ಸಿದ್ದು ಬಯೋಪಿಕ್‌ : ಸಿದ್ದರಾಮಯ್ಯ ಪಾತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ

Bengaluru : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Biopic of Siddaramaiah) ಅವರ ಜೀವನಾಧಾರಿತ ಚಿತ್ರವೊಂದನ್ನು ನಿರ್ಮಿಸಲು ನಿರ್ಮಾಪಕರೊಬ್ಬರು ಮುಂದಾಗಿದ್ದಾರೆ. ಮೂಲಗಳ ಪ್ರಕಾರ,

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರ  ಪಾತ್ರದಲ್ಲಿ ನಟಿಸಲು ತಮಿಳು ನಟ ವಿಜಯ್ ಸೇತುಪತಿ (Biopic of Siddaramaiah) ಅವರನ್ನು ಸಂಪರ್ಕಿಸಲಾಗಿದೆ.

ಆದರೆ ಈ ಕುರಿತು ವಿಜಯ್ ಸೇತುಪತಿ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಇನ್ನು ತನ್ನ ಜೀವನಾಧಾರಿತ ಚಿತ್ರವೊಂದನ್ನು ನಿರ್ಮಿಸಲು ಕಾಂಗ್ರೆಸ್‌ ನಾಯಕ (Congress) ಸಿದ್ದರಾಮಯ್ಯ ಅವರು ಇನ್ನೂ ಅಧಿಕೃತ ಒಪ್ಪಿಗೆ ನೀಡಿಲ್ಲ.

ಸಿದ್ದರಾಮಯ್ಯ ಅವರ ಬೆಂಬಲಿಗರು ಈ ಬಯೋಪಿಕ್‌ ನಿರ್ಮಿಸಲು ಒಪ್ಪಿಗೆ ನೀಡಬೇಕೆಂದು ಬಯಸಿದ್ದಾರೆ. ಸಿನಿಮಾದಲ್ಲಿ ಸಿದ್ದರಾಮಯ್ಯನ ಅವರ ಪಾತ್ರದಲ್ಲಿ ನಟಿಸುವಂತೆ ಅನೇಕ ಕಾಂಗ್ರೆಸ್‌ನಾಯಕರು ತಮಿಳು ನಟ ವಿಜಯ್ ಸೇತುಪತಿ ಅವರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ : https://vijayatimes.com/self-funded-schools/

ವಿಜಯ್ ಸೇತುಪತಿ ಅವರ ಇತ್ತೀಚಿನ ಕಾಪ್ ಚಿತ್ರ ಡಿಎಸ್‌ಪಿಯ ಅಧಿಕೃತ ಟ್ರೇಲರ್ ಈ ವಾರದ ಆರಂಭದಲ್ಲಿ ಬಿಡುಗಡೆಯಾಯಿತು. ಸದ್ಯ ತಮಿಳು ಸೇರಿದಂತೆ,

ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಅಭಿನಯದ ಮೂಲಕ ಹೆಸರು ಮಾಡಿರುವ ವಿಜಯ್ ಸೇತುಪತಿ ಸಿದ್ದರಾಮಯ್ಯನವರ ಜೀವನಾಧಾರಿತ ಚಿತ್ರದಲ್ಲಿ ಸಿದ್ದರಾಮಯ್ಯನವರ ಪಾತ್ರ ಮಾಡಿದರೆ ಹೆಚ್ಚಿನ ಮನ್ನಣೆ ಗಳಿಸಬಹುದು,

https://fb.watch/h6GjblqLDv/ ಚಿತ್ರದುರ್ಗ, ಹೊಳಲ್ಕೆರೆ : ಪಾಳುಬಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ!

ಎಂಬುದು ಚಿತ್ರದ ತಂಡದ ಲೆಕ್ಕಾಚಾರವಾಗಿದೆ. ಇನ್ನು ಸಿದ್ದರಾಮಯ್ಯ ಅವರು ನಾನು ಯಾವುದೇ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಮುಂದಿನ ವಾರ ಅವರ ಜೀವನದ ಕುರಿತಾದ ಬಯೋಪಿಕ್‌ಗೆ ಅವರು ಒಪ್ಪಿಗೆ ನೀಡುವ ಸಾಧ್ಯತೆಯಿದೆ.

ಭಾರತೀಯ ಚಿತ್ರರಂಗದಲ್ಲಿ ಅನೇಕ ರಾಜಕೀಯ ನಾಯಕರ ಜೀವನಾಧಾರಿತ ಚಿತ್ರಗಳನ್ನು ನಿರ್ಮಿಸಲಾಗಿದೆ. ಇಂದಿರಾ ಗಾಂಧಿ,(Indira Gandhi) ಲಾಲ್‌ಬಹುದ್ದೂರ್‌ಶಾಸ್ತ್ರಿ,

ಬಾಳಾ ಠಾಕ್ರೆ, ನೆಹರೂ, ಮನ್‌ಮೋಹನ್‌ಸಿಂಗ್‌ ಮತ್ತು ನರೇಂದ್ರ ಮೋದಿ (Narendra Modi) ಸೇರಿದಂತೆ ಅನೇಕ ರಾಜಕೀಯ ನಾಯಕರ ಚಿತ್ರಗಳನ್ನು ನಿರ್ಮಾಣ ಮಾಡಲಾಗಿದೆ.
Exit mobile version