ಬಿಜೆಪಿ ಕನ್ನಡಿಗರನ್ನು RSSಗೆ ಅಡಮಾನ ಇಟ್ಟಿದೆಯಾ?: ದಿನೇಶ್ ಗುಂಡೂರಾವ್

ಬೆಂಗಳೂರು: ಕೇಂದ್ರ ಸರ್ಕಾರದ ಕನ್ನಡ ವಿರೋಧಿ ಧೋರಣೆ ‌ವಿರುದ್ಧ ಕಿಡಿಕಾರಿರುವ ಶಾಸಕ ದಿನೇಶ್ ಗುಂಡೂರಾವ್, ಈ ಬಾರಿಯ ಗಣರಾಜ್ಯೋತ್ಸವದ ಪೆರೆಡ್‌ನಲ್ಲಿ ಹಿಂದಿ ಅವತರಣಿಕೆಯ ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶಿಸುವ ಅಗತ್ಯವೇನಿತ್ತು? ಕನ್ನಡಿಗರೇನು ಬಿಜೆಪಿ ಹಾಗೂ ಆರ್.ಎಸ್.ಎಸ್ ಗುಲಾಮರೆ? ಎಂದು ಪ್ರಶ್ನಿಸಿದ್ದಾರೆ.

ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಸ್ತಬ್ಧಚಿತ್ರದಲ್ಲಿ ಕನ್ನಡ ಬಳಸದೆ ಹಿಂದೆ ಬಳಸಲಾಗಿದೆ.‌ ಜತೆಗೆ ಕರ್ನಾಟಕದ ಧ್ವಜದ ಬದಲಾಗಿ ಕೇಸರಿ ಧ್ವಜವನ್ನು ಬಳಸಲಾಗಿದೆ. ಈ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ದಿನೇಶ್ ಗುಂಡೂರಾವ್, ಈ ಬಾರಿಯ ಗಣರಾಜ್ಯೋತ್ಸವದ ಪೆರೆಡ್‌ನಲ್ಲಿ ಹಿಂದಿ ಅವತರಣಿಕೆಯ ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶಿಸುವ ಅಗತ್ಯವೇನಿದೆ. ಕನ್ನಡಿಗರೇನು BJP/RSSನ ಗುಲಾಮರೆ?ಕನ್ನಡ ಧ್ವಜದ ಬದಲು ಕೇಸರಿ ಧ್ವಜ ಪ್ರದರ್ಶಿಸಲು ಇವರಿಗೆ ಅಧಿಕಾರ ಕೊಟ್ಟವರ್ಯಾರು?
ಬಿಜೆಪಿ ಕನ್ನಡಿಗರಾದ ನಮ್ಮನ್ನು RSSಗೆ ಅಡಮಾನ ಇಟ್ಟಿದ್ದಾರೆಯೆ?

ಪದೇ ಪದೇ RSS ನವರು ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿದ್ದಾರೆ. ದುರಂತವೆಂದರೆ ತಾಯಿ ಭಾಷೆಯ ಮೇಲೆ ಅಭಿಮಾನ ಇಲ್ಲದ BJP ನಾಯಕರು ತಮ್ಮ ಸ್ವಾಭಿಮಾನ ಮರೆತು ಇಡೀ ಕನ್ನಡಿಗರನ್ನು ಹಿಂದಿವಾಲಗಳ ಗುಲಾಮರನ್ನಾಗಿ ಮಾಡಿದ್ದಾರೆ.
RSS ಅಜ್ಞಾನುವರ್ತಿಯಾಗಿರುವ ರಾಜ್ಯ ಸರ್ಕಾರ ನಾಳೆಯಿಂದ ‘ಹಿಂದಿ ಕಡ್ಡಾಯ’ ಎಂಬ ಕಾನೂನು ತಂದರೂ ಆಶ್ಚರ್ಯವಿಲ್ಲ ಎಂದಿದ್ದಾರೆ.

Exit mobile version