ಒಡಿಸ್ಸಾದ ಬುಡಕಟ್ಟು ಶಿಕ್ಷಕಿ ಇದೀಗ ರಾಷ್ಟ್ರಪತಿ ಅಭ್ಯರ್ಥಿ!

Draupadi

ರಾಷ್ಟ್ರಪತಿ ಚುನಾವಣೆಗೆ(President Election) ಅಖಾಡ ಸಿದ್ದಗೊಂಡಿದೆ. ನಿನ್ನೆ ವಿಪಕ್ಷಗಳು ತಮ್ಮ ಒಮ್ಮತದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ(Yashwanth Sinha) ಅವರನ್ನು ಘೋಷಿಸಿರುವ ಬೆನ್ನಲ್ಲೇ ಬಿಜೆಪಿ(BJP) ನೇತೃತ್ವದ ಎನ್‍ಡಿಎ ಇದೀಗ ತನ್ನ ಅಭ್ಯರ್ಥಿಯನ್ನಾಗಿ ‘ಬುಡಕಟ್ಟು ಸಮುದಾಯದ ಗಟ್ಟಿಧ್ವನಿ’ ಎಂದೇ ಹೆಸರಾಗಿರುವ ದ್ರೌಪದಿ ಮುರ್ಮು(Draupadi Murmu) ಅವರನ್ನು ಘೋಷಿಸಿದೆ.

ದ್ರೌಪದಿ ಮುರ್ಮು ಅವರು ಚುನಾಯಿತರಾದರೆ, ಭಾರತದ ರಾಷ್ಟ್ರಪತಿಯಾದ ಮೊದಲ ಬುಡಕಟ್ಟು ಮಹಿಳೆಯಾಗಲಿದ್ದಾರೆ. ದ್ರೌಪದಿ ಮುರ್ಮು ಅವರು ಅತ್ಯಂತ ಕೆಳಹಂತದ ರಾಜಕೀಯ ವ್ಯವಸ್ಥೆಯಿಂದ ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯಾಗುವವರೆಗೂ ಅನೇಕ ಸವಾಲುಗಳನ್ನು ಎದುರಿಸಿ, ಹೋರಾಟದ ಮೂಲಕ ಮುನ್ನಲೆಗೆ ಬಂದಿದ್ದಾರೆ.

ಒಡಿಸ್ಸಾ(Odissha) ಮೂಲದವರಾದ ದ್ರೌಪದಿ ಮುರ್ಮು ಅವರು ಸಂತಾಲ ಬುಡಕಟ್ಟು ಸಮುದಾಯಕ್ಕೆ ಸೇರಿದವರು. 1958 ಜೂನ್ 20 ರಂದು ಒಡಿಸ್ಸಾದ ಮಯೂರ್‍ಭಂಜ್ ಜಿಲ್ಲೆಯ ಬೈದಪೊಸಿ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಗ್ರಾಮ ಮುಖ್ಯಸ್ಥರಾಗಿದ್ದರು. ಸಾಕಷ್ಟು ಹೋರಾಟ ನಡೆಸಿ ಶಿಕ್ಷಣ ಪಡೆದುಕೊಂಡ ಅವರು, ಶಿಕ್ಷಕಿಯಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಮಯೂರ್‍ಭಂಜ್‍ನಲ್ಲೇ ಶಿಕ್ಷಕಿಯಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದರು.

ನಂತರ ಶಿಕ್ಷಕಿ ವೃತ್ತಿ ತೊರೆದು 1997ರಲ್ಲಿ ದ್ರೌಪದಿ ಮುರ್ಮು ಕೌನ್ಸಿಲರ್ ಆಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು, ನಂತರ ಒಡಿಶಾದಿಂದ ಎರಡು ಬಾರಿ ಬಿಜೆಪಿಯಿಂದ ಶಾಸಕಿಯಾದರು. ರಾಯರಂಗ್‍ಪುರ ರಾಷ್ಟ್ರೀಯ ಸಲಹಾ ಮಂಡಳಿಯ ಉಪಾಧ್ಯಕ್ಷೆಯಾಗಿ, ಬಿಜು ಜನತಾದಳ ಮತ್ತು ಬಿಜೆಪಿ ಮೈತ್ರಿಕೂಟದ ಸರ್ಕಾರದಲ್ಲಿ ಸಾರಿಗೆ ಸಚಿವೆಯಾಗಿ ಅವರು ಸೇವೆ ಸಲ್ಲಿಸಿದ್ದರು.

Exit mobile version