Bengaluru: ಅವಾಸ್ತವಿಕ ಗ್ಯಾರಂಟಿಗಳ ಅನುಷ್ಠಾನದಲ್ಲಿಯೂ ಅಪ್ರಬುದ್ಧತೆ ತೋರಿರುವ ರಾಜ್ಯದ ಕಾಂಗ್ರೆಸ್ (bjp protest against siddaramaiah) ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ
ಪಂಗಡಗಳಿಗೆ ಮೀಸಲಾಗಿರುವ ನಿಧಿಯನ್ನು ದುರ್ಬಳಕೆ ಮಾಡಿಕೊಂಡಿದೆ. ಬಜೆಟ್ನಲ್ಲಿ ದಲಿತರ ಶ್ರೇಯೋಭಿವೃದ್ಧಿಗಾಗಿ 24.1% ಅನುದಾನವನ್ನು ಮೀಸಲಿರಿಸಬೇಕೆಂದು (bjp protest against siddaramaiah) ಸಿದ್ದರಾಮಯ್ಯ
(Siddaramaiah) ಅವರು ಈ ಹಿಂದೆ ಅನೇಕ ಬಾರಿ ಒತ್ತಾಯಿಸಿದ್ದರು.

ಆದರೆ ಅಧಿಕಾರಕ್ಕೆ ಬಂದ ಬಳಿಕ ದಲಿತರಿಗಾಗಿಯೇ ಮೀಸಲಿರಿಸಿದ್ದ ಹಣವನ್ನು ಬೇರೆ ಉದ್ದೇಶಗಳಿಗಾಗಿ ಬಳಸಲು ಅನುಮತಿ ನೀಡಿದ್ದಾರೆ. ದಲಿತ ವಿರೋಧಿ ಸಿದ್ದರಾಮಯ್ಯ (Siddaramaiah) ಅವರು ದಲಿತರ
ಹಣಕ್ಕೆ ಕನ್ನ ಹಾಕಿದ್ದಾರೆ ಎಂದು ಆರೋಪಿಸಿ ರಾಜ್ಯ ಬಿಜೆಪಿ (BJP) ಪ್ರತಿಭಟನೆ ನಡೆಸಿದೆ.
ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ (Basavaraj bommai), ಅನೇಕ ಶಾಸಕರು, ರಾಜ್ಯ ಉಪಾಧ್ಯಕ್ಷರಾದ ಎಂ. ಶಂಕರಪ್ಪ (M.Shankarappa), ಎಸ್ಸಿ ಮೋರ್ಚಾ ರಾಜ್ಯ
ಅಧ್ಯಕ್ಷ ಚಲುವಾದಿ ನಾರಾಯಣಸ್ವಾಮಿ (Narayanaswamy), ಪಕ್ಷದ ಪ್ರಮುಖರು, ಕಾರ್ಯಕರ್ತರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ (Bengaluru) ಪ್ರತಿಭಟನೆ ನಡೆಸಿದ ಬಿಜೆಪಿ , ದಲಿತರ ಅಭಿವೃದ್ದಿಗಾಗಿ
ಮೀಸಲಿಟ್ಟಿದ್ದ 11 ಸಾವಿರ ಕೋಟಿ ರೂಪಾಯಿಗಳನ್ನು ಗ್ಯಾರಂಟಿ (Guarantee) ಯೋಜನೆಗಳಿಗೆ ಬಳಸಿಕೊಳ್ಳಲು ಮುಂದಾಗಿದೆ.

ಈ ಮೂಲಕ ತಾನೊಂದು ದಲಿತ ವಿರೋಧಿ ಸರ್ಕಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸಿಎಂ(CM), ಸಚಿವರು & ಶಾಸಕರುಗಳು ತಮಗೆ ಬೇಕಾದ ಅಧಿಕಾರಿಗಳನ್ನು ವರ್ಗಾಯಿಸಿಕೊಳ್ಳಲು ತೋರುತ್ತಿರುವ
ಮುತುವರ್ಜಿಯನ್ನು, ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ತೋರದಿರುವುದು ಈ ರಾಜ್ಯಕ್ಕೆ ಹಾಗೂ ಮತದಾರರಿಗೆ ಮಾಡುತ್ತಿರುವ ದ್ರೋಹ. ತನ್ನ ಅವಾಸ್ತವಿಕ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಈಗಾಗಲೇ ಜನಸಾಮಾನ್ಯರ
ಮೇಲೆ ಬೆಲೆ ಏರಿಕೆಯ ಬರೆ ಹಾಕಲಾಗಿದೆ.ಅದೂ ಸಾಲದೆಂಬಂತೆ ಈಗ ಪೊಲೀಸರ ಜೇಬುಗಳಿಗೇ ಕತ್ತರಿ ಹಾಕಲಾಗಿದೆ, ಪೊಲೀಸ್ (Police) ಸಿಬ್ಬಂದಿಗೆ ತಿಂಗಳ ವೇತನಕ್ಕೆ ಅನುದಾನವಿಲ್ಲ.
ಕಾಂಗ್ರೆಸ್ (Congress) ಸರ್ಕಾರದಲ್ಲಿ ಪೊಲೀಸರಿಗೆ ಅತ್ತ ರಕ್ಷಣೆಯೂ ಇಲ್ಲ, ಇತ್ತ ಮಾಡಿದ ಕೆಲಸಕ್ಕೆ ಸಂಬಳವೂ ಇಲ್ಲ. ಸಮಾಜ ರಕ್ಷಕರಿಗೇ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಉಳಿಗಾಲವಿಲ್ಲ. ಅವಾಸ್ತವಿಕ
ಗ್ಯಾರಂಟಿಗಳ (Guarantee) ಅನುಷ್ಠಾನದಲ್ಲಿ ಅಪ್ರಬುದ್ಧತೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿರುವ ನಿಧಿಯನ್ನು ದುರ್ಬಳಕೆ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ ದಲಿತರಿಗೆ
ದ್ರೋಹ ಎಸಗಿದೆ ಎಂದು ಟೀಕಿಸಿದೆ.
ಮಹೇಶ್