Moradabad: ಬಿಜೆಪಿ ಮುಖಂಡ ಅನುಜ್ ಚೌಧರಿ (Anuj Chaudhary) ಅವರು ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ವಾಕಿಂಗ್‌ಗೆ (anuj Chaudhary death) ಹೊರಟಿದ್ದ ವೇಳೆ ಬೈಕ್‌ನಲ್ಲಿ ಬಂದ
ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಕೊಲೆ ಮಾಡಿಲಾಗಿದ್ದು, ಅವರ ನಿವಾಸದ ಹೊರ ಭಾಗದಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಗುರುವಾರ ಸಂಜೆ ನಡೆದಿದೆ ಎಂದು ಪೊಲೀಸರು (Police)
ತಿಳಿಸಿದ್ದಾರೆ. ಇದಕ್ಕೆ ಪಕ್ಷದ ಒಳಗಿನ ಕಿತ್ತಾಟ ಹಾಗೂ ದ್ವೇಷವೇ ಈ ಹತ್ಯೆಗೆ ಕಾರಣ (anuj Chaudhary death) ಎಂದು ಆರೋಪಿಸಲಾಗಿದೆ.

ಅನುಜ್ ಚೌಧರಿ ಅವರಿಗೆ 34 ವರ್ಷ ವಯಸ್ಸಾಗಿದ್ದು, ಅವರು ಮತ್ತೊಬ್ಬ ವ್ಯಕ್ತಿ ಜತೆ ಅಪಾರ್ಟ್‌ಮೆಂಟ್‌ನ (Apartment) ಹೊರಗೆ ವಾಕಿಂಗ್ ಮಾಡುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು
ಅವರ ಮೇಲೆ ಸುಮಾರು ಬಾರಿ ಗುಂಡುಗಳನ್ನು ಹಾರಿಸಿದ್ದಾರೆ. ಈ ಘಟನೆ ನಡೆದ ಕೂಡಲೇ ಚೌಧರಿ ಅವರನ್ನು ಮೊರಾದಾಬಾದ್‌ನ ಬ್ರೈಟ್ ಸ್ಟಾರ್ (Braight Star) ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆದರೆ ತೀವ್ರವಾಗಿ ಗಾಯಗೊಂಡಿದ್ದ ಅವರು ಅಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಝೋಲಾ (Majhola) ಪ್ರದೇಶದಲ್ಲಿ ನಡೆದ ಈ ಗುಂಡಿನ ದಾಳಿ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ (CCTV Camera) ಸೆರೆಯಾಗಿದ್ದು, ಸ್ಥಳೀಯ ರಾಜಕಾರಣದಲ್ಲಿ ಸಕ್ರಿಯರಾಗಿದ್ದ ಚೌಧರಿ,
ಬಿಜೆಪಿ ಕಿಸಾನ್ ಮೋರ್ಚಾದ (BJP Kisan Morcha) ಸದಸ್ಯರಾಗಿದ್ದರು. ಇತ್ತೀಚೆಗೆ ಸಂಭಾಲ್‌ನ (Sambhal) ಅಸ್ಮೋಲಿ ಬ್ಲಾಕ್‌ನಿಂದ ಬ್ಲಾಕ್ ಮುಖ್ಯಸ್ಥರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಕಂಡಿದ್ದರು
ಕುಟುಂಬದವರು ರಾಜಕೀಯ ವೈರತ್ವವೇ ಈ ಹತ್ಯೆಗೆ ಕಾರಣ ಎಂದು ಆರೋಪಿಸಿದ್ದಾರೆ. ಅಮಿತ್ ಚೌಧರಿ (Amit Choudhari) ಹಾಗೂ ಅನಿಕೇತ್ ಎಂಬುವವರ ಹೆಸರನ್ನು ಅವರು ಪೊಲೀಸರ ಮುಂದೆ ಹೇಳಿದ್ದಾರೆ.
ನಾಲ್ವರ ಬಂಧನ
ಸ್ನೇಹಿತನ ಜೊತೆ ಅವರು ವಾಯು ವಿಹಾರಕ್ಕಾಗಿ ಉದ್ಯಾನದ ಕಡೆಗೆ ಹೊರಟಿದ್ದಾಗ ಬೈಕ್‌ನಲ್ಲಿ ಬಂದ ಮೂವರು ಕಿರಾತಕರು ದಾಳಿ ಮಾಡಿದ್ದಾರೆ. ಘಟನೆ ಬಗ್ಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಾಹಿತಿ ಪಡೆದು
ತನಿಖೆ ನಡೆಸಿದ್ದಾರೆ. ಚೌಧರಿ (Chaudhary) ಅವರ ಕುಟುಂಬದವರು ನೀಡಿದ ದೂರಿನ ಅನ್ವಯ ನಾಲ್ವರು ಶಂಕಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅನುಜ್ (Anuj) ಅವರು 2021ರಲ್ಲಿ ಅಸ್ಮೋಲಿಯ ಬ್ಲಾಕ್ (Asmolia Block) ಮುಖ್ಯಸ್ಥರ ಚುನಾವಣೆಯಲ್ಲಿ ಕೇವಲ 10 ಮತಗಳ ಅಂತರದಿಂದ ಸೋಲು ಕಂಡಿದ್ದರು. ಅಸ್ಮೋಲಿಯ ಬ್ಲಾಕ್ ಮುಖ್ಯಸ್ಥೆ
ಸಂತೋಷ್ ದೇವಿ (Santhosh Devi) ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಲು ಅನುಜ್ ಸಿದ್ಧತೆ ನಡೆಸಿದ್ದರು. ಹಾಗಾಗಿ ಈ ವಿಷಯದಲ್ಲಿ ವಿವಾದಗಳು ಉಂಟಾಗಿದ್ದವು ಎನ್ನಲಾಗಿದೆ.
ಬೇರೊಂದು ಪ್ರಕರಣದಲ್ಲಿ ಜೈಲಿನಲ್ಲಿರುವ (Jail) ಮೋಹಿತ್ ಚೌಧರಿ ಹಾಗೂ ಆತನ ಸಹೋದರ ಅಮಿತ್ ಚೌಧರಿಗೆ ಅನುಜ್ ಚೌಧರಿ ಜತೆ ಈ ಹಿಂದೆ ಅನೇಕ ಬಾರಿ ಜಗಳಗಳು ನಡೆದಿದ್ದವು. ಪೊಲೀಸರು
ಸಂತೋಷ್ ದೇವಿಯ ಪತಿ ಪ್ರಭಾಕರ್ (Prabhakar), ಅವರ ಮಗ ಅನಿಕೇತ್ ಚೌಧರಿ (Aniket Choudhari) ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ .
ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.
ನಾಲ್ಕು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಎರಡು ಗುಂಪುಗಳ ನಡುವೆ ವೈಯಕ್ತಿಕ ದ್ವೇಷ ಇತ್ತು ಎಂದು ಹೇಳಲಾಗುತ್ತಿದೆ. ಆರೋಪಿಗಳನ್ನು ಹಿಡಿಯಲು ಐದು ತಂಡಗಳನ್ನು ರಚಿಸಲಾಗಿದ್ದು,
ಹುಡುಕುತ್ತಿರುವ ಆರೋಪಿಗಳನ್ನು ಬಂಧಿಸಿದ ಕೂಡಲೇ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೊರಾದಾಬಾದ್ (Moradabad) ಪೊಲೀಸರು ಹೇಳಿಕೆ ನೀಡಿದ್ದಾರೆ.
ಭವ್ಯಶ್ರೀ ಆರ್.ಜೆ