ಬೆಂಗಳೂರು : ಬೈಕ್‌ನಲ್ಲಿ ಬಂದು ನಕಲಿ ಅಪಘಾತ ಮಾಡಿ, ಹಣ ವಸೂಲಿ ಮಾಡಿದ ಇಬ್ಬರು ಅರೆಸ್ಟ್!

Bengaluru : ಬೆಂಗಳೂರಿನ ಬಸವನಗುಡಿ(bike fake an accident) ಬಳಿ ಅಪಘಾತದ ನೆಪ ಹೇಳಿ ನಾಲ್ಕಾರು ವಾಹನದ ಮಾಲೀಕರಿಂದ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು(Bengaluru Police) ಶನಿವಾರ ಬಂಧಿಸಿದ್ದಾರೆ.

ಅಪಘಾತಕ್ಕೀಡಾದವರಂತೆ ನಟಿಸಿ ಚಾಲಕರಿಂದ ಹಣಕ್ಕಾಗಿ ಬೇಡಿಕೆ ಇಡುವವರ ಬಗ್ಗೆ ಎಚ್ಚರವಿರುವಂತೆ ಬೆಂಗಳೂರು ನಗರ ಪೊಲೀಸರು ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(bike fake an accident) ಆದ ಸಿಸಿಟಿವಿ ದೃಶ್ಯಾವಳಿಯನ್ನು ಗಮನಿಸಿದ ಪೊಲೀಸರು ಕಟ್ಟೇಚ್ಚರ ವಹಿಸಿದ್ದಾರೆ.

ನಗರದಲ್ಲಿ ಈ ರೀತಿ ಸರಣಿ ನಕಲಿ ಅಪಘಾತ ಮಾಡುತ್ತಿದ್ದ ಜೋಡಿ ಈಗ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ರಸ್ತೆಯಲ್ಲಿ ತಮ್ಮ ಪಕ್ಕದಲ್ಲಿ ಹಾದು ಹೋಗುತ್ತಿದ್ದ ಕಾರಿಗೆ ತಮ್ಮ ಕೈಯಿಂದ ಹೊಡೆದಿದ್ದಾರೆ.

ತದನಂತರ, ಕಾರನ್ನು ಹಿಂಬಾಲಿಸಿಕೊಂಡು ಹೋಗಿ, ಕಾರಿನ ಮಾಲೀಕರನ್ನು ತಡೆದು,

https://youtu.be/8MxYLwWvSys ಮಲ್ಲೇಶ್ವರಂ : ಮಂದಗತಿ ಕಾಮಗಾರಿಯಿಂದ ವಾಹನ ಸವಾರರ ಪರದಾಟ!

ನನ್ನ ಬೈಕ್ಗೆ ಅಪಘಾತ(Accident) ಮಾಡಿದ್ದೀರ ಎಂದು ಹೇಳಿ ಹಣಕ್ಕಾಗಿ ಒತ್ತಾಯಿಸುತ್ತಾರೆ. ಕೇಳಿದ ಕೂಡಲೇ ಹಣ ಕೊಡಲು ನಿರಾಕರಿಸಿದರೆ,

ನಮ್ಮ ದ್ವಿಚಕ್ರ ವಾಹನಕ್ಕೆ ವೇಗದಲ್ಲಿ ಬಂದು ಡಿಕ್ಕಿ ಹೊಡೆದದ್ದು ನೀವು ಈಗ ಹಣ ಕೊಡಿ ಇಲ್ಲದ್ದಿದ್ದರೇ ನಿಮ್ಮ ವಿರುದ್ಧ ಪೊಲೀಸ್ ದೂರು ನೀಡುವುದಾಗಿ ಬೆದರಿಕೆ ಹಾಕುತ್ತಾರೆ.

ಇದೇ ರೀತಿ ಮಾಡಿರುವ ನಕಲಿ ಅಪಘಾತದ ಘಟನೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ(CCTV Camera) ಸೆರೆಯಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಅಕ್ಟೋಬರ್ 26 ರಂದು ಬೆಂಗಳೂರಿನ ಸಿದ್ದಾಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

https://twitter.com/DCPSouthBCP/status/1591291620926066688?s=20&t=6hQRJmKE-h1gObU5-iEyDA

ಆರೋಪಿಗಳು ವಾಹನ ಸವಾರರಿಂದ 15,000 ರೂ. ಹಣ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ.

ಈ ಮಾಹಿತಿಯನ್ನು ದಕ್ಷಿಣ ಬೆಂಗಳೂರು ಪೊಲೀಸ್ ಉಪ ಕಮಿಷನರ್ ಆದ ಪಿ.ಕೃಷ್ಣಕಾಂತ್ ಅವರು ತಮ್ಮ ಟ್ವೀಟರ್(Twitter) ಖಾತೆಯಲ್ಲಿ ಹಂಚಿಕೊಂಡಿದ್ದಾರೆ, “ರಸ್ತೆ ಅಪಘಾತಕ್ಕೆ ಬಲಿಯಾದವರಂತೆ ನಟಿಸಿದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.

ಆರೋಪಿಗಳು ಬೈಕ್‌ನಲ್ಲಿ ವೇಗವಾಗಿ ಬಂದು ಕಾರಿಗೆ ತಾವೇ ಡಿಕ್ಕಿ ಹೊಡೆದಿದ್ದಾರೆ ಮತ್ತು ನಂತರ ಅವರಿಗೆ ಬೆದರಿಕೆ ಹಾಕಿ, ಅಕ್ರಮವಾಗಿ 15,000 ರೂ.ಗಳನ್ನು ವಸೂಲಿ ಮಾಡಿದ್ದಾರೆ.

ಆರೋಪಿಗಳನ್ನು ಸದ್ಯ ನಾವು ಬಂಧಿಸಿದ್ದೇವೆ. 15,000 ರೂ. ಮತ್ತು ಒಂದು ಬೈಕನ್ನು ವಶಪಡಿಸಿಕೊಂಡಿದ್ದೇವೆ. ಇಂತಹ ಯಾವುದೇ ಘಟನೆ ನಿಮಗೆ ಕಂಡುಬಂದಲ್ಲಿ ದಯವಿಟ್ಟು ಪೊಲೀಸರಿಗೆ ತಿಳಿಸಿ” ಎಂದು ಮಾಹಿತಿ ನೀಡಿದ್ದಾರೆ.

ಆಗಸ್ಟ್‌ನಲ್ಲಿ ಇದೇ ರೀತಿಯ ಘಟನೆಯಲ್ಲಿ, ಬಸವನಗುಡಿ ಪೊಲೀಸ್ ವ್ಯಾಪ್ತಿಯಲ್ಲಿ ಅಪಘಾತಕ್ಕೀಡಾದವರೆಂದು ನಕಲಿ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಅವರ ಬಳಿಯಿದ್ದ ನಾಲ್ಕು ದ್ವಿಚಕ್ರ ವಾಹನಗಳು ಹಾಗೂ 40,000 ರೂ. ನಗದನ್ನು ಪೊಲೀಸರು ಈ ಹಿಂದೆ ವಶಪಡಿಸಿಕೊಂಡಿದ್ದಾರೆ.

Exit mobile version