India : ಬೇರೆ ಬೇರೆ ರಾಜ್ಯಗಳಲ್ಲಿ ಮುಖ್ಯಮಂತ್ರಿಯಾಗಿ(Chief Minister) ಸೇವೆ ಸಲ್ಲಿಸುತ್ತಿದ್ದಾಗಲೇ,
ಹೈಕಮಾಂಡ್ ಸೂಚನೆ ಮೇರೆಗೆ ಆ ಹುದ್ದೆಗೆ ರಾಜೀನಾಮೆ(Resign) ಕೊಟ್ಟು ಹೊರಬಂದಿದ್ದ ಹಾಗೂ ಕೇಂದ್ರ ಸಚಿವ ಸ್ಥಾನ ಕಳೆದುಕೊಂಡಿದ್ದ ಬಿಜೆಪಿ(BJP) ನಾಯಕರಿಗೆ ಬಿಜೆಪಿ ಹೈಕಮಾಂಡ್, ಹೊಸ ಜವಾಬ್ದಾರಿಗಳನ್ನು ನೀಡಿದೆ.

2024ರ ಮಹಾ ಚುನಾವಣೆಗೆ ನಾನಾ ರಾಜ್ಯಗಳಲ್ಲಿ ಬಿಜೆಪಿಯನ್ನು ಸಂಘಟಿಸುವ ಹೊಣೆಗಾರಿಕೆಯನ್ನು ಅವರಿಗೆ ನೀಡಲಾಗಿದೆ.
ಇದೀಗ ಅವರಿಗೆ ರಾಜ್ಯಗಳ ಉಸ್ತುವಾರಿ ನೀಡುವ ಮೂಲಕ ಪಕ್ಷ ನಿಮ್ಮ ಸೇವೆಯನ್ನು ಗೌರವಿಸುತ್ತದೆ ಎಂಬ ಸಂದೇಶ ನೀಡಿದೆ.
ಹೈಕಮಾಂಡ್‌ನ (Highcommand) ಈ ಹೊಸ ನಿರ್ಧಾರದಿಂದ ಪಕ್ಷ ಸಂಘಟನೆಗೆ ಹೆಚ್ಚಿನ ಬಲ ಸಿಗಲಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಗುಜರಾತ್(Gujarat) ಮಾಜಿ ಮುಖ್ಯಮಂತ್ರಿ ವಿಜಯ್ ರುಪಾನಿ, ತ್ರಿಪುರಾ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇಬ್, ಕೇಂದ್ರದ ಮಾಜಿ ಸಚಿವರಾದ ಪ್ರಕಾಶ್ ಜಾವಡೇಕರ್ ಹಾಗೂ ಮಹೇಶ್ ಶರ್ಮಾ ಅವರಿಗೆ ಹೊಸ ಜವಾಬ್ದಾರಿಗಳನ್ನು ನೀಡಲಾಗಿದೆ.
ವಿಜಯ್ ರುಪಾಣಿಯವರಿಗೆ ಪಂಜಾಬ್ ನ ಬಿಜೆಪಿ ಉಸ್ತುವಾರಿ ವಹಿಸಲಾಗಿದ್ದರೆ, ಬಿಪ್ಲಬ್ ದೇಬ್ ಅವರಿಗೆ ಹರ್ಯಾಣ ಬಿಜೆಪಿಯ ಉಸ್ತುವಾರಿ ನೀಡಲಾಗಿದೆ.
ಇದನ್ನೂ ಓದಿ : https://vijayatimes.com/kerala-man-covers-his-face-from-honey-bee/
ಪ್ರಕಾಶ್ ಜಾವಡೇಕರ್ ಅವರಿಗೆ ಕೇರಳ ಬಿಜೆಪಿ(Kerala BJP) ಹೊಣೆಗಾರಿಕೆ ನೀಡಲಾಗಿದ್ದರೆ, ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿರುವ ವಿನೋದ್ ತಾವ್ಡೆ ಅವರಿಗೆ ಬಿಹಾರದ ಬಿಜೆಪಿ ಉಸ್ತುವಾರಿ ವಹಿಸಲಾಗಿದೆ.
ಈ ಮೊದಲು ತಾವ್ಡೆ ಅವರಿಗೆ ಹರ್ಯಾಣ ಬಿಜೆಪಿ ಉಸ್ತುವಾರಿ ವಹಿಸಲಾಗಿತ್ತು.
ಓಮ್ ಮಾಥೂರ್ ಅವರನ್ನು ಛತ್ತಿಸ್‌ಗಢಕ್ಕೆ ಮತ್ತು ಮಂಗಲ್ ಪಾಂಡೆ ಅವರನ್ನು ಪಶ್ಚಿಮ ಬಂಗಾಳಕ್ಕೆ ನೇಮಿಸಲಾಗಿದೆ. ಲಕ್ಷ್ಮಿಕಾಂತ್ ಬಾಜ್‌ಪಾಯ್ ಅವರನ್ನು ಜಾರ್ಖಂಡ್, ಡಾ. ಮಹೇಶ್ ಶರ್ಮಾ ಅವರನ್ನು ತ್ರಿಪುರಾ ರಾಜ್ಯಕ್ಕೆ ನೇಮಿಸಲಾಗಿದೆ.
ಕೆಲವು ನಾಯಕರಿಗೆ ಈಗಾಗಲೇ ವಹಿಸಲಾಗಿರುವ ಜವಾಬ್ದಾರಿಯಲ್ಲಿ ಅವರನ್ನು ಹಾಗೆಯೇ ಮುಂದುವರಿಸಲಾಗಿದೆ.

ಅರುಣ್ ಸಿಂಗ್ ಅವರನ್ನು ರಾಜಸ್ಥಾನ ಬಿಜೆಪಿಗೆ, ಮುರಳೀಧರ ರಾವ್ ಅವರನ್ನು ಮಧ್ಯಪ್ರದೇಶ ಬಿಜೆಪಿ ಉಸ್ತುವಾರಿಯಲ್ಲೇ ಮುಂದುವರಿಸಲಾಗಿದೆ.
ಕರ್ನಾಟಕದ ಬಿಜೆಪಿ ಉಸ್ತುವಾರಿಯನ್ನಾಗಿ 2020ರಲ್ಲಿ ನೇಮಕಗೊಂಡಿದ್ದ ಅರುಣ್ ಸಿಂಗ್ ಅವರನ್ನೇ ಬಿಜೆಪಿಯಲ್ಲಿ ಮುಂದುವರಿಸಲಾಗಿದೆ.