ಟ್ರಾಫಿಕ್‌ನಲ್ಲಿ ಸಿಲುಕಿದ ವೈದ್ಯರ ಕಾರು : ಚಿಂತಿಸದೇ ಕಾರು ಬಿಟ್ಟು 3 ಕಿ.ಮೀ ಓಡಿ ಶಸ್ತ್ರಚಿಕಿತ್ಸೆ ಮುಗಿಸಿದ ವೈದ್ಯ ; ವೀಡಿಯೊ ವೈರಲ್!

Bengaluru : ಬೆಂಗಳೂರಿನಲ್ಲಿ ಟ್ರಾಫಿಕ್(Traffic) ಅತಿದೊಡ್ಡ ಪ್ರಮುಖ ಸಮಸ್ಯೆಯಾಗಿದ್ದು, ಪ್ರತಿಯೊಬ್ಬರ ದೈನಂದಿನ ಕೆಲಸದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಬೆಂಗಳೂರಿನ ಸರ್ಜಾಪುರದ (Sarjapura) ಮಣಿಪಾಲ ಆಸ್ಪತ್ರೆಯ(Manipal Hospital) ಗ್ಯಾಸ್ಟ್ರೋಎಂಟರಾಲಜಿ ಶಸ್ತ್ರಚಿಕಿತ್ಸಕ ಡಾ.ಗೋವಿಂದ್ ನಂದಕುಮಾರ್ ಅವರಿಗೆ ಈ ಅನುಭವವಾಗಿದೆ.

ಆಗಸ್ಟ್ 30, 2022 ರಂದು ಬೆಳಿಗ್ಗೆ 10 ಗಂಟೆಗೆ ಮಧ್ಯವಯಸ್ಕ ಮಹಿಳೆಗೆ ತುರ್ತು ಲ್ಯಾಪರೊಸ್ಕೋಪಿಕ್ ಪಿತ್ತಕೋಶದ ಶಸ್ತ್ರಚಿಕಿತ್ಸೆಯನ್ನು ಮಾಡಲು ದಿನಾಂಕ ನಿಗದಿ ಮಾಡಿದ್ದರು.

ಆದರೆ ಅವರು ಸರ್ಜಾಪುರ, ಮಾರತಹಳ್ಳಿ(Marathalli) ಮಾರ್ಗದ ಬಿಗಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರು. ವೈದ್ಯರು ಹೆಚ್ಚು ಕಾಲ ಯೋಚಿಸದೆ, ತಮ್ಮ ಕಾರನ್ನು ಚಾಲಕನೊಂದಿಗೆ ಬಿಟ್ಟು 3 ಕಿ.ಮೀ ದೂರದ ಆಸ್ಪತ್ರೆಗೆ ಓಡಿ,

ನಿರ್ಣಾಯಕ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮುಗಿಸಿದರು. ಶಸ್ತ್ರಚಿಕಿತ್ಸೆ ಉತ್ತಮವಾಗಿ ನಡೆದಿದ್ದು, ರೋಗಿಯನ್ನು ಸಮಯಕ್ಕೆ ಸರಿಯಾಗಿ ಡಿಸ್ಚಾರ್ಜ್ ಮಾಡಲಾಗಿದೆ.

https://youtu.be/zi6g-d3dDwM

ಈ ಬಗ್ಗೆ ಮಾತನಾಡಿದ ವೈದ್ಯ, “ನಾನು ಪ್ರತಿ ದಿನ ಬೆಂಗಳೂರಿನ ಮಧ್ಯಭಾಗದಿಂದ ಬೆಂಗಳೂರಿನ ಆಗ್ನೇಯ ಭಾಗದಲ್ಲಿರುವ ಸರ್ಜಾಪುರದ ಮಣಿಪಾಲ್ ಆಸ್ಪತ್ರೆಗಳಿಗೆ ಪ್ರಯಾಣಿಸುತ್ತೇನೆ.

ನಾನು ಶಸ್ತ್ರಚಿಕಿತ್ಸೆಗೆ ಸಮಯಕ್ಕೆ ಸರಿಯಾಗಿ ಮನೆಯಿಂದ ಹೊರಟೆ. ಆದ್ರೆ, ಟ್ರಾಫಿಕ್ ಬಿಗಿಯಾಯಿತು.

ಹೀಗಾಗಿ ನಾನು ಆಸ್ಪತ್ರೆಗೆ ಕಾರನ್ನು ಡೃೈವರ್ ಬಳಿ ಬಿಟ್ಟು, 3 ಕಿ.ಮೀ ಓಡಿ ಆಸ್ಪತ್ರೆ ತಲುಪಿದೆ. ಆಸ್ಪತ್ರೆ ತಲುಪಿದ ತಕ್ಷಣ ನನ್ನ ತಂಡವು ಸಿದ್ಧವಾಗಿತ್ತು ಮತ್ತು ಶಸ್ತ್ರಚಿಕಿತ್ಸೆ ಮಾಡಲು ಸಿದ್ಧವಾಗಿತ್ತು.

ಭಾರೀ ಟ್ರಾಫಿಕ್ ನೋಡಿ ಚಾಲಕನ ಬಳಿಯೇ ಕಾರು ಬಿಡಲು ನಿರ್ಧರಿಸಿ ಎರಡು ಬಾರಿ ಯೋಚಿಸದೆ ಆಸ್ಪತ್ರೆಯತ್ತ ಓಡಿದೆ” ಎಂದು ಡಾ.ಗೋವಿಂದ್ ನಂದಕುಮಾರ್ ಹೇಳಿದರು.

ಡಾ. ಗೋವಿಂದ್ ನಂದಕುಮಾರ್ ಅವರು ಸರ್ಜಾಪುರದ ಮಣಿಪಾಲ್ ಆಸ್ಪತ್ರೆಗಳಲ್ಲಿ ಗ್ಯಾಸ್ಟ್ರೋಎಂಟರಾಲಜಿ ಸಲಹೆಗಾರರಾಗಿದ್ದಾರೆ. ಮಂಗಳವಾರ, ಆಗಸ್ಟ್ 30 ರಂದು,

ದೀರ್ಘಕಾಲದವರೆಗೆ ಪಿತ್ತಕೋಶದ ಕಾಯಿಲೆಯಿಂದ ಬಳಲುತ್ತಿರುವ ಮಧ್ಯವಯಸ್ಕ ಮಹಿಳೆಗೆ ಲ್ಯಾಪರೊಸ್ಕೋಪಿಕ್ ಪಿತ್ತಕೋಶದ ಶಸ್ತ್ರಚಿಕಿತ್ಸೆಯನ್ನು ಮಾಡಲು ಡಾ ಗೋವಿಂದ್ ಸಿದ್ಧರಾಗಿದ್ದರು.

ಶಸ್ತ್ರಚಿಕಿತ್ಸೆಯ ವಿಳಂಬವು ಹೊಟ್ಟೆಯಲ್ಲಿ ತೀವ್ರವಾದ ನೋವನ್ನು ಉಂಟುಮಾಡುತ್ತದೆ. ರೋಗಿಯ ಮೇಲೆ ಅರಿವಳಿಕೆ ಪ್ರಯೋಗಿಸಲು ಸಿದ್ಧವಾಗಿದ್ದ ಡಾ.ಗೋವಿಂದ್ ಅವರ ತಂಡ, ಅವರು ಆಪರೇಷನ್ ಥಿಯೇಟರ್ ತಲುಪಿದ ತಕ್ಷಣ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ : https://vijayatimes.com/kmf-decides-to-hike-milk-products/

ನಿಗದಿತ ಸಮಯಕ್ಕೆ ರೋಗಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ ಮತ್ತು ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಒಟ್ಟಾರೆ ವೈದ್ಯ ಗೋವಿಂದ್ ಅವರ ಈ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
Exit mobile version