`ಭ್ರಷ್ಟ’ ಸತ್ಯೇಂದ್ರ ಜೈನ್ ನನ್ನು ಕೇಜ್ರಿವಾಲ್ ಏಕೆ ರಕ್ಷಿಸುತ್ತಿದ್ದಾರೆ : ಬಿಜೆಪಿ ಪ್ರಶ್ನೆ

Aravind kejrival

ನವದೆಹಲಿ : ದೆಹಲಿ(New Delhi) ಸಿಎಂ ಅರವಿಂದ್ ಕೇಜ್ರಿವಾಲ್(Aravind Kejrival) ಅವರು ‘ಭ್ರಷ್ಟ’ ಕ್ಯಾಬಿನೆಟ್ ಸಚಿವ(Cabinet Minister) ಸತ್ಯೇಂದ್ರ ಜೈನ್(Sathyendra Jain) ಅವರನ್ನು ಏಕೆ ರಕ್ಷಿಸುತ್ತಿದ್ದಾರೆ ಎಂದು ಬಿಜೆಪಿ(BJP) ವಕ್ತಾರ ಶೆಹಜಾದ್ ಪೂನಾವಾಲಾ(Shehjad Poonawala) ಪ್ರಶ್ನಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಭಾರತೀಯ ಜನತಾ ಪಕ್ಷ ಕಟುವಾದ ವಾಗ್ದಾಳಿ ನಡೆಸಿದ್ದು,


ಜಾರಿ ನಿರ್ದೇಶನಾಲಯ (ED)ಯಿಂದ ಬಂಧಿಸಲ್ಪಟ್ಟಿರುವ ತಮ್ಮ ಸಂಪುಟದ ಸಚಿವ ಸತ್ಯೇಂದ್ರ ಜೈನ್ ಅವರನ್ನು ಕೇಜ್ರಿವಾಲ್ ಏಕೆ “ಗುರಾಣಿ” ಮಾಡಿಕೊಂಡಿದ್ದಾರೆ ಎಂದು ಟ್ವಿಟರ್ನಲ್ಲಿ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಪ್ರಶ್ನಿಸಿದ್ದಾರೆ. ಪಶ್ಚಿಮ ಬಂಗಾಳದ(West Bengal) ಕ್ಯಾಬಿನೆಟ್ನಿಂದ ಪಾರ್ಥ ಚಟರ್ಜಿ(Partha Chatterjee) ಅವರನ್ನು ತೆಗೆದುಹಾಕಿರುವುದನ್ನು ಉಲ್ಲೇಖಿಸಿರುವ ಪೂನಾವಾಲಾ, ಪಾರ್ಥ ಚಟರ್ಜಿ ಬಂಧನದ ನಂತರ ಸಿಎಂ ಮಮತಾ ಬ್ಯಾನರ್ಜಿ(Mamata Banerjee) ಅವರು ಚಟರ್ಜಿಯನ್ನು ಸಂಪುಟದಿಂದ ವಜಾಗೊಳಿಸಿದ್ದಾರೆ.

ಆದರೆ ಸತ್ಯೇಂದ್ರ ಜೈನ್ ಇನ್ನೂ ವಿವಿಐಪಿ ಸವಲತ್ತುಗಳನ್ನು ಹೊಂದಿರುವ ಮಂತ್ರಿಯಾಗಿದ್ದಾರೆ ಎಂದು ಟೀಕಿಸಿದ್ದಾರೆ. ಅಕ್ರಮ ಹಣ(Illegal Money) ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಮೇ ತಿಂಗಳಲ್ಲಿ ಬಂಧಿಸಿತ್ತು. ಈ ವರ್ಷದ ಏಪ್ರಿಲ್ನಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸತ್ಯೇಂದ್ರ ಜೈನ್ ಕುಟುಂಬಕ್ಕೆ ಸಂಬಂಧಿಸಿದ 4.81 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿತ್ತು. ಇನ್ನು ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್ ಅವರನ್ನು ಸರ್ಕಾರದಿಂದ ವಜಾಗೊಳಿಸುವ ಅರ್ಜಿಯ ವಿಚಾರಣೆಯ ವೇಳೆ,

ದೆಹಲಿ ಹೈಕೋರ್ಟ್(Delhi Highcourt) ಇದನ್ನು ನಿರ್ಧರಿಸುವುದು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಇದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿಶೇಷ ಹಕ್ಕು ಎಂದು ಹೇಳಿತ್ತು.

Exit mobile version