ಮೈತ್ರಿ ಮಾತುಕತೆ: ಬಿಜೆಪಿ- ಜೆಡಿಎಸ್ ನಡುವೆ ಮೈತ್ರಿಯಾದರೆ 28 ಸ್ಥಾನ ಗೆಲ್ಲುತ್ತೇವೆ ಕೆ.ಎಸ್.ಈಶ್ವರಪ್ಪ

Shimoga: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ (BJP-JDS to join hands) ನಡುವೆ ಮೈತ್ರಿ ಮಾತುಕತೆ ನಡೆಯುತ್ತಿದ್ದು, ಜೆಡಿಎಸ್ಗೆ ನಾಲ್ಕು ಸೀಟು ಬಿಟ್ಟು

ಕೊಡಲು ಬಿಜೆಪಿ ಹೈಕಮಾಂಡ್ ಮನಸ್ಸು ಮಾಡಿದೆ. ಆದರೆ ರಾಜ್ಯ ಬಿಜೆಪಿ ನಾಯಕರು ನಾಲ್ಕು ಸೀಟುಗಳನ್ನು ಬಿಟ್ಟುಕೊಡಲು ಸಾಧ್ಯವಿಲ್ಲ 3 ಸೀಟುಗಳನ್ನಷ್ಟೇ ಬಿಟ್ಟು ಕೊಡಬಹುದು ಎಂದು ಹೇಳಿದ್ದಾರೆ.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ಈ ಬಾರಿ 28 ಸ್ಥಾನವನ್ನೂ ಗೆಲ್ಲುತ್ತೇವೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಕೇವಲ ಒಂದು ಸ್ಥಾನ ಗೆದ್ದಿತ್ತು, ಈ ಚುನಾವಣೆಯಲ್ಲಿ ಕಾಂಗ್ರೆಸ್

ಒಂದು ಸ್ಥಾನವನ್ನೂ ಗೆಲ್ಲುವುದಿಲ್ಲ ಎಂದು ಬಿಜೆಪಿ ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ (K.S. Eshwarappa) ಅವರು ಹೇಳಿದ್ದಾರೆ.


ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿಸುವ ಎಲ್ಲರೂ ಒಗ್ಗಟ್ಟಾಗಿದ್ದು, ಕಾಂಗ್ರೆಸ್ (Congress) ನಿರ್ನಾಮ ಮಾಡುವ ದೃಷ್ಟಿಯಿಂದ ಹಾಗೂ ಲೋಕಸಭಾ ಚುನಾವಣಾ ದೃಷ್ಟಿಯಿಂದ ಒಂದಾಗಿದ್ದೇವೆ. ಅಲ್ಲದೆ ದೇಶವನ್ನು

ಉಳಿಸುವ ಸಲುವಾಗಿ ಬಿಜೆಪಿ (BJP-JDS to join hands) ಮತ್ತು ಜೆಡಿಎಸ್ ಮೈತ್ರಿ ಮಾಡಲಾಗುತ್ತಿದೆ ಎಂದರು.


ಈ ಹಿಂದೆ ದೇವೇಗೌಡರ‌ (Devegowda) ಜೊತೆ ನಾವೆಲ್ಲರು ಇದ್ದೆವು, ಅವರು ನಮ್ಮ ಜೊತೆ ಇದ್ದರು ಹಾಗೂ ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ನಾನು ಸಚಿವನಾಗಿ ಕೆಲಸ‌ ಮಾಡಿದ್ದೇನೆ.

ಹಾಗಾಗಿ ಜೆಡಿಎಸ್ ಜೊತೆ ಮೈತ್ರಿಯಾದರೆ ನಮ್ಮ ಪಕ್ಷಕ್ಕೆ ಒಳ್ಳೆಯದಾಗುವುದಲ್ಲದೆ ನಮಗೆ ಅವರೇ ಮುಂದೆ ಬಂದು ಬೆಂಬಲ ನೀಡುತ್ತೇವೆ ಬನ್ನಿ ಎನ್ನುತ್ತಿದ್ದಾರೆ ಎಂದು ಮೈತ್ರಿ ಬಗ್ಗೆ ವಿಜಯಪುರ

ನಗರದಲ್ಲಿ ಮಾತನಾಡಿದ ಸಂಸದ ರಮೇಶ್ ಜಿಗಜಿಣಗಿ ಅವರು ಈ ಎರಡು ಪಕ್ಷಗಳು ಮೈತ್ರಿಯಾದರೆ ಪಕ್ಷಕ್ಕೆ ಒಳ್ಳೆಯದು ಎಂದರು.


ಮೈತ್ರಿ ಅಧಿಕೃತ ಘೋಷಣೆಯಾಗಿಲ್ಲ:
ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ಶಾಸಕರಾದ ಸಿಎನ್ ಅಶ್ವತ್ಥ ನಾರಾಯಣ (C .N. Aswatha Narayan) ಅವರು NDA ಬಲಪಡಿಸಲು ಪ್ರಾದೇಶಿಕ ಪಕ್ಷಗಳು ಬೆಂಬಲ ಕೊಡುತ್ತಿದ್ದು,

ಬಿಜೆಪಿ ಜೊತೆ ಜೆಡಿಎಸ್(JDS) ಕೈಜೋಡಿಸಬೇಕೆಂಬ ಚರ್ಚೆ ಆಗುತ್ತಿದೆ. ಇನ್ನು ಈ ಮೈತ್ರಿಗೆ ಜೆಡಿಎಸ್ ನಾಯಕರು ಕೂಡ ಇಚ್ಛೆ ವ್ಯಕ್ತಪಡಿಸಿದ್ದು, ಆದರೆ ಮೈತ್ರಿ ಬಗ್ಗೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ.

ಕ್ಷೇತ್ರದ ಬಗ್ಗೆ ಕೇಳಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು ಹೇಳಿದ್ದು, ನಾವು ಕಳೆದ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳನ್ನು ಕಳೆದುಕೊಂಡಿದ್ದು, ಆ ಕ್ಷೇತ್ರಗಳಲ್ಲಿ ಒಗ್ಗಟ್ಟಾಗಿ ಕೆಲಸ

ಮಾಡಬಹುದು ಎಂದರು.


ಮಾಜಿ ಸಚಿವರಾದ ವಿ.ಸೋಮಣ್ಣ (V.Sommanna) ಅವರು ಮೈತ್ರಿ ಬಗ್ಗೆ ಮಾತನಾಡಿದ್ದು, ಅಸ್ಥಿರತೆ ಹೋಗಲಾಡಿಸಲು ವರಿಷ್ಠರು ನಿರ್ಧಾರ ಮಾಡಿರಬಹುದಾಗಿದ್ದು, ಮೈತ್ರಿ ಮಾಡಿಕೊಳ್ಳುವ ಬಗ್ಗೆ

ಸರಿಯಾದ ಮಾಹಿತಿ ನನಗೆ ಇಲ್ಲ. ಮತ್ತು ಲೋಕಸಭೆಗೆ ಸ್ಪರ್ಧಿಸುವ ಕುರಿತು ಇನ್ನೂ ಯೋಚನೆ ಮಾಡಿಲ್ಲ. ಹಾಗಾಗಿ ಹಲವು ವಿಚಾರಗಳನ್ನು ನಾನು ರಾಷ್ಟ್ರೀಯ ನಾಯಕರಿಗೆ ತಿಳಿಸಿದ್ದೇ‌ನೆ. ಅದನ್ನೆಲ್ಲಾ

ಸರಿಪಡಿಸುವ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದ್ದು, ಹೈಕಮಾಂಡ್ (High Command) ಸರಿಪಡಿಸದಿದ್ದರೂ ನನಗೆ ಯಾವುದೇ ನಷ್ಟವು ಇಲ್ಲ ಹಾಗೂ ಕಾಂಗ್ರೆಸ್ ಸೇರುವ ಬಗ್ಗೆ ಒಂದು ಕ್ಷಣವೂ

ನಾನು ಯೋಚಿಸಿಲ್ಲ ಎಂದು ತಿಳಿಸಿದರು.


ಇನ್ನು ಕೊಪ್ಪಳದಲ್ಲಿ (Koppal) ಮಾತನಾಡಿದ ಸಂಸದ ಕರಡಿ ಸಂಗಣ್ಣ ಅವರು ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದನ್ನು ಸ್ವಾಗತಿಸುತ್ತೇನೆ ಹಾಗೂ ಜೆಡಿಎಸ್- ಬಿಜೆಪಿ ಮೈತ್ರಿ ಕುರಿತು

ಬಿಎಸ್ ಯಡಿಯೂರಪ್ಪ ಅವರು ಹೇಳಿರುವುದನ್ನು ಮಾದ್ಯಮದಲ್ಲಿ ಕೇಳಿದ್ದೇನೆ ಅಲ್ಲದೆ ಯಡಿಯೂರಪ್ಪ ನಮ್ಮ ಸರ್ವೋಚ್ಚ ನಾಯಕರು ಮತ್ತು ಅಮಿತ್ ಶಾ (Amit Shah) ಅವರು ಕೂಡ ಹೇಳಿದ್ದಾರೆ

ಎನ್ನುವುದನ್ನು ಕೇಳಿದ್ದೇನೆ ಎಂದರು.

ಇದನ್ನು ಓದಿ: ಮೆಡಿಕಲ್ ಕಾಲೇಜು ಸ್ಥಳಾಂತರ: ಡಿಸಿಎಂ ಡಿ.ಕೆ ಶಿವಕುಮಾರ್‌ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಕೆಂಡಾಮಂಡಲ

Exit mobile version