ಹಾಲು ಸಹಕಾರಿ ಒಕ್ಕೂಟದಿಂದ ಪ್ರತಿದಿನ 2 ಕೋಟಿ ಗ್ರಾಹಕರು ವಂಚನೆಗೊಳಗಾಗುತ್ತಿದ್ದಾರೆ : ಅಣ್ಣಾಮಲೈ

bjp

ಚೆನ್ನೈ : ತಮಿಳುನಾಡು(Tamilnadu) ರಾಜ್ಯ ಸರ್ಕಾರದ(State Government) ಅಧೀನದಲ್ಲಿರುವ ತಮಿಳುನಾಡು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ (ಆವಿನ್‌) ಪ್ರತಿದಿನ 2 ಕೋಟಿ ಗ್ರಾಹಕರು ವಂಚನೆಗೊಳಗಾಗುತ್ತಿದ್ದಾರೆ ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ(BJP Chief) ಅಣ್ಣಾಮಲೈ(Annamalai) ಗಂಭೀರ ಆರೋಪ ಮಾಡಿದ್ದಾರೆ.

ತಮಿಳುನಾಡು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯಸ್ಥ ಅಣ್ಣಾಮಲೈ ಅವರು ಸರ್ಕಾರ ನಡೆಸುತ್ತಿರುವ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಪ್ರತಿದಿನ 2 ಕೋಟಿ ಗ್ರಾಹಕರು ವಂಚನೆಗೊಳಗಾಗುತ್ತಿದ್ದಾರೆ.

ತಮಿಳುನಾಡು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಮಾರಾಟ ಮಾಡುವ ಪ್ಯಾಕೆಟ್‌ಗಳಲ್ಲಿ ಹಾಲಿನ(Milk) ಪ್ರಮಾಣವನ್ನು ತೀವ್ರವಾಗಿ ಕಡಿಮೆ ಮಾಡಲಾಗುತ್ತಿದೆ. ಆ ಮೂಲಕ ವಂಚನೆ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕಿಡಿಕಾರಿದ್ದಾರೆ.

ತಮಿಳುನಾಡು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಮಾರಾಟ ಮಾಡುವ ಪ್ಯಾಕೆಟ್‌ಗಳಲ್ಲಿ 500 ಮಿಲಿ ಲೀಟರ್ ಹಾಲಿನ ಪ್ಯಾಕೆಟ್‌ನಲ್ಲಿ, ಕೇವಲ 430 ಮಿಲಿ ಲೀಟರ್ ಹಾಲು ಮಾತ್ರ ನೀಡಲಾಗುತ್ತಿದೆ. ಹೀಗೆ ಒಂದು ಪ್ಯಾಕೆಟ್‌ಗೆ ರೂ 3.08/- ವೆಚ್ಚವಾಗುತ್ತದೆ.

ತಮಿಳುನಾಡಿನಲ್ಲಿ ಪ್ರತಿ ದಿನ 70 ಲಕ್ಷ 500 ಎಂಎಲ್ ಪ್ಯಾಕೆಟ್ ಮಾರಾಟವಾಗುತ್ತಿದ್ದು, ಈ ಮೂಲಕ ಗ್ರಾಹಕರಿಂದ 2.16 ಕೋಟಿ ರೂ. ವಂಚನೆ ಮಾಡಲಾಗುತ್ತಿದೆ. ಈ ಹಣ ಯಾರಿಗೆ ಹೋಗುತ್ತಿದೆ ಎಂದು ಅಣ್ಣಾಮಲೈ ಪ್ರಶ್ನಿಸಿದ್ದಾರೆ.

ಒಂದು ವೇಳೆ ಇದು ಯಾಂತ್ರಿಕ ದೋಷವಾಗಿದ್ದರೆ, 5 ಲಕ್ಷ ಲೀಟರ್ ಹಾಲು ಹೆಚ್ಚುವರಿಯಾಗಿ ಉಳಿಯುತ್ತಿತ್ತು. ಆಗ ಇಷ್ಟು ಪ್ರಮಾಣದ ಹಾಲು ಏನಾಯಿತು? ಎಂಬ ಪ್ರಶ್ನೆ ಮೂಡುತ್ತದೆ. ಇದೊಂದು ವ್ಯವಸ್ಥಿತ ಹಗರಣವಾಗಿದೆ.

ಮುಖ್ಯಮಂತ್ರಿ ಮತ್ತು ಸಚಿವರು ಇದರಲ್ಲಿ ಭಾಗಿಯಾಗಿದ್ದಾರೆ. ಆದರೆ ಅವರೆಲ್ಲಾ ತಪ್ಪಿಸಿಕೊಂಡು, ಕೊನೆಗೆ ಇದು ಅಧಿಕಾರಿಗಳ ಮೇಲೆ ಬೀಳುತ್ತದೆ ಎಂದು ಅಣ್ಣಾಮಲೈ ಹೇಳಿದ್ದಾರೆ.
Exit mobile version