ಕಾಂಗ್ರೆಸ್ ನಾಯಕರ ಕಳ್ಳ-ಪೊಲೀಸ್ ಆಟದ ಹಿಂದೆ ಡಿಕೆಶಿ ಪಾತ್ರವಿರುವುದು ನಿಜವಲ್ಲವೇ? : ರಾಜ್ಯ ಬಿಜೆಪಿ!

bjp

ರಾಜ್ಯದಲ್ಲಿ ಪಿಎಸ್‍ಐ ನೇಮಕಾತಿ(PSI Exam) ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ಕುರಿತು ಬೆಳಗಾವಿ(Belagavi) ಮಾಜಿ ಬಿಜೆಪಿ(BJP) ಮಹಿಳಾ ಅಧ್ಯಕ್ಷೆಯಾಗಿದ್ದ ದಿವ್ಯಾ ಹಾರಂಗಿ ಈ ಕೇಸ್‍ನ ಕಿಂಗ್ ಪಿನ್!

ಸದ್ಯ ಈ ಅಕ್ರಮ ಬೆತ್ತಲಾಗುತ್ತಿದ್ದಂತೆ ದಿವ್ಯಾ ಹಾಗರಗಿ(Divya Hagaragi) ಮನೆಬಿಟ್ಟು ಪರಾರಿಯಾಗಿದ್ದಾರೆ. ಈ ಕೇಸ್ ಈಗಾಗಲೇ ಮಹತ್ತರ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ರಾಜಕೀಯ ನಾಯಕರು ತಮ್ಮ ಆರೋಪಗಳನ್ನು ಸಮಯಕ್ಕೆ ಅನುಗುಣವಾಗಿ ಹೊರಬಿಡುತ್ತಿದ್ದಾರೆ. ಕಾಂಗ್ರೆಸ್-ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ಸಂಭವಿಸುತ್ತಿದೆ ವಿನಃ ಆರೋಪಿ ಪೊಲೀಸರ ಕೈತಪ್ಪಿಸಿಕೊಂಡಿರುವ ಕುರಿತು ಒಂದು ಮಾತು ಹೊರಬರುತ್ತಿಲ್ಲ! ಪಕ್ಷಗಳ ನಡುವೆ ಮಾತಿನ ಜಟಾಪಟಿ ಅಗ್ರಸ್ಥಾನವನ್ನು ಅಲಂಕರಿಸಿದೆ ಎಂದೇ ಹೇಳಬಹುದು.

ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಲಂಚಾರೋಪ ಹೊತ್ತಿರುವ ದಿವ್ಯಾ ಹಾಗರಗಿ, ರಾಜಕೀಯ ವಲಯದ ಪ್ರಮುಖ ನಾಯಕರೊಡನೆ ಫೋಟೋ ಪಡೆದಿದ್ದಾರೆ. ಬಿಜೆಪಿಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಗೃಹ ಮಂತ್ರಿಗಳಾದ ಅರಗ ಜ್ಞಾನೇಂದ್ರ ಅವರ ಜೊತೆಗೆ ತೆಗಿಸಿಕೊಂಡಿರುವ ಫೋಟೋ ಕುರಿತು ಕಾಂಗ್ರೆಸ್ ಟೀಕೆ ಪ್ರಹಾರ ಮಾಡಿತ್ತು! ಇದಕ್ಕೆ ತಕ್ಕಂತೆ ಮಂಗಳವಾರ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೊಡನೆ ದಿವ್ಯಾ ಹಾಗರಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಕೂಡಲೇ, ಬಿಜೆಪಿ ಕಿಂಗ್‍ಪಿನ್ ದಿವ್ಯಾ ಹಾಗರಗಿ ಜೊತೆಗೆ ಡಿಕೆಶಿ ಯಾಕೆ ನಿಂತಿದ್ದಾರೆ? ಈ ಹಗರಣದ ಹಿಂದೆ `ಕೈ’ ಇರಬಹುದಾ ಎಂಬ ಲೆಕ್ಕಾಚಾರವನ್ನು ಹಾಕಿತ್ತು.

ಈಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ಅವರನ್ನು ತನಿಖೆಗೆ ಹಾಜರಾಗುವಂತೆ ಪೊಲೀಸ್ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದರು. ಈ ನೋಟಿಸ್ ನೀಡಿದ್ದ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಯಾಕೆ ಹಾಜರಾಗಬೇಕು? ಎಂದು ಪ್ರಶ್ನಿಸುವ ಮುಖೇನ ತನಿಖೆಗೆ ಹಾಜರಾಗಿಲ್ಲ! ಈ ಕುರಿತು ಪರೋಕ್ಷವಾಗಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ” ಮಾಧ್ಯಮದವರ ಮುಂದೆ ಪ್ರಕರಣದ ತನಿಖಾಧಿಕಾರಿಯಂತೆ ವರ್ತಿಸುವ ಕಾಂಗ್ರೆಸ್ ನಾಯಕರು, ತನಿಖೆಗೆ ಸಹಕರಿಸುವಂತೆ ಪೊಲೀಸ್ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದಾಗ ಕಳ್ಳರಂತೆ ಹಿಂದೆ ಸರಿದ್ದಿದ್ದೇಕೆ?

ಕಾಂಗ್ರೆಸ್ ನಾಯಕರ ಕಳ್ಳ-ಪೊಲೀಸ್ ಆಟದ ಹಿಂದೆ ಡಿಕೆ ಶಿವಕುಮಾರ್ ಪಾತ್ರವಿರುವುದು ನಿಜ ಅಲ್ಲವೇ?” ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್‍ಗೆ ಟಕ್ಕರ್ ನೀಡಿದ್ದಾರೆ.

Exit mobile version