ಚಾಮರಾಜಪೇಟೆ ಸ್ಫೋಟದಲ್ಲಿ ಮೃತರಾದ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಪರಿಹಾರ – ಶಾಸಕ ಜಮೀರ್ ಅಹಮದ್ ಖಾನ್

 ಬೆಂಗಳೂರು ಸೆ 24 : ಚಾಮರಾಜಪೇಟೆ ಸ್ಪೋಟದಲ್ಲಿ ಮೃತರಾದ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ  ಶಾಸಕ ಜಮೀರ್‌ ಅಹಮದ್‌ ಖಾನ್‌ ತಿಳಿಸಿದ್ದಾರೆ

ಚಾಮರಾಜಪೇಟೆ ಸಮೀಪದ ನ್ಯೂ ತರಗುಪೇಟೆ ಬಳಿಯ ಪಂಚರ್‌ ಶಾಪ್‌ ಬಳಿಯಲ್ಲಿ ನಡೆದಿರುವ ನಿಗೂಢ ಸ್ಪೋಟಕ್ಕೆ ಕಾರಣ ತಿಳಿದು ಬಂದಿಲ್ಲ. ಸ್ಪೋಟದ ಸ್ಥಳಕ್ಕೆ ಎಫ್‌ಎಸ್‌ಎಲ್‌ ತಂಡ ಭೇಟಿಯನ್ನು ನೀಡಿದ್ದು, ಬಾಂಬ್‌ ನಿಷ್ಕ್ರೀಯ ದಳ ಹಾಗೂ ಶ್ವಾನದಳದಿಂದಲೂ ಪರಿಶೀಲನೆ ಮುಂದುವರಿದಿದೆ.

ಬಾಂಬ್‌ ಸ್ಪೋಟದಲ್ಲಿ ಇಬ್ಬರು ಮೃತ ಪಟ್ಟಿದ್ದು ಮೂವರು ಗಂಬೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಓರ್ವರ ಸ್ಥಿತಿ ಗಂಭೀರವಾಗಿದೆ. ಮೃತರ ಕುಟುಂಬಕ್ಕೆ ಶಾಸಕ ಜಮೀರ್‌ ಅಹಮದ್‌ ಖಾನ್‌ ತಲಾ ಎರಡು ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಅಲ್ಲದೇ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿಯೂ ಭರವಸೆಯನ್ನು ನೀಡಿದ್ದಾರೆ. ಮೃತ ಮನೋಹರ್‌ ಮೃತದೇಹವನ್ನು ತಮಿಳುನಾಡಿಗೆ ಕೊಂಡೊಯ್ಯಲು ಅಂಬ್ಯುಲೆನ್ಸ್‌ ವ್ಯವಸ್ಥೆಯನ್ನೂ ಮಾಡಿರುವುದಾಗಿ ಶಾಸಕ ಜಮೀರ್‌ ಅಹಮದ್‌ ಖಾನ್‌ ತಿಳಿಸಿದ್ದಾರೆ.

ನಿನ್ನೆ ಬೆಳಗ್ಗೆ 11:40 ರ ಸುಮಾರಿಗೆ ಚಾಮರಾಜಪೇಟೆ ಸಮೀಪದ ನ್ಯೂ ತರಗುಪೇಟೆಯಲ್ಲಿ ನಿಗೂಢ ಸ್ಪೋಟ ಸಂಭವಿಸಿತ್ತು. ಸೊಫಟದಲ್ಲಿ ಪಂಕ್ಟರ್‌ ಅಂಗಡಿ ಮಾಲೀಕ ಅಶ್ಲಾಂ ಪಾಷಾ ಹಾಗೂ ಮನೋಹರ್‌ ಎಂಬವರು ಸಾವನ್ನಪ್ಪಿದ್ದು, ಮೂವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಗಾಯಗೊಂಡಿರುವ ಸ್ಥಿತಿ ಗಂಭೀರವಾಗಿದೆ. ಆರಂಭದಲ್ಲಿ ಸಿಲಿಂಡರ್‌ ಸ್ಪೋಟ ಅಥವಾ ಪಂಚರ್‌ ಅಂಗಡಿಯಲ್ಲಿರುವ ಏರ್‌ ಕಂಪ್ರೆಸರ್‌ ಸ್ಪೋಟಗೊಂಡಿರಬಹುದು ಎಂದು ಶಂಕಿಸಲಾಗಿತ್ತು. ಆದ್ರೆ ಅವು ಬ್ಲಾಸ್ಟ್‌ ಆಗಿರಲಿಲ್ಲ. ಹೀಗಾಗಿ ಪಕ್ಕದಲ್ಲಿಯೇ ದೊಡ್ಡಮಟ್ಟದಲ್ಲಿ ಪಟಾಕಿಯನ್ನು ಸಂಗ್ರಹಿಸಿ ಇಡಲಾಗಿದ್ದು, ಪವರ್‌ ಪಾಟ್‌ ರೀತಿಯ ಪಟಾಕಿ ಸಿಡಿದಿರಬಹುದು ಎಂದು ಶಂಕಿಸಲಾಗುತ್ತಿದೆ. ಘಟನೆಯಿಂದಾಗಿ ಅಕ್ಕ ಪಕ್ಕದಲ್ಲಿರುವ ಮನೆ, ಅಂಗಡಿಗಳಿಗೆ ಹಾನಿಯುಂಟಾಗಿದೆ. ಜನರು ಘಟನೆಯಿಂದಾಗಿ ಬೆಚ್ಚಿಬಿದ್ದಿದ್ದಾರೆ

ಪಟಾಕಿ ಸ್ಪೋಟದಿಂದಲೇ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಇದೇ ಕಾರಣಕ್ಕೆ ಪಟಾಕಿ ಅಂಗಡಿಯ ಮಾಲೀಕ ಬಾಬು ಎಂಬಾತನನ್ನು ವಿವಿ ಪುರಂ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಪೋಟದ ಕುರಿತು ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.

Exit mobile version