ಸಂಸತ್ತಿನ ವಿಶೇಷ ಅಧಿವೇಶನಕ್ಕಾಗಿ ಸರ್ಕಾರದ ‘ತಾತ್ಕಾಲಿಕ ಪಟ್ಟಿ’ಯಲ್ಲಿ 4 ಮಸೂದೆಗಳು..!

New Delhi : ಸೆಪ್ಟೆಂಬರ್ (Bills on Govt Provisional List) 18 ರಿಂದ 22 ರವರೆಗಿನ ಸಂಸತ್ತಿನ ವಿಶೇಷ ಅಧಿವೇಶನದ ಕಾರ್ಯಸೂಚಿಯ ‘ತಾತ್ಕಾಲಿಕ ಪಟ್ಟಿ’ಯನ್ನು ಕೇಂದ್ರ ಸರ್ಕಾರವು

ಬಿಡುಗಡೆ ಮಾಡಿದೆ. ತಾತ್ಕಾಲಿಕ ಕಾರ್ಯಸೂಚಿಯು ಎರಡು ಮಸೂದೆಗಳನ್ನು ಒಳಗೊಂಡಿದೆ. ಆದರೆ ಇನ್ನು ಕೆಲವು ಮಸೂದೆಗಳನ್ನು ಮಂಡಿಸಲಿದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟನೆಯನ್ನು

ಕೇಂದ್ರ ಸರ್ಕಾರ ನೀಡಿಲ್ಲ.

ಸಂಸತ್ತಿನ ವಿಶೇಷ ಅಧಿವೇಶನದ ಕಾರ್ಯಸೂಚಿಯ ‘ತಾತ್ಕಾಲಿಕ ಪಟ್ಟಿ’ಯ ಪ್ರಕಾರ, ವಕೀಲರ (ತಿದ್ದುಪಡಿ) ಮಸೂದೆ, 2023, ನಿಯತಕಾಲಿಕಗಳ ಮುದ್ರಣ ಮತ್ತು ನೋಂದಣಿ ಮಸೂದೆ, 2023,

ಪೋಸ್ಟ್ ಆಫೀಸ್ ಬಿಲ್ (Post office Bill) , 2023 ಮತ್ತು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ)

ಮಸೂದೆ, 2023 ಅನ್ನು ಚರ್ಚಿಸಲು ಸರ್ಕಾರ ಸಿದ್ದವಾಗಿದೆ (Bills on Govt Provisional List) ಎಂದು ಹೇಳಲಾಗುತ್ತಿದೆ.

ಇನ್ನು ಕೇಂದ್ರ ಸರ್ಕಾರವು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯನ್ನು ಪ್ರಸ್ತಾಪಿಸುವ ಬಗ್ಗೆ ಊಹಾಪೋಹಗಳಿದ್ದರೂ, ಕೇಂದ್ರ ಸರ್ಕಾರವು ಹಂಚಿಕೊಂಡಿರುವ ತಾತ್ಕಾಲಿಕ ಪಟ್ಟಿಯಲ್ಲಿ

ಅದರ ಉಲ್ಲೇಖವಿಲ್ಲ. ವಿಶೇಷ ಅಧಿವೇಶನಕ್ಕೆ ಮುಂಚಿತವಾಗಿ, ಇಂಡಿಯಾವನ್ನು ಭಾರತ ಎಂದು ಮರುನಾಮಕರಣ ಮಾಡಲು ಸರ್ಕಾರ ನಿರ್ಣಯವನ್ನು ತರುತ್ತದೆ ಎಂಬ ಊಹಾಪೋಹವೂ ಇದ್ದು,

ಈ ಬಗ್ಗೆಯೂ ಯಾವುದೇ ಉಲ್ಲೇಖ ಇಲ್ಲ.

ಔಪಚಾರಿಕ ಸಂಸದೀಯ ವ್ಯವಹಾರಗಳ ಹೊರತಾಗಿ, ಸರ್ಕಾರದ ಸೂಚನೆಯಂತೆ ‘ಸಂವಿಧಾನ ಸಭೆಯಿಂದ ಆರಂಭವಾದ 75 ವರ್ಷಗಳ ಸಂಸತ್ತಿನ ಪಯಣ- ಸಾಧನೆಗಳು, ಅನುಭವಗಳು,

ನೆನಪುಗಳು ಮತ್ತು ಕಲಿಕೆಗಳು’ ವಿಷಯದ ಕುರಿತು ವಿಶೇಷ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ. ಸಂಸತ್ತಿನ ವಿಶೇಷ ಅಧಿವೇಶನ ಪ್ರಾರಂಭವಾಗುವ ಒಂದು ದಿನ ಮುಂಚಿತವಾಗಿ ಸೆಪ್ಟೆಂಬರ್

17 ರಂದು ಸರ್ಕಾರ ಸರ್ವಪಕ್ಷ ಸಭೆಯನ್ನು ಕರೆದಿದೆ. ಸಭೆಯಲ್ಲಿ ಪಾಲ್ಗೊಳ್ಳುವಂತೆ ವಿರೋಧ ಪಕ್ಷಗಳ ಎಲ್ಲ ನಾಯಕರಿಗೆ ಇ-ಮೇಲ್ (E-Mail) ಮೂಲಕ ಆಹ್ವಾನ ಕಳುಹಿಸಲಾಗಿದೆ ಎಂದು

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ವಿಶೇಷ ಅಧಿವೇಶನವು ಹಳೆಯ ಸಂಸತ್ತಿನ ಕಟ್ಟಡದಲ್ಲಿ ಪ್ರಾರಂಭವಾಗಲಿದೆ ಮತ್ತು ಮರುದಿನ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಹೊಸ ಸಂಸತ್ತಿನ ಕಟ್ಟಡಕ್ಕೆ ಶಿಫ್ಟ್

ಆಗುವುದು ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯೊಂದಿಗೆ ಹೊಂದಿಕೆಯಾಗುತ್ತದೆ, ಹೊಸ ಆರಂಭವನ್ನು ಮಾಡಲು ಮಂಗಳಕರವೆಂದು ಈ ದಿನವನ್ನು ಪರಿಗಣಿಸಲಾಗಿದೆ.

ಇದನ್ನು ಓದಿ: ದಲಿತ ಮತಬ್ಯಾಂಕ್ ಸೆಳೆಯಲು ಉತ್ತರ ಪ್ರದೇಶದಿಂದ ಮಲ್ಲಿಕಾರ್ಜುನ್ ಖರ್ಗೆ ಕಣಕ್ಕೆ..?!

Exit mobile version