣಗಳನ್ನು ಹೊಂದಿರುವ ಜೀರಿಗೆಯನ್ನು ಪ್ರತಿದಿನ ನಾವೆಲ್ಲರೂ ಆಹಾರದಲ್ಲಿ ಬಳಸುತ್ತೇವೆ. ಆದರೆ (benefits of drinking cumin water) ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಬೆಳಿಗ್ಗೆ
ಜೀರಿಗೆ ನೀರನ್ನು ಕುಡಿಯುವುದರಿಂದ ಯಾವೆಲ್ಲಾ ಆರೋಗ್ಯ ಪ್ರಯೋಜನೆಗಳನ್ನು ನಾವು ಪಡೆದುಕೊಳ್ಳಬಹುದು ಎಂಬುದನ್ನ ತಿಳಿದುಕೊಳ್ಳೋಣ.

• ಜೀರಿಗೆ ನೈಸರ್ಗಿಕವಾಗಿ, ವಿಟಮಿನ್ ಇ (Vitamin E), ವಿಟಮಿನ್ ಕೆ (Vitamin K) ಮತ್ತು ವಿಟಮಿನ್ ಎ (Vitamin A) ಯಂತಹ ಪೋಷಕಾಂಶಗಳನ್ನು ಹೊಂದಿದ್ದು, ಚಯಾಪಚಯ ಕ್ರಿಯೆಯನ್ನು
ಹೆಚ್ಚಿಸಲು ಸಹಾಯ ಮಾಡುತ್ತದೆ. ಜೀರಿಗೆ ದೇಹದಲ್ಲಿ ಆಮ್ಲಜನಕದ ಪರಿಚಲನೆಗೆ ಸಹಾಯ ಮಾಡುತ್ತದೆ. ಜೊತೆಗೆ ಮೂಳೆಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.
• ಜೀರಿಗೆಯಲ್ಲಿರುವ ಮೆಗ್ನೀಸಿಯಮ್ (Magnesium) ಅಂಶವು ಸ್ನಾಯು ಮತ್ತು ನರಗಳ ಕಾರ್ಯನಿರ್ವಹಣೆಯನ್ನು ಸಗಮಗೊಳಿಸುತ್ತದೆ. ಜೀರಿಗೆಯು ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿದ್ದು,
ಇದು ಉರಿಯೂತವನ್ನು ಕಡಿಮೆ ಮಾಡಲು (benefits of drinking cumin water) ಸಹಾಯ ಮಾಡುತ್ತದೆ
• ಜೀರಿಗೆ ನೀರನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ. ಇದರಲ್ಲಿರುವ ಹೆಚ್ಚಿನ ಫೈಬರ್ (Fiber) ಅಂಶ ನೈಸರ್ಗಿಕವಾಗಿ ಇನ್ಸುಲಿನ್
(Insulin) ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
• ಜೀರಿಗೆ ನೀರನ್ನು ಪ್ರತಿದಿನ ಸೇವಿಸುವುದರಿಂದ ದೇಹದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೀರಿಗೆ ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಸಂಯುಕ್ತಗಳನ್ನು
ಹೊಂದಿದೆ, ಇದು ಹಲವಾರು ಕಾಯಿಲೆಗಳಿಂದ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡುತ್ತದೆ.

• ಜೀರಿಗೆ ನೀರನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ಜೀರಿಗೆಯಲ್ಲಿ ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುವ ಸಂಯುಕ್ತಗಳನ್ನು ಹೊಂದಿರುತ್ತದೆ.
ಹೀಗಾಗಿ ಇದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ..
• ಜೀರಿಗೆಯು ತೂಕ ನಿರ್ವಹಣೆಯ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ಕೆಲವು ಅಧ್ಯಯನಗಳು ಹೇಳಿವೆ. ಜೀರಿಗೆ ಕೊಬ್ಬಿನ ಆಕ್ಸಿಡೀಕರಣವನ್ನು ಸುಧಾರಿಸಲು ಸಹಾಯ
ಮಾಡುವುದರಿಂದ ತೂಕ ನಷ್ಟವಾಗುತ್ತದೆ. ಹೀಗಾಗಿ ಜೀರಿಗೆ ನೀರನ್ನು ಕುಡಿಯುವುದು ತೂಕ ನಿರ್ವಹಣೆಗೆ ಉತ್ತಮವಾಗಿದೆ.
2050ರ ವೇಳೆಗೆ ಒಂದು ಶತಕೋಟಿ ಜನರಿಗೆ ಅಸ್ಥಿಸಂಧಿವಾತ ಸಮಸ್ಯೆ : ಲ್ಯಾನ್ಸೆಟ್ ವರದಿ
• ಜೀರಿಗೆ ನಿರ್ವಿಶೀಕರಣ ಗುಣಲಕ್ಷಣಗಳನ್ನು ಹೊಂದಿದೆ. ಇದು ಆಂಟಿಆಕ್ಸಿಡೆಂಟ್ಗಳು ದೇಹದಲ್ಲಿನ ಹಾನಿಕಾರಕ ಫ್ರೀ ರಾಡಿಕಲ್ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಆಗ ದೇಹದಲ್ಲಿರುವ
ಟಾಕ್ಸಿಕ್ (Toxic) ಅಂಶವು ಹೊರಹಾಕುತ್ತದೆ.
• ಜೀರಿಗೆ ನೀರನ್ನು ಪ್ರತಿದಿನ ನಿಯಮಿತವಾಗಿ ಸೇವಿಸುವುದರಿಂದ ಇಡೀ ದೇಹದ ಆರೋಗ್ಯ ಸುಧಾರಿಸುತ್ತದೆ. ಹಾರ್ಮೋನ್ಗಳ ಕಾರ್ಯವೈಖರಿ ಉತ್ತಮಗೊಳ್ಳುತ್ತದೆ. ಹೀಗಾಗಿ ಪ್ರತಿದಿನ ಬೆಳಿಗ್ಗೆ
ಒಂದು ಲೋಟ ಜೀರಿಗೆ ನೀರನ್ನು ಕುಡಿಯುವುದು ಉತ್ತಮ.
ಮಹೇಶ್