ಬೋರ್ಡುಗಳಿಲ್ಲದ BMTC ಬಸ್ ನಿಲ್ದಾಣಗಳು ; ಬರೀ ಜಾಹಿರಾತಿಗಾಗಿ ಇವೆಯಾ ಬೆಂಗಳೂರು ಬಸ್ ನಿಲ್ದಾಣಗಳು ?

bmtc

ಬೆಂಗಳೂರಿನಲ್ಲಿ ಯಾವ ಕರ್ಮಕ್ಕೆ ಬಸ್ ನಿಲ್ದಾಣಗಳು? ಜನರಿಗೆ ಮಾಹಿತಿ, ನೆರಳು ಕೊಡಲು ಇದೆಯಾ ಅಥವಾ ಬರೀ ಜಾಹೀರಾತುಗಳನ್ನು ಹಾಕೋಕೆ ಮಾತ್ರ ಕಟ್ಟಿದ್ದಾರಾ? ಇಂಥಾ ದುಸ್ಥಿತಿ ನಮ್ಮ ರಾಜಧಾನಿ ಬೆಂಗಳೂರಿನ ಹೆಚ್ಚಿನ ಎಲ್ಲಾ ಬಸ್ ನಿಲ್ದಾಣಗಳದ್ದಾಗಿವೆ. ಯಾವ ಬಸ್ ನಿಲ್ದಾಣದಲ್ಲೂ ಜನರಿಗೆ ಕಾಣುವ ಹಾಗೆ. ಓದುವ ಹಾಗೆ ಬೋರ್ಡ್ಗಳಿಲ್ಲ. ಎಲ್ಲೂ ಜನರಿಗೆ ಬಸ್ಸ್ಟ್ಯಾಂಡ್ ಕುರಿತು ಮಾಹಿತಿಯೇ ಸಿಗಲ್ಲ. ಬಸ್ ನಿಲ್ದಾಣ ಒಳಗೆ ಸಣ್ಣದಾಗಿ ಬೋರ್ಡ್ ಇದೆ. ಆದ್ರೆ ಅದು ಕಣ್ಣಿಗೆ ಕಾಣೋದೇ ಇಲ್ಲ.

ಇದರಿಂದ ಬೇರೆ ಊರಿನಿಂದ ಬಂದವರಿಗೆ ಭಾರೀ ತೊಂದರೆ ಆಗ್ತಿದೆ. ಬಸ್ ಸ್ಟ್ಯಾಂಡ್ ತುಂಬಾ ಬರೀ ಜಾಹೀರಾತೇ ತುಂಬಿದೆ. ಇನ್ನು ಬೆಂಗಳೂರಿನ ಹೆಚ್ಚಿನ ಬಸ್ ನಿಲ್ದಾಣಗಳಲ್ಲಿ ಬಸ್ಗಳೇ ನಿಲ್ಲಲ್ಲ. ಅದು ಬರೀ ಹೆಸರಿಗೆ ಮಾತ್ರ ಬಸ್ ನಿಲ್ದಾಣ ಅನ್ನಿಸಿದೆ ಅನ್ನೋದು ಸಾರ್ವಜನಿಕರ ಆರೋಪ. ಜನರ ದೂರನ್ನು ಆಧಾರಿಸಿ ವಿಜಯಟೈಮ್ಸ್ನ ಕವರ್ಸ್ಟೋರಿ ತಂಡ ಒಂದು ರಿಯಾಲಿಟಿ ಚೆಕ್ ಮಾಡಿತು. ಆಗ ಬಯಲಾದ ಕೆಲ ಅಂಶಗಳು ನೋಡಿ.

ಮೈಸೂರು ಬ್ಯಾಂಕ್ನಲ್ಲಿ ಬರೀ ಜಾಹೀರಾತು : ಅತೀ ಹೆಚ್ಚು ಜನ ಓಡಾಡೋ ಮತ್ತು ಬೇರೆ ಬೇರೆ ಕಡೆಗಳಿಂದ ಜನ ಬಂದಿಳಿಯೋ ಮೈಸೂರು ಬ್ಯಾಂಕ್ ಬಸ್ ನಿಲ್ದಾಣ ಬೋರ್ಡ್ಗಳಿಲ್ಲ.

ಟೌನ್ಹಾಲ್ ಪಕ್ಕದಲ್ಲೂ ಇದೇ ದುಸ್ಥಿತಿ : ಇನ್ನು ಎನ್.ಆರ್ ರೋಡ್, ಆರ್.ವಿ ಕಾಲೇಜು ಪಕ್ಕದಲ್ಲಿರುವ ಬಸ್ ನಿಲ್ದಾಣ ಆಗಲಿ, ಇನ್ನು ನಾಯಂಡಹಳ್ಳಿ ಬಸ್ ನಿಲ್ದಾಣದಲ್ಲೂ ಹೆಸರೇ ಇಲ್ಲ.
ನೋಡಿದ್ರಲ್ಲಾ ಬಸ್ ನಿಲ್ದಾಣಗಳ ಪರಿಸ್ಥಿತಿ. ಬಿಬಿಎಂಪಿಗೆ ಜಾಹಿರಾತಿನಿಂದ ಇಷ್ಟೆಲ್ಲಾ ಆದಾಯ ಬಂದ್ರೂ ಹೆಸರು ಹಾಕೋಕೇ ಕಾಸಿಲ್ವಾ? ಈಗಲಾದ್ರೂ ಬಿಬಿಎಂಪಿ ಆಯುಕ್ತ ಇತ್ತ ಕಡೆ ಗಮನಹರಿಸಲಿ, ಆದಷ್ಟು ಬೇಗ ಎಲ್ಲಾ ಖಾಲಿ ಫಲಕಗಳಲ್ಲಿಊರಿನ ಹೆಸರುಗಳನ್ನು ಬರೆಯಲಿ. ಆ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಿ ಅನ್ನೋದು ವಿಜಯಟೈಮ್ಸ್ ಆಶಯ.

Exit mobile version