ಕವಿ ಕುವೆಂಪು ಅವರ ಸಾಲುಗಳನ್ನೇ ಬದಲಿಸಿದ ಕಾಂಗ್ರೆಸ್ ಸರ್ಕಾರ: ಬಿಜೆಪಿ ಕೆಂಡಾಮಂಡಲ

Bengaluru: ರಾಜ್ಯ ಕಾಂಗ್ರೆಸ್ (Congress) ಸರ್ಕಾರ ಇದೀಗ ಹೊಸದೊಂದು ವಿವಾದಕ್ಕೆ ಸಿಲುಕಿದೆ. ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ರಾಷ್ಟ್ರಕವಿ ಕುವೆಂಪು ಅವರ ಮೂಲ ಕವಿತೆಯ ಸಾಲುಗಳಿಗೆ ಬದಲಾಗಿ ಬೇರೆ ಸಾಲುಗಳನ್ನು ಬರೆಯಲಾಗಿದೆ.

ಕುವೆಂಪು ಅವರ ‘ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ’ ಎಂಬ ಸಾಲುಗಳಿಗೆ ಬದಲಾಗಿ, ‘ಜ್ಞಾನ ದೇಗುಲವಿದು, ದೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾವಣೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಮೊರಾರ್ಜಿ ದೇಸಾಯಿ (Morarji Desai) ವಸತಿ ಶಾಲೆಗಳಲ್ಲಿ ಈ ಹೊಸ ಬರಹ ಕಾಣಿಸುತ್ತಿದೆ. ರಾಜ್ಯ ಸರ್ಕಾರದ ಸುತ್ತೋಲೆ ಪ್ರಕಾರ ನಾವು ಹೀಗೆ ಬದಲಾವಣೆ ಮಾಡಿದ್ದೇವೆ. ‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’ ಎಂದು ಬರಹ ಬದಲಾವಣೆ ಮಾಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ವಿಜಯಪುರ (Vijayapura) ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುಂಡಲೀಕ ಮಾನವರ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಈ ಸ ನೂತನ ಸುತ್ತೋಲೆ ವಿರುದ್ದ ಕಿಡಿಕಾರಿರುವ ವಿಪಕ್ಷ ನಾಯಕ ಆರ್. ಆಶೋಕ್ (R Ashok) ಅವರು, ಸರ್ಕಾರಿ ವಸತಿ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸುತ್ತಿದ್ದ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ” ಎಂಬ ರಾಷ್ಟ್ರಕವಿ ಕುವೆಂಪು (Kuvempu) ಅವರ ಅರ್ಥಪೂರ್ಣವಾದ ಸಾಲುಗಳನ್ನು ತೆಗೆದುಹಾಕಿ “ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ” ಎಂದು ಬದಲಾಯಿಸುವ ಮೂಲಕ ವಿದ್ಯಾರ್ಥಿಗಳ ತಲೆಯಲ್ಲಿ ಜಿಹಾದಿ ಮಾನಸಿಕತೆಯನ್ನ, ನಕ್ಸಲ್ ವಿಚಾರವಾದವನ್ನ ಬಿತ್ತಲು ಹೊರಟಿದೆ ಈ ಹಿಂದೂ ವಿರೋಧಿ, ದೇಶದ್ರೋಹಿ ಸಿದ್ದರಾಮಯ್ಯನವರ ಸರ್ಕಾರ.

ಶಾಲಾ-ಕಾಲೇಜುಗಳಲ್ಲಿ ಸರಸ್ವತಿ ಪೂಜೆ ಮಾಡಬಾರದು, ಹಿಂದೂ ಹಬ್ಬ-ಹರಿದಿನಗಳನ್ನು ಆಚರಿಸಬಾರದು ಎಂದು ಸುತ್ತೋಲೆ ಹೊರಡಿಸಿ ನಂತರ ಜನರ ಆಕ್ರೋಶಕ್ಕೆ ಮಣಿದು ಅದನ್ನು ಹಿಂಪಡೆದ ಕಾಂಗ್ರೆಸ್ ಸರ್ಕಾರ ಈಗ ಸರ್ಕಾರಿ ಶಾಲಾ ಕಾಲೇಜುಗಳನ್ನ ನಕ್ಸಲ್ ಫ್ಯಾಕ್ಟರಿ ಮಾಡಲು ಹೊಂಚು ಹಾಕುತ್ತಿದೆ. ಸಿಎಂ ಸಿದ್ದರಾಮಯ್ಯನವರೇ (Siddaramaiah), ನಮ್ಮ ಕರ್ನಾಟಕದ ಮಕ್ಕಳ ತಲೆಯಲ್ಲಿ ನಿಮ್ಮ ಹೊಲಸು ತುಕಡೆ ತುಕಡೆ ರಾಜಕೀಯ, ಟೂಲ್ ಕಿಟ್ ಷಡ್ಯಂತ್ರ ತುಂಬಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಲು ನಾವು ಬಿಡುವುದಿಲ್ಲ.

ಈ ಕೂಡಲೇ ಎಲ್ಲ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಮೊದಲಿನಂತೆ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ” ಎಂಬ ಘೋಷವಾಕ್ಯ ಹಾಕುವಂತೆ ಅದೇಶ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.

Exit mobile version