ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ರಾಜ್ಯಸಭೆಗೆ ಸ್ಪರ್ಧೆ ?

ಬೆಂಗಳೂರು ಸೆ 18 :  ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಇವರು ರಾಜ್ಯದ ವಿವಿಧ  ವಿಭಾಗಗಳಲ್ಲಿ  ಸೇವೆ ಸಲ್ಲಿಸಿದ್ದು,  ಸದ್ಯ ರೈಲ್ವೇ ವಿಭಾಗದ ಎಡಿಜಿಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಿಜಿಪಿ ಮತ್ತು ಐಜಿಪಿ ಪ್ರವೀಣ್ ಸೂದ್ ಮತ್ತು ಸರ್ಕಾರಕ್ಕೆ ಪತ್ರ  ಬರೆದಿರುವ ತಮಗೆ ಅವಧಿಗೂ ಮುನ್ನ ನಿವೃತ್ತಿ ನೀಡಬೇಕೆಂದು ಕೋರಿದ್ದಾರೆ. 

ಈ ಬೆಳವಣಿಗೆಯ ನಡುವೆ ರಾಜಕೀಯಕ್ಕೆ ಎಂಟ್ರಿ ಕೊಡಲು ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ನಿರ್ಧರಿಸಿದ್ದು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗಷ್ಟೇ ನಿಧನರಾದ ಅಸ್ಕರ್ ಫರ್ನಾಂಡಿಸ್‌ ಅವರಿಂದ ತೆರವಾಗಿರುವ ಸ್ಥಾನದ ಮೇಲೆ ಭಾಸ್ಕರ್ ರಾವ್ ಕಣ್ಣಿಟ್ಟಿರುವ ಬಗ್ಗೆ ವರದಿಯಾಗಿದ್ದು, ಸದ್ಯದಲ್ಲೇ ಒಂದು ರಾಜ್ಯಸಭಾ ಸ್ಥಾನದ ಉಪ-ಚುನಾವಣೆ ಎದುರಾಗಲಿದ್ದು ಆ ಉಪ-ಚುನಾಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಭಾಸ್ಕರ್ ರಾವ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ರಾಜ್ಯಸಭಾ ಉಪ-ಚುನಾವಣೆಗೆ ಸ್ಪರ್ಧೆ ಮಾಡಬೇಕೆಂಬ ನಿರ್ಧಾರದ ಹಿನ್ನಲೆಯಲ್ಲಿ ಸ್ವಯಂ ನಿವೃತ್ತಿಗೆ ಭಾಸ್ಕರ್ ರಾವ್ ಮುಂದಾಗಿದ್ದಾರೆ ಎನ್ನಲಾಗಿದೆ.

Exit mobile version