ಮನೆ ಮದ್ದು: ಚಳಿಗಾಲದಲ್ಲಿ ಶೀತ, ಕೆಮ್ಮು ನಿವಾರಿಸಲು ಈ ಸೊಪ್ಪುಗಳನ್ನು ಸೇವಿಸಿ

Home Remedy for Cold: ಚಳಿಗಾಲ ಬಂದ್ರೆ ಸಾಕು ಆರೋಗ್ಯದಲ್ಲಿ ಒಂದೊಂದೇ ಸಮಸ್ಯೆಗಳು ಶುರುವಾಗುವುದರ ಜೊತೆಗೆ ಚಳಿಗಾಲದಲ್ಲಿ (Benefits of Green Leaves) ಸ್ವಲ್ಪ ಎಚ್ಚರ ತಪ್ಪಿದರೂ

ಶೀತ ಮತ್ತು ಜ್ವರದ (Fever) ಅಪಾಯ ಹೆಚ್ಚುತ್ತದೆ. ಹಾಗಾದ್ರೆ ಚಳಿಗಾಲದಲ್ಲಿ ಯಾವ ರೀತಿ ಆರೋಗ್ಯವನ್ನ ಕಾಪಾಡಿಕೊಳ್ಳಬೇಕು ಅಂತ ತಿಳಿಯೋಣ….

ಸೊಪ್ಪು ಸೇವನೆ​:
ಚಳಿಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆ ಇರುವುದರಿಂದಾಗಿ ವಿಟಮಿನ್ ಡಿ (Vitamin D) ಕೊರತೆ ಉಂಟಾಗುತ್ತದೆ ಮತ್ತು ರಕ್ತ ಕಣಗಳು ಕಡಿಮೆಯಾಗುತ್ತವೆ ಆದ್ದರಿಂದ, ರಕ್ತ ಪರಿಚಲನೆ ಸರಿಯಾಗಿ

ಆಗದೆ ಇರುವುದರಿಂದ ಸೊಪ್ಪುಗಳಲ್ಲಿ (Green Leaves) ವಿಟಮಿನ್ ಅಂಶ ಹೆಚ್ಚಾಗಿ ಇರುವುದರಿಂದ ಸೊಪ್ಪು ಸೇವನೆಯಿಂದ ವಿಟಮಿನ್ ಡಿ ಕೊರತೆ ನಿವಾರಣೆ ಮಾಡಬಹುದಾಗಿದೆ.

ಋಷಿ ಎಲೆ ​(Sage Leaf)
ಈ ಎಲೆಯಲ್ಲಿ ಅನೇಕ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ.ಮತ್ತು ಇದು ಕ್ಯಾಲ್ಸಿಯಂ (Calcium), ರಂಜಕ, ವಿಟಮಿನ್ ಎ, ಮತ್ತು ಪೊಟ್ಯಾಸಿಯಮ್ (Potassium) ಅನ್ನು ಹೊಂದಿರುವುದರಿಂದ

ಇದರಲ್ಲಿ ಸಾರಜನಕ ಭರಿತ ಮಣ್ಣಿನಲ್ಲಿ ಬೆಳೆಯುತ್ತದೆ ಆದ್ದರಿಂದ ಇನ್ನುಇದನ್ನು ಸೇವಿಸುವದರಿಂದ ನಮ್ಮ ತ್ವಚೆ ಚಳಿಗಾಲದಲ್ಲಿ ಕಾಂತಿಯುತವಾಗಿ ಇರಲು ಸಹಾಯ ಮಾಡುತ್ತದೆ.

ಸಾಸಿವೆ ಸೊಪ್ಪು​ (Mustard greens):
ಸಾಸಿವೆ ಸೊಪ್ಪಿನಲ್ಲಿ ಕೊಬ್ಬು,ಕ್ಯಾಲೋರಿಗಳು (Calories),ಫೈಬರ್,ಕಾರ್ಬೋಹೈಡ್ರೇಟ್‌ಗಳು,ಸಕ್ಕರೆ, ವಿಟಮಿನ್ ಎ, ಸಿ, ಡಿ, ಬಿ 12, ಪೊಟ್ಯಾಸಿಯಮ್, ಮೆಗ್ನೀಸಿಯಮ್ (Magnesium), ಕಬ್ಬಿಣ ಮತ್ತು

ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಆದ್ದರಿಂದ ಚಳಿಗಾಲದಲ್ಲಿ ಕೆಮ್ಮು (Cough) ಜ್ವರ ದಂತ ಕಾಯಿಲೆಗಳಿಂದ ದೂರವಿರಲು ತುಂಬಾ ಸಹಾಯಕ ವಾಗುತ್ತದೆ.

ಮೆಂತ್ಯಸೊಪ್ಪು​ (Fenugreek):
ಮೆಂತ್ಯದಲ್ಲಿ ಪ್ರೋಟೀನ್ (Protein), ಫೈಬರ್, ವಿಟಮಿನ್ ಸಿ, ನಿಯಾಸಿನ್, ಪೊಟ್ಯಾಸಿಯಮ್, ಕಬ್ಬಿಣವಿದೆ. ಇದು ಆರೋಗ್ಯಕ್ಕೆ (Health) ಬಹಳ ಒಳ್ಳೆಯದು ಮತ್ತು ಚಳಿಗಾಲ ಬಂದರೆ ತರಕಾರಿ

ಮಾರುಕಟ್ಟೆಯಲ್ಲಿ ಮೆಂತ್ಯಸೊಪ್ಪು ಹೆಚ್ಚಾಗಿ (Benefits of Green Leaves) ದೊರೆಯುತ್ತದೆ..

ಹರಿವೆ ಸೊಪ್ಪು (Amaranth):​
ಗಣನೀಯ ಪ್ರಮಾಣದಲ್ಲಿ ಅರಿವೆಸೊಪ್ಪು ಕಾರ್ಬೋಹೈಡ್ರೇಟ್‌ಗಳನ್ನು (Carbohydrate) ಹೊಂದಿದ್ದು , ಪ್ರೋಟೀನ್‌ಗಳು, ಕ್ಯಾಲ್ಸಿಯಂ, ವಿಟಮಿನ್ ಎ (Vitamin A), ಖನಿಜಗಳು ಮತ್ತು ಕಬ್ಬಿಣದಿಂದ

ಸಮೃದ್ಧವಾಗಿದೆ. ಪ್ರತಿದಿನ ಅರಿವೆಸೊಪ್ಪು ತಿನ್ನುವ ಮೂಲಕ ದೇಹದಲ್ಲಿನ ವಿಟಮಿನ್ ಕೊರತೆಯನ್ನು ಕಡಿಮೆಮಾಡಬಹುದಾಗಿದೆ.

ಇದನ್ನು ಓದಿ: 36 ಗಂಟೆಯೊಳಗೆ ಡೀಪ್​ಫೇಕ್​ಗಳನ್ನು ತೆಗೆದುಹಾಕಿ: ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರ ಸೂಚನೆ

Exit mobile version