ಸಿದ್ದುಗೆ ದಲಿತರ ಸಾಲಮನ್ನಾ ನೆವದಲ್ಲಿ ಸಿಎಂ ಆಗುವ ಭ್ರಮೆ : ಬಿಜೆಪಿ ವ್ಯಂಗ್ಯ!

BJP

ದಲಿತರ ಅಭಿವೃದ್ದಿ ವಿಚಾರವಾಗಿ ಕಾಂಗ್ರೆಸ್(Congress) ಮತ್ತು ಬಿಜೆಪಿ(BJP) ನಡುವೆ ಟ್ವೀಟ್‍ರ್‍ನಲ್ಲಿ ಬಿರುಸಿನ ವಾಗ್ದಾದ ನಡೆದಿದೆ. ಎರಡು ಪಕ್ಷಗಳು ತಮ್ಮದೇ ಆದ ವಿಷಯಗಳ ಮೂಲಕ ಕಾಲೆಳೆದುಕೊಂಡಿವೆ. ಬಿಜೆಪಿ ಟ್ವೀಟ್‍ರ್‍ನಲ್ಲಿ ಮಾಜಿ ಸಿಎಂ(Former Minister) ಸಿದ್ದರಾಮಯ್ಯ(Siddaramaiah) ವಿರುದ್ದ ತೀವ್ರ ವಾಗ್ದಾಳಿ ನಡೆಸಿದೆ. ಅದರ ವಿವರ ಇಲ್ಲಿದೆ ನೋಡಿ.

ಬಿಜೆಪಿ ಬಿಟ್ಟ ಟ್ವೀಟ್ ಬಾಣಗಳು : ಮಾನ್ಯ ಸಿದ್ದರಾಮಯ್ಯ ಅವರೇ, ಇದು ನೀವು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯದ ವಿವರ. 358 ದಲಿತರು ಕೊಲ್ಲಲ್ಪಟ್ಟರು,
801 ದಲಿತ ಮಹಿಳೆಯರು ಅತ್ಯಾಚಾರಕ್ಕೊಳಗಾದರು, 9081 ದಲಿತ ದೌರ್ಜನ್ಯದ ಪ್ರಕರಣ ನಡೆದಿತ್ತು. ನೀವು ಮತ್ತೊಮ್ಮೆ ಸಿಎಂ ಆದರೆ ದಲಿತರ ಪಾಡೇನು? ರಾಜ್ಯದಲ್ಲಿ ದಲಿತ ಸಿಎಂ ಕೂಗು ಎದ್ದಾಗಲೆಲ್ಲ ಅದನ್ನು ಸಿದ್ದರಾಮಯ್ಯ ಅವರು #ಮೀರ್‍ಸಾದಿಕ್ ತನದಿಂದ ಸದ್ದಡಗಿಸುತ್ತಿದ್ದರು.

ನನಗಿಂತರ ದೊಡ್ಡ ದಲಿತ ಯಾರಿದ್ದಾರೆ ಎಂಬ ಹೇಳಿಕೆಯ ಮೂಲಕ ದಲಿತರನ್ನೆಂದಿಗೂ ಮುಖ್ಯಮಂತ್ರಿಯಾಗಲು ಬಿಡಲಾರೆ” ಎಂಬ ಸಂದೇಶ ರವಾನಿಸಿದ್ದು ಸುಳ್ಳೇ? ಸಿದ್ದರಾಮಯ್ಯನವರೇ, ನೀವು ಯಾರ ಹೆಗಲ ಮೇಲೆ ಬಂದೂಕಿಟ್ಟು, ಯಾರತ್ತ ಗುಂಡು ಹಾರಿಸುತ್ತಿದ್ದೀರಿ?
ದಲಿತರ ಸಾಲಮನ್ನಾ ನೆವದಲ್ಲಿ ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದೀರಿ. ಇದರರ್ಥ ಡಿಕೆಶಿ ಅವರನ್ನು ಕಪಾಲಿ ಬೆಟ್ಟಕ್ಕೆ ಪ್ರಾರ್ಥನೆಗೆ ಕಳುಹಿಸುವುದೇ?”

ಸಿದ್ದರಾಮಯ್ಯ ಅವರಂತಹ ದಲಿತ ವಿರೋಧಿ ನಾಯಕ ಇನ್ನೊಬ್ಬರಿಲ್ಲ.
ಪ್ರತಿಪಕ್ಷ ನಾಯಕ ಸ್ಥಾನಕ್ಕಾಗಿ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸ್ಥಾನಕ್ಕಾಗಿ ಡಾ.ಜಿ. ಪರಮೇಶ್ವರ್ ಅವರ ನಾಯಕತ್ವವನ್ನೇ ಮುಗಿಸಿದ ಸಿದ್ದರಾಮಯ್ಯ ಅವರು ದಲಿತರ ಸಾಲ ಮನ್ನಾದ ಬಗ್ಗೆ ಮಾತನಾಡುವುದು ಬೂಟಾಟಿಕೆಯಲ್ಲವೇ? ಅಧಿಕಾರದಲ್ಲಿದ್ದಾಗ ದಲಿತ ನಾಯಕರನ್ನು ಮುಗಿಸಿದ ಸಿದ್ದರಾಮಯ್ಯ ಅವರಿಗೆ ಈಗ ಇದೆಂತ ದಲಿತ ಪ್ರೀತಿ?”.

ಏಪ್ರಿಲ್ 1 2020 ರಿಂದ ಮಾರ್ಚ್ 31 2021 ರವರೆಗೆ ನಿಮ್ಮ ಆಡಳಿತದ 1 ವರ್ಷದ ಅವಧಿಯಲ್ಲಿ ದಲಿತರ ಮೇಲೆ 2327 ಪ್ರಕರಣ ದಾಖಲಾಗಿವೆ. ಇದರಲ್ಲಿ 2775 ಜನ ಅರೆಸ್ಟ್ ಆಗಿ 2945 ಚಾರ್ಜ್ ಶೀಟ್ ದಾಖಲಾಗಿದ್ದರೂ ಶಿಕ್ಷೆ ದೊರೆತಿದ್ದು ಕೇವಲ 50 ಮಂದಿಗೆ ದಲಿತರಿಗೆ ನ್ಯಾಯ ಒದಗಿಸಲಾಗದವರು ದಲಿತಪರ ಎನ್ನುವುದು ಹಾಸ್ಯಾಸ್ಪದವೇ ಸರಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.

Exit mobile version