ಬಾಯಿಗೆ ಕಹಿಯಾದರು, ಉತ್ತಮ ಆರೋಗ್ಯಕ್ಕೆ ಸಿಹಿ ಈ ಹಾಗಲಕಾಯಿ ; ಹಾಗಲಕಾಯಿಯ ಮನೆಮದ್ದು!

bitter gourd

ಹಾಗಲಕಾಯಿ(Bitter Gourd) ಹೆಚ್ಚಿನ ಜನರಿಗೆ ಇಷ್ಟವಾಗುವುದಿಲ್ಲ. ಆದರೆ ಕೇವಲ 1 ಹಾಗಲಕಾಯಿ ನಿಮ್ಮ ಮುಖಕ್ಕೆ ಜಾದು ಮಾಡುತ್ತೆ, ಇದು ನಿಮ್ಮನ್ನು ಹಲವು ವರ್ಷಗಳವರೆಗೆ ಯುವಕರನ್ನಾಗಿರಿಸುತ್ತದೆ. ಹೊಳೆಯುವ ಮತ್ತು ತಾರುಣ್ಯದ ಚರ್ಮವನ್ನು ಪಡೆಯಲು ಹಾಗಲಕಾಯಿಯನ್ನು ಹೇಗೆ ಬಳಸುವುದು ಎಂದು ತಿಳಿಯೋಣ ಮುಂದೆ ಓದಿ.

ಹಾಗಲಕಾಯಿ ಆರೋಗ್ಯ ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಏಕೆಂದರೆ ಇದು ರಕ್ತ ಶುದ್ಧೀಕರಣ, ಆಂಟಿ ಆಕ್ಸಿಡೆಂಟ್‌ಗಳು, ವಿಟಮಿನ್ ಸಿ, ವಿಟಮಿನ್ ಎ ಮತ್ತು ಆಂಟಿ ಏಜಿಂಗ್ ಗುಣಗಳನ್ನು ಹೊಂದಿದೆ. ಹಾಗಲಕಾಯಿ ಫೇಸ್ ಪ್ಯಾಕ್‌ನ್ನು ಬಳಸುವ ಮೂಲಕ ನೀವು ಮೊಡವೆ, ಸುಕ್ಕುಗಳು, ಸಡಿಲವಾದ ಚರ್ಮ, ಕಲೆರಹಿತ ಚರ್ಮ ಮತ್ತು ಎಸ್ಜಿಮಾ, ತುರಿಕೆ ಮುಂತಾದ ಚರ್ಮದ ಸೋಂಕುಗಳನ್ನು ತೊಡೆದುಹಾಕಬಹುದು.


ಮೊದಲಿಗೆ, 1 ಹಾಗಲಕಾಯಿಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಕುದಿಸಿ. ಅದು ಮೃದುವಾದಾಗ, ಅದನ್ನು ಹೊರತೆಗೆದು ತಣ್ಣಗಾಗಿಸಿ. ಇದರ ನಂತರ, ಬೀಜಗಳನ್ನು ತೆಗೆದುಕೊಂಡು ಹಾಗಲಕಾಯಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಸಮವಾಗಿ ಹಚ್ಚಿ ಮತ್ತು ಒಣಗಿದ ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ. ನೆನಪಿನಲ್ಲಿಡಿ, ಈ ಹಾಗಲಕಾಯಿ ಫೇಸ್ ಪ್ಯಾಕ್ ಅನ್ನು ವಾರಕ್ಕೊಮ್ಮೆ ಮಾತ್ರ ಬಳಸಬೇಕು.
ಇನ್ನು ಹಾಗಲಕಾಯಿಯ ರಸವನ್ನು ಕುಡಿಯುವ ಬದಲು, ಅದನ್ನು ಮುಖಕ್ಕೆ ಹಚ್ಚಿ.

ಇದಕ್ಕಾಗಿ, 2 ಚಮಚ ಹಾಗಲಕಾಯಿಯ ರಸವನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಅಲೋವೆರಾ ಜೆಲ್ ಸೇರಿಸಿ. ನಂತರ ಇದನ್ನು ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಅದು ಡ್ರೈ ಆದ ಬಳಿಕ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ. ಮೊಡವೆ, ಕಲೆಗಳನ್ನು ತೆಗೆದುಹಾಕಲು ನಿಯಮಿತವಾಗಿ ಈ ಪರಿಹಾರವನ್ನು ಅನುಸರಿಸಿ. ಸೆಕೆ ಬೊಕ್ಕೆಯನ್ನು ನಿವಾರಿಸೋಕೆ, ಹಾಗಲಕಾಯಿ ತುಂಡುಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಬೇಯಿಸಿ. ನೀರು ಸ್ವಲ್ಪ ಹಸಿರು ಬಣ್ಣಕ್ಕೆ ತಿರುಗುವಾಗ ಕುದಿಸುವುದನ್ನು ನಿಲ್ಲಿಸಿ.

ನೀರು ತಣ್ಣಗಾಗಲು ಬಿಡಿ. ಹತ್ತಿ ಉಂಡೆಯನ್ನು ಬಳಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ತೊಳೆಯಿರಿ. ಬೇಸಿಗೆಯಲ್ಲಿ ಇದನ್ನು ನಿಯಮಿತವಾಗಿ ಬಳಸಿಕೊಳ್ಳಬಹುದು. ಅಕಾಲಿಕವಾಗಿ ಬಿಳಿಯಾಗುವ ಕೂದಲಿಗೆ, ಹಾಗಲಕಾಯಿಯನ್ನು ಚೆನ್ನಾಗಿ ಜಜ್ಜಿ, ಅದರಿಂದ ದಪ್ಪ ರಸವನ್ನು ಪಡೆದು, ಆ ರಸವನ್ನು ಬಿಳಿಬಣ್ಣದ ಕೂದಲುಗಳಿಗೆ ಹಚ್ಚಿರಿ ಹಾಗೂ ಅದನ್ನು ಒಂದೆರಡು ತಾಸುಗಳ ಕಾಲ ಕೂದಲಲ್ಲಿ ಹಾಗೆಯೇ ಒಣಗಲು ಬಿಡಿ. ಬಳಿಕ ಕೇಶರಾಶಿಯನ್ನು ಚೆನ್ನಾಗಿ ತೊಳೆದುಕೊಳ್ಳಿರಿ. ಕೂದಲು ಸಹಜವಾಗಿಯೇ ಒಣಗಲಿ.

ಕೇಶರಾಶಿಯ ಬಿಳಿಬಣ್ಣವನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತೀ ಹತ್ತು ದಿನಗಳಿಗೊಮ್ಮೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿರಿ ಉತ್ತಮ ಫಲಿತಾಂಶ ನಿಮಗೆ ದೊರೆಯುತ್ತದೆ.

Exit mobile version