Lucknow : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಅನೇಕ ತಂತ್ರಗಾರಿಕೆಗಳನ್ನು ರೂಪಿಸುತ್ತಿರುವ ಕಾಂಗ್ರೆಸ್ (Kharge compete in UP) ಇದೀಗ,
ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಉತ್ತರಪ್ರದೇಶದಿಂದ ಕಣಕ್ಕಿಳಿಸಲಿದೆ (Kharge compete in UP) ಎಂಬ ಮಾತುಗಳು ಕೇಳಿ ಬರುತ್ತಿವೆ.

ಉತ್ತರ ಪ್ರದೇಶದಲ್ಲಿ ದಲಿತ ಮತಬ್ಯಾಂಕ್ನ ಮೇಲೆ ಬಿಎಸ್ಪಿಯ ಪ್ರಭಾವದ ಕಡಿಮೆಯಾಗಿದ್ದು ಅದರ ಲಾಭ ಪಡೆಯಬೇಕಾದರೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge)
ಅವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಯಾವುದಾದರೂ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಉತ್ತರಪ್ರದೇಶದ ಕಾಂಗ್ರೆಸ್ ನಾಯಕರು ಬಯಸಿದ್ದಾರೆ ಎನ್ನಲಾಗಿದೆ.
ಉತ್ತರಪ್ರದೇಶ (Uttar Pradesh) ರಾಜ್ಯ ರಾಜಕೀಯದಲ್ಲಿ ಅತಂತ್ರ ಸ್ಥಿತಿಗೆ ತಲುಪಿರುವ ಕಾಂಗ್ರೆಸ್ಗೆ, ದಲಿತರು ಮತ್ತು ಮುಸ್ಲಿಮರ ಬೆಂಬಲವು ಕಾಂಗ್ರೆಸ್ ಪಕ್ಷವನ್ನು ಪುನರುಜ್ಜೀವನಗೊಳಿಸಲು ಮತ್ತು
ತನ್ನ ಗತ ವೈಭವವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ ಎಂಬ ಲೆಕ್ಕಾಚಾರ ಸ್ಥಳೀಯ ಕಾಂಗ್ರೆಸ್ ನಾಯಕರದ್ದು. ಹೀಗಾಗಿಯೇ ಕಾಂಗ್ರೆಸ್ ಈ ತಂತ್ರ ಹೆಣೆದಿದೆ ಎನ್ನಲಾಗಿದೆ.
ಇನ್ನು 2024ರ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ (ಎಸ್ಪಿ) ಬೆಂಬಲದೊಂದಿಗೆ ಖರ್ಗೆ ಅವರು ಮೀಸಲು ಕ್ಷೇತ್ರಗಳಾದ ಇಟಾವಾ ಅಥವಾ ಬಾರಾಬಂಕಿಯಿಂದ ಸ್ಪರ್ಧಿಸಲು ಪಕ್ಷ ಬಯಸಿದೆ ಎಂದು
ಯುಪಿ ಕಾಂಗ್ರೆಸ್ ಮೂಲಗಳು ತಿಳಿಸಿವೆ. ಖರ್ಗೆಯವರ ಉಮೇದುವಾರಿಕೆಯು ದಲಿತ ಮತದಾರರನ್ನು I.N.D.I.A ಪರವಾಗಿ ಪ್ರೇರೇಪಿಸಲು ಮತ್ತು ರಾಜ್ಯದಲ್ಲಿ ಎಸ್ಪಿ ಮತ್ತು ಇತರ ಮಿತ್ರಪಕ್ಷಗಳಿಗೆ
ಸಹಾಯವಾಗುತ್ತದೆ ಎನ್ನಲಾಗಿದೆ.

ಈ ನಡುವೆ ಹೊಸದಾಗಿ ನೇಮಕಗೊಂಡ ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ (Ajay Rai) ಅವರು ಯುಪಿಯಲ್ಲಿನ ಮೀಸಲು ಕ್ಷೇತ್ರದಿಂದ ಖರ್ಗೆಯವರ ಉಮೇದುವಾರಿಕೆಯ ಸಾಧ್ಯತೆಯ ವರದಿಗಳ ಬಗ್ಗೆ
ಪ್ರತಿಕ್ರಿಯಿಸದಿದ್ದರೂ, ದಲಿತರ ಮೇಲೆ ಮಾಯಾವತಿಯವರ ಪ್ರಭಾವವು ‘ಕ್ಷೀಣಿಸುತ್ತಿದೆ’ ಹೀಗಾಗಿ ನಮ್ಮ ಪಕ್ಷವು “ನೈಸರ್ಗಿಕ ಆಯ್ಕೆಯಾಗಿದೆ” ಎಂದು ಅವರು ಹೇಳಿದ್ದಾರೆ.
ಇನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಅವರು ಅಮೇಥಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಅಜಯ್ ರೈ ಈ
ಹಿಂದೆ ಹೇಳಿದ್ದರು. ಅದೇ ರೀತಿ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರತಿನಿಧಿಸುತ್ತಿರುವ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದರೆ ಪಕ್ಷದ ಪ್ರಧಾನ ಕಾರ್ಯದರ್ಶಿ
ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರ ಗೆಲುವನ್ನು ಖಚಿತಪಡಿಸಿಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಎಲ್ಲ ಶಕ್ತಿಯನ್ನು ವ್ಯಯಿಸಲಿದ್ದಾರೆ ಎಂದು ಅವರು ಹೇಳಿದ್ದರು.
ಆದರೆ ರಾಯ್ಬರೇಲಿಯಿಂದ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರು ಆರೋಗ್ಯದ ಕಾರಣದಿಂದ ಸ್ಪರ್ಧೆಯಿಂದ ಹೊರಗುಳಿಯಲು ನಿರ್ಧರಿಸಿದರೆ ಪ್ರಿಯಾಂಕಾ
ಅವರು ರಾಯ್ಬರೇಲಿಯಿಂದ ಸ್ಪರ್ಧಿಸಬಹುದು ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ: ನೀಫಾ ವೈರಸ್ ಎಚ್ಚರ : ಕೇರಳದಲ್ಲಿ ನಿಫಾ ವೈರಸ್ ಹೆಚ್ಚಳ ಕರ್ನಾಟಕದಲ್ಲೂ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್