Visit Channel

ಬೇವು ಮತ್ತು ಅರಿಶಿನದ ಉಪಯೋಗಗಳು ನಮ್ಮ ಆರೋಗ್ಯಕ್ಕೆ ಎಷ್ಟು ಲಾಭಕಾರಿ ಗೊತ್ತಾ?

neem

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಅಡಿಗೆ ಪದಾರ್ಥವಾದ ಅರಿಶಿನ ಮತ್ತು ಬೇವು ಇದ್ದೇ ಇರುತ್ತದೆ. ಇದನ್ನ ಬಳಸಿಕೊಂಡರೆ ನಮ್ಮ ತ್ವಚೆಯ ಮತ್ತು ದೇಹದ ಆರೋಗ್ಯ ಕಾಪಾಡಬಹುದು. ಅರಿಶಿನವು ನೈಸರ್ಗಿಕವಾಗಿ ಮನೆ ಮದ್ದು ಎಂದು ಹೇಳಬಹುದು. ಅರಿಶಿನದ ಫೇಸ್ ಪ್ಯಾಕ್ ಅನ್ನು ಮನೆಯಲ್ಲಿ ತಯಾರಿಸಿ ಅದನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹಾಗೂ ಹೊಳಪು ಹೆಚ್ಚುತ್ತದೆ.

neem

ಇನ್ನು ಬೇವಿನ ಬಗ್ಗೆ ಹೇಳುವುದಾದರೆ ಬೇವು ಕಹಿಯಾದರು ಕೂಡ ಅದರ ರಸವನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಬಹಳ ಆರೋಗ್ಯಕರ ಅನುಕೂಲಗಳಿವೆ. ಬೇವು ಮತ್ತು ಅರಿಶಿನವು ಆಯುರ್ವೇದ ಅಂಶಗಳನ್ನು ಒಳಗೊಂಡಿದೆ. ಈ ನೈಸರ್ಗಿಕ ವಸ್ತುಗಳು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಷ್ಟೇ ಅಲ್ಲ
ನಮ್ಮ ಚರ್ಮವು ಕಾಂತಿಯುತ ವಾಗಿ ಮತ್ತು ಹೊಳೆಯುವಂತೆ ಕಾಣಲು ಬೇವು ಮತ್ತು ಅರಿಶಿನವು ಬಹಳ ಸಹಾಯಕಾರಿಯಾಗಿದೆ.

ಬೇವು ಮತ್ತು ಅರಿಶಿಣದಿಂದ ಏನೆಲ್ಲಾ, ಹೇಗೆಲ್ಲಾ ಪ್ರಯೋಜನಗಳು ಲಭಿಸುವುದು ಎಂಬುದನ್ನು ಕೆಳೆಗೆ ತಿಳಿಸಲಾಗಿದೆ.

ನೆಗಡಿಯನ್ನು ಕಡಿಮೆ ಮಾಡುತ್ತದೆ :
ಅರಿಶಿನ ಮತ್ತು ಬೇವನ್ನು ಪ್ರತಿನಿತ್ಯ ಸೇವಿಸುವುದರಿಂದ ನೆಗಡಿಯನ್ನು ಸುಧಾರಿಸುತ್ತದೆ. ಬೇವಿನಲ್ಲಿ ಕಹಿಯ ಅಂಶ ಇರುವುದರಿಂದ ಬಹಳ ವೇಗವಾಗಿ ಶೀತ ಮತ್ತು ನೆಗಡಿಯನ್ನು ಕಡಿಮೆ ಮಾಡುತ್ತದೆ. ಅರಿಶಿನವು ಕೂಡ ತನ್ನದೇ ಆದ ಆಯುರ್ವೇದ ಅಂಶಗಳನ್ನು ಹೊಂದಿದೆ. ಇದು ಕೂಡ ಆರೋಗ್ಯ ಸುಧಾರಿಸಲು ಸಹಾಯಕವಾಗುತ್ತದೆ.

turmeric

ದೇಹದ ಆರೋಗ್ಯ ವೃದ್ಧಿಗೆ ಸಹಾಯಕಾರಿ. ಅರಿಶಿಣ ಮತ್ತು ಬೇವಿನ ಪೇಸ್ಟನ್ನು ಸ್ವಲ್ಪ ಉಗುರು ಬೆಚ್ಚಗಿನ ನೀರಿಗೆ ಮಿಶ್ರಣ ಮಾಡಿ ಪ್ರತಿನಿತ್ಯ ಬೆಳಗ್ಗೆ ಅದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಮ್ಮ ದೇಹದಲ್ಲಿ ಅನೇಕ ಆರೋಗ್ಯಕರ ಬದಲಾವಣೆಗಳಾಗುತ್ತದೆ.
ದೇಹದಲ್ಲಿನ ನೋವುಗಳೆಲ್ಲ ಮಾಯವಾಗಿ ನಮ್ಮ ದೇಹಕ್ಕೆ ಶಕ್ತಿಯನ್ನು ತುಂಬುವ ಕೆಲಸವನ್ನು ಈ ಅರಿಶಿನ ಮತ್ತು ಬೇವು ಮಾಡುತ್ತದೆ.

ಚರ್ಮ ಮತ್ತು ತ್ವಚೆಯ ರಕ್ಷಣೆ :
ಬೇವು ಮತ್ತು ಅರಿಶಿಣದ ಪೇಸ್ಟನ್ನು ತ್ವಚೆಗೆ ಮತ್ತು ಚರ್ಮಕ್ಕೆ ಹಚ್ಚುವುದರಿಂದ ನಮ್ಮ ತ್ವಚೆಯು ಹೊಳಪಾಗಿ ಕಾಣುತ್ತದೆ.
ಚರ್ಮವು ಕೂಡ ಸಮೃದ್ಧವಾಗುತ್ತದೆ. ಹೀಗೆ ಆರೋಗ್ಯದ ಜೊತೆಗೆ ನಮ್ಮ ಚರ್ಮದ ರಕ್ಷಣೆಯನ್ನು ಕೂಡ ಮಾಡುತ್ತದೆ.

skin

ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ :
ಬೇವು ಮತ್ತು ಅರಿಶಿಣದಲ್ಲಿ ಬ್ಯಾಕ್ಟೀರಿಯ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಹೆಚ್ಚಿದೆ. ಬೇವು ಮತ್ತು ಅರಿಶಿನವನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ.

ಬ್ಯಾಕ್ಟೀರಿಯಾ ಮತ್ತು ಫಂಗಸ್ನಿಂದ ಮುಕ್ತಿ : ಬ್ಯಾಕ್ಟೀರಿಯಗಳ ವಿರುದ್ಧ ಹೋರಾಡುವ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಫಂಗಲ್ ವಿರುದ್ಧ ಹೋರಾಡುವ ಆ್ಯಂಟಿಫಂಗಲ್ ಲಕ್ಷಣಗಳನ್ನು ಬೇವು ಮತ್ತು ಅರಿಶಿಣ ಹೊಂದಿದೆ.

face glow

ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ :
ಬೇವು ಮತ್ತು ಅರಿಶಿಣದ ಫೇಸ್ ಪ್ಯಾಕ್ ಅನ್ನು ಮನೆಯಲ್ಲೇ ತಯಾರಿಸಿ, ಅದನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಅಷ್ಟೇ ಅಲ್ಲದೆ ಮುಖದ ಮೇಲಿನ ಮೊಡವೆಗಳು ಕೂಡ ಕಡಿಮೆಯಾಗುತ್ತದೆ.

ಉಸಿರಾಟದ ತೊಂದರೆಗೆ ಮುಕ್ತಿ :
ಬೇವು ಮತ್ತು ಅರಿಶಿನವನ್ನು ಬೆಚ್ಚಗಿನ ನೀರಿನೊಂದಿಗೆ ಸ್ವಲ್ಪ ಜೇನುತುಪ್ಪ ಮತ್ತು ಸ್ವಲ್ಪ ಅರಿಶಿನವನ್ನು ಹಾಕಿ ಕುಡಿಯುವುದರಿಂದ ಪ್ರತಿಯೊಬ್ಬ ಮನುಷ್ಯನ ಉಸಿರಾಟದ ಪ್ರಕ್ರಿಯೆ ಕೂಡ ಸರಾಗವಾಗಿ ಸಾಗುತ್ತದೆ.

neema and turmeric

ರಕ್ತ ಶುದ್ಧೀಕರಣಕ್ಕೆ ಸಹಾಯಕಾರಿ :
ಬೇವಿನ ಎಲೆಯ ರಸವನ್ನು ತಯಾರಿಸಿ ಅದಕ್ಕೆ ಒಂದು ಚಿಟಿಕೆ ಅರಿಶಿನವನ್ನು ಹಾಕಿ ಇದನ್ನು ಪ್ರತಿನಿತ್ಯ ಸೇವಿಸುವುದರಿಂದ
ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಕಮ್ಮಿ ಆಗುತ್ತದೆ. ಅಷ್ಟೆ ಅಲ್ಲ ರಕ್ತಸಂಚಾರವು ಕೂಡ ಸರಾಗವಾಗಿ ಸಾಗುತ್ತದೆ. ಹೀಗೆ ಅನೇಕ ರೀತಿಯಲ್ಲಿ ಬೇವು ಮತ್ತು ಅರಿಶಿನವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಇದನ್ನು ಬಳಸುವುದರಿಂದ ನಮ್ಮ ದೇಹದಲ್ಲಿನ ಆರೋಗ್ಯವೂ ಸುಧಾರಿಸುತ್ತದೆ.

Latest News

Russia
ದೇಶ-ವಿದೇಶ

ಜನಸಂಖ್ಯೆ ಹೆಚ್ಚಳಕ್ಕೆ 10 ಮಕ್ಕಳಿಗೆ ಜನ್ಮ ನೀಡಿದ್ರೆ 13 ಲಕ್ಷ ಬಹುಮಾನ : ರಷ್ಯಾ ಅಧ್ಯಕ್ಷ ಪುಟಿನ್‌ ಘೋಷಣೆ

ರಷ್ಯಾದ ರಾಜಕೀಯ(Russia Politics) ಮತ್ತು ಭದ್ರತಾ ತಜ್ಞ ಡಾ ಜೆನ್ನಿ ಮ್ಯಾಥರ್ಸ್, ಟೈಮ್ಸ್ ರೇಡಿಯೊದಲ್ಲಿ ಈ ಕುರಿತು ಮಾತನಾಡಿ, “ಮದರ್ ಹೀರೋಯಿನ್” ಎಂದು ಕರೆಯಲ್ಪಡುವ ಬಹುಮಾನ ಯೋಜನೆ

Dakshina Kannada
ರಾಜ್ಯ

ವಿಜಯಟೈಮ್ಸ್ ಇಂಪ್ಯಾಕ್ಟ್ ; ಬಂಟ್ವಾಳ ಸೇತುವೆಯ ದುಸ್ಥಿತಿ ನೋಡಲು ದಿಢೀರನೇ ಬಂದ ಅಧಿಕಾರಿಗಳು!

ಕಳಪೆ ಕಾಮಗಾರಿ ದುರಂತದ ಬಗ್ಗೆ ವಿಜಯಟೈಮ್ಸ್ ತಂಡ ಮಾಡಿದ್ದ ವರದಿಗೆ ಅಧಿಕಾರಿಗಳು ಈಗ ದಿಢೀರ್ ಎಚ್ಚೆತ್ತುಕೊಂಡಿದ್ದಾರೆ.

IT Minister
ದೇಶ-ವಿದೇಶ

5G ಬಿಡುಗಡೆಗೆ ತಯಾರಿ ಮಾಡಿಕೊಳ್ಳಿ : ಟೆಲಿಕಾಂ ಕಂಪನಿಗಳಿಗೆ ಐಟಿ ಸಚಿವ ಅಶ್ವಿನಿ ವೈಷ್ಣವ್ ಸೂಚನೆ

ಇನ್ನು ಏರ್ಟೆಲ್(Airtel) ಮತ್ತು ಜಿಯೋ(Jio) ಈ ತಿಂಗಳ ಕೊನೆಯಲ್ಲಿ ತಮ್ಮ 5G ಸೇವೆಗಳ ಮೊದಲ ಹಂತವನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.