ಬಿ.ಎಲ್. ಸಂತೋಷ್ ಕುರಿತು ಟೀಕೆ ; ಕಾಂಗ್ರೆಸ್‌ – ಬಿಜೆಪಿ ವಾಗ್ದಾಳಿ

BJP

ಗ್ರಾಮ ಪಂಚಾಯ್ತಿ(Grama Panchayat) ಚುನಾವಣೆಯನ್ನೂ ಗೆಲ್ಲದ, ಗೆಲ್ಲಲಾಗದ ಬಿ.ಎಲ್ ಸಂತೋಷ್(BL Santhosh) ಎಂಬ ವ್ಯಕ್ತಿ ಸಂಪುಟ ಸಚಿವರಿಗೆ ಹೆಡ್‌ಮಾಸ್ಟರ್‌ನಂತೆ ಕ್ಲಾಸ್  ತೆಗೆದುಕೊಳ್ಳುವುದು ಬಿಜೆಪಿಯ(BJP) ದುರಂತ. ಸಿಎಂ ಬೊಮ್ಮಾಯಿ(Basavaraj Bommai), ಬಿ.ಎಲ್ ಸಂತೋಷ್ ಅವರೊಂದಿಗೆ ಸ್ಪಷ್ಟಪಡಿಸಿಕೊಂಡು ರಾಜ್ಯ ಸರ್ಕಾರದ ಆಡಳಿತ ನಡೆಸಲಿ ಎಂದು ಕಾಂಗ್ರೆಸ್‌ ಟೀಕಿಸಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅನೇಕ ಬಿಜೆಪಿ ನಾಯಕರು ಕಾಂಗ್ರೆಸ್‌(Congress) ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಒಂದು ಕುಟುಂಬದ ಪ್ರೈವೇಟ್ ಕಂಪೆನಿಯಾಗಿ ಹೈಕಮಾಂಡ್ ಸಂಸ್ಕೃತಿಗೆ ಒಗ್ಗಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಆಂತರಿಕ ಪ್ರಜಾಪ್ರಭುತ್ವ, ತಳಸ್ಪರ್ಶೀ ಸಂಘಟನೆ ಇವೆಲ್ಲವೂ ಮರೀಚಿಕೆಯಾಗಿರುವುದು ಅಚ್ಚರಿಯೇನಲ್ಲ. ಬಿಜೆಪಿ(BJP) ಕೇವಲ ಅಧಿಕಾರಕ್ಕಾಗಿ ಕಟ್ಟಿರುವ ರಾಜಕೀಯ ಪಕ್ಷವಲ್ಲ, ಸಾಮಾಜಿಕ ಪರಿವರ್ತನೆಯ ಗುರಿಯುಳ್ಳ ಶಿಸ್ತು, ಬದ್ಧತೆಯ ಸಂಘಟನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ(Health Department) ಸುಧಾಕರ(Dr. K Sudhakar) ಟ್ವೀಟ್‌(Tweet) ಮಾಡಿದ್ದಾರೆ.

ಪ್ರಜಾಪ್ರಭುತ್ವದ ಅರಿವೆಯೇ ಇಲ್ಲದೆ ಒಂದು ಕುಟುಂಬದ ಗುಲಾಮಗಿರಿಗೆ ಹೊಂದಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ, ಬಿಜೆಪಿಯ ಸಂಘಟನಾ ನೀತಿಗಳು ಅರ್ಥವಾಗುವುದಿಲ್ಲ. ಬಿಜೆಪಿ ಕಾರ್ಯಕರ್ತರ ಪಕ್ಷ. ಪ್ರತಿಯೊಬ್ಬರಿಗೂ ತಮ್ಮದೇ ಆದ ಸಾಮಾಜಿಕ ಹೊಣೆಗಾರಿಕೆ ಇರುವ ಶಿಸ್ತುಬದ್ಧ ಪಕ್ಷ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.  ಇಟಾಲಿಯನ್ನರ ಗುಲಾಮರೇ, ನಿಮ್ಮ ಕಲ್ಪನೆಯನ್ನು ಇತರರ ತಲೆಗೆ ಕಟ್ಟೋ ಮಾನಸಿಕ ಖಿನ್ನತೆ ಯಾಕೆ? ರಾಜ್ಯ ಕಾಂಗ್ರೆಸ್‌ ಪಕ್ಷದ ಮಂತ್ರಿಗಳು ಅಂಚೆಯಣ್ಣ ವೇಣುಗೋಪಾಲರ ಆಣತಿಗೆ ಕಾದು ಕೂತಿದ್ದನ್ನು ರಾಜ್ಯ ಮರೆತಿಲ್ಲ. 

ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಮಾರ್ಗದರ್ಶನದೊಂದಿಗೆ  ಬಸವರಾಜ ಬೊಮ್ಮಾಯಿ ಅವರು ಸರ್ಕಾರವನ್ನು ಮುನ್ನಡೆಸುತ್ತಿರುವುದೇ ಬಿಜೆಪಿಯ ಪ್ರಜಾಪ್ರಭುತ್ವದ ಹೆಗ್ಗುರುತು ಎಂದು ರಾಜ್ಯ ಬಿಜೆಪಿ ಘಟಕ ತಿಳಿಸಿದೆ.

Exit mobile version