ರಾಹುಲ್ ಗಾಂಧಿಗೆ ಬಿಗ್ ರಿಲೀಫ್ 2 ವರ್ಷಗಳ ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ

Delhi: ಕ್ರಿಮಿನಲ್ (Criminal) ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (big relief for rahulgandhi) ಗುಜರಾತ್ ಹೈಕೋರ್ಟ್ (High court) ನೀಡಿದ್ದ 2 ವರ್ಷಗಳ

ಶಿಕ್ಷೆಗೆ ಸುಪ್ರೀಂಕೋರ್ಟ ಮಧ್ಯಂತರ ತಡೆಆಜ್ಞೆ ನೀಡಿದೆ. ಆ ಮೂಲಕ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ (Big Relief) ಸಿಕ್ಕಂತಾಗಿದೆ.

ಇನ್ನು ಕಳೆದ ಮಾರ್ಚ್ (March) 23 ರಂದು ಸೂರತ್ (Surat) ಜಿಲ್ಲಾ ನ್ಯಾಯಾಲಯವು ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಿ ಎರಡು ವರ್ಷಗಳ ಶಿಕ್ಷೆ ವಿಧಿಸಿತ್ತು. ನಂತರ ರಾಹುಲ್ ಗಾಂಧಿ

(Rahul Gandhi) ಅವರನ್ನು ಕೇರಳದ (Kerala) ವಯನಾಡ್ ಲೋಕಸಭಾ ಸಂಸತ್ ಸ್ಥಾನದಿಂದ ಅನರ್ಹಗೊಳಿಸಲಾಯಿತು. ನಂತರ ಗುಜರಾತ್ (Gujarat) ಹೈಕೋರ್ಟಗೆ ಮೇಲ್ಮನವಿ ಸಲ್ಲಿಸಿದ್ದ ರಾಹುಲ್

ಗಾಂಧಿ ಅವರಿಗೆ ಹೈಕೋರ್ಟ್ನಲ್ಲಿ (High court) ಹಿನ್ನಡೆಯುಂಟಾಗಿತ್ತು. ಹೀಗಾಗಿ ರಾಹುಲ್ ಗಾಂಧಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಕೋರ್ಟ್ ಮೆಟ್ಟಿಲೇರಿದ್ದರು.

ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಖಂಡ ಅನುಜ್ ಚೌಧರಿ ಎಂಬುವರು ವಾಕಿಂಗ್ ಹೊರಟಿದ್ದಾಗ ಗುಂಡಿಕ್ಕಿ ಹತ್ಯೆ

ಇದೀಗ ರಾಹುಲ್ ಗಾಂಧಿಗೆ ಗರಿಷ್ಠ ಶಿಕ್ಷೆ ವಿಧಿಸಲು ಸೂರತ್ ನ್ಯಾಯಾಲಯ ಯಾವುದೇ ಕಾರಣವನ್ನು ನೀಡಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಅಭಿಪ್ರಾಯಪಟ್ಟಿದೆ. ಗರಿಷ್ಠ ಶಿಕ್ಷೆ ವಿಧಿಸಲು ವಿಚಾರಣಾ

ನ್ಯಾಯಾಧೀಶರು ಯಾವುದೇ ಕಾರಣವನ್ನು ನೀಡಿಲ್ಲ, ಅಂತಿಮ ತೀರ್ಪಿನವರೆಗೆ ಅಪರಾಧ ನಿರ್ಣಯದ ಆದೇಶವನ್ನು ತಡೆಹಿಡಿಯಬೇಕಾಗಿದೆ ಎಂದು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ (B R Gawai), ಪಿಎಸ್

ನರಸಿಂಹ ಮತ್ತು ಸಂಜಯ್ ಕುಮಾರ್ ಅವರ ತ್ರಿಸದಸ್ಯ ಪೀಠ ಹೇಳಿದೆ. ಈ ಮಧ್ಯೆ ರಾಹುಲ್ ಗಾಂಧಿ (Rahul Gandhi) ಅವರ “ಮಾತುಗಳು ಉತ್ತಮ ಅಭಿರುಚಿಯಲ್ಲಿಲ್ಲ” ಎಂದು ಹೇಳಿರುವ ಸುಪ್ರೀಂ ಕೋರ್ಟ್,

ಸಾರ್ವಜನಿಕ ಜೀವನದಲ್ಲಿ ಒಬ್ಬ ವ್ಯಕ್ತಿಯು “ಸಾರ್ವಜನಿಕ ಭಾಷಣ ಮಾಡುವಾಗ ಎಚ್ಚರಿಕೆ (big relief for rahulgandhi) ವಹಿಸಬೇಕು” ಎಂದು ಎಚ್ಚರಿಕೆ ನೀಡಿದೆ.

ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ ಅವರು ಜುಲೈ (July) 15 ರಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿ “ಮೋದಿ” ಉಪನಾಮಕ್ಕೆ ಸಂಬಂಧಿಸಿದಂತೆ ತಮ್ಮ ಆಪಾದಿತ ಹೇಳಿಕೆಗೆ ಸಂಬಂಧಿಸಿದ ಮಾನನಷ್ಟ

ಮೊಕದ್ದಮೆಯಲ್ಲಿ ಶಿಕ್ಷೆಯನ್ನು ಅಮಾನತುಗೊಳಿಸದಂತೆ ಗುಜರಾತ್ (Gujarat) ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿದ್ದರು.ಜುಲೈ 15 ರಂದು ಸುಪ್ರೀಂಕೋರ್ಟ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ

ಮನವಿಗೆ ಸಂಬಂಧಿಸಿದಂತೆ ಅರ್ಜಿದಾರ ಪೂರ್ಣೇಶ್ ಮೋದಿ (Poornesh Modi) ಮತ್ತು ಗುಜರಾತ್ (Gujarat) ಸರ್ಕಾರದಿಂದ ಪ್ರತಿಕ್ರಿಯೆಯನ್ನು ಕೋರಿತ್ತು.

ಇದೀಗ ಸುಪ್ರೀಕೋರ್ಟ್ (Supreme Court) ಮಧ್ಯಂತರ ತೀರ್ಪು ನೀಡಿದ್ದು, ಮುಂದಿನ ಅದೇಶದವರೆಗೂ ಹೈಕೋರ್ಟ್ (High Court) ನೀಡಿರುವ ತೀರ್ಪನ್ನು ಅಮಾನತುಗೊಳಿಸಿದೆ. ಇದೀಗ ರಾಹುಲ್ ಗಾಂಧಿ ಸಂಸದ

ಸ್ಥಾನದ ಅನರ್ಹತೆಯಿಂದ ಬಚಾವ್ ಆಗಿದ್ದು, ಕೇರಳದ ವೈಯನಾಡು (Wayanad) ಲೋಕಸಭೆ ಕ್ಷೇತ್ರದ ಸಂಸದರಾಗಿ ಮುಂದುವರಿಯಲಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಸ್ಪರ್ಧೆ ಮಾಡಬಹುದು.

ಮಹೇಶ್

Exit mobile version