9 ಹಾಲಿ ಬಿಜೆಪಿ ಸಂಸದರಿಗೆ ಕೈ ತಪ್ಪಲಿದೆ 2024ರ ಟಿಕೆಟ್!

BJP

2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಗಾಗಿ(Loksabha Election) ಬಿಜೆಪಿ(BJP) ಈಗಾಗಲೇ ತಯಾರಿ ಪ್ರಾರಂಭಿಸಿದೆ. ತಯಾರಿಯ ಮೊದಲ ಭಾಗವಾಗಿ ಕೆಲ ಹಾಲಿ ಸಂಸದರಿಗೆ ಕೊಕ್ ನೀಡಲು ಬಿಜೆಪಿ ಮುಂದಾಗಿದೆ.

ಈ ಕುರಿತು ದೆಹಲಿ(Delhi) ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. 75 ವರ್ಷ ದಾಟಿದ ಮತ್ತು ಪಕ್ಷದಲ್ಲಿ ಸಕ್ರಿಯವಾಗಿಲ್ಲದ ಕೆಲ ಸಂಸದರಿಗೆ ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದಿರಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ. ಹೀಗಾಗಿ ರಾಜ್ಯ 9 ಹಾಲಿ ಸಂಸದರು ಟಿಕೆಟ್ ಕಳೆದುಕೊಳ್ಳಲಿದ್ದಾರೆ.

  1. ಶ್ರೀನಿವಾಸ್ ಪ್ರಸಾದ್ (ಚಾಮರಾಜನಗರ)
  2. ರಮೇಶ್ ಜಿಗಜಿಣಗಿ (ವಿಜಯಪುರ)
  3. ಮಂಗಳಾ ಅಂಗಡಿ (ಬೆಳಗಾವಿ)
  4. ಪಿ.ಸಿ ಗದ್ದಿಗೌಡರ್ (ಬಾಗಲಕೋಟ್)
  5. ಶಿವಕುಮಾರ್ ಉದಾಸಿ (ಹಾವೇರಿ)
  6. ಜಿ.ಎಸ್ ಬಸವರಾಜ್ (ತುಮಕೂರು)
  7. ಬಿ.ಎನ್ ಬಚ್ಚೇಗೌಡ (ಚಿಕ್ಕಬಳ್ಳಾಪುರ)
  8. ಡಿ.ವಿ ಸದಾನಂದಗೌಡ (ಬೆಂಗಳೂರು ಉತ್ತರ)
  9. ಜಿ.ಎಂ ಸಿದ್ದೇಶ್ (ದಾವಣಗೆರೆ)

ಈ 9 ಹಾಲಿ ಸಂಸದರಿಗೆ ಈ ಕುರಿತು ಈಗಾಗಲೇ ಮಾಹಿತಿ ನೀಡಲಾಗಿದೆ. ಪಕ್ಷದ ವಿರುದ್ದ ಬಂಡಾಯ ಚಟುವಟಿಕೆ ನಡೆಸದೇ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ ಎಂಬ ಸೂಚನೆಯನ್ನು ನೀಡಲಾಗಿದೆ. ಮುಂಬರುವ ದಿನಗಳಲ್ಲಿ ನಿಮಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂಬ ಭರವಸೆಯನ್ನು ನೀಡಲಾಗಿದೆ. ಇನ್ನೊಂದೆಡೆ ಈ 9 ಲೋಕಸಭಾ ಕ್ಷೇತ್ರಗಳಲ್ಲಿ ಯುವ ಮುಖಗಳಿಗೆ ಮಣೆ ಹಾಕಲು ನಿರ್ಧರಿಸಲಾಗಿದೆ.

ಹೀಗಾಗಿ ಹೊಸ ಮುಖಗಳಿಗಾಗಿ ಈಗಾಗಲೇ ಹುಡುಕಾಟ ನಡೆದಿದೆ. ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿಲ್ಲದ ಡಿ.ವಿ ಸದಾನಂದಗೌಡರನ್ನು ಚುನಾವಣಾ ರಾಜಕೀಯದಿಂದ ದೂರವಿರಿಸಲು ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ. ಪಕ್ಷದ ಜವಾಬ್ದಾರಿ ನೀಡುವ ಕುರಿತು ಚರ್ಚೆ ನಡೆದಿದೆ.

Exit mobile version