ಕೆಂಪೇಗೌಡರ ಪಠ್ಯ ಕೈಬಿಟ್ಟಾಗ ಸಿದ್ದರಾಮಯ್ಯ ಯಾಕೆ ಪ್ರಶ್ನಿಸಲಿಲ್ಲ? : ಬಿಜೆಪಿ

BJP

ಕಾಂಗ್ರೆಸ್(Congress) ಸರ್ಕಾರದ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ(Barguru Ramachandrappa) ಸಮಿತಿಯು ಕೆಂಪೇಗೌಡರ(Kempegowda) ಪಾಠವನ್ನು ಕೈಬಿಟ್ಟಾಗ ಅಂದಿನ ಸಿಎಂ ಸಿದ್ದರಾಮಯ್ಯ ಅವರಾಗಲಿ, ಡಿ.ಕೆ.ಶಿವಕುಮಾರ್(DK Shivkumar)ಆಗಲಿ ಯಾರೂ ಇದರ ಬಗ್ಗೆ ಯಾಕೆ ಪ್ರಶ್ನಿಸಲಿಲ್ಲ ಎಂದು ಬಿಜೆಪಿ(BJP) ಪ್ರಶ್ನೆ ಮಾಡಿದೆ.

ಸಿದ್ದರಾಮಯ್ಯ(Siddaramaiah) ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ವರದಿಯನ್ನು ಸಾರಾಸಗಟಾಗಿ ಕಾಂಗ್ರೆಸ್ ಒಪ್ಪಿಕೊಂಡಿತ್ತು ಹಾಗೂ ಆ ಮೂಲಕ ಕೆಂಪೇಗೌಡರಿಗೆ ಅವಮಾನ ಮಾಡಿತು. ಬೆಂಗಳೂರಿನ ಅಭಿವೃದ್ಧಿಯಲ್ಲಿ ಕೆಂಪೇಗೌಡ ಅವರ ಕೊಡುಗೆಯ ಬಗ್ಗೆ ಇಂದಿನ ಯುವಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಂಪೇಗೌಡರ ಪಠ್ಯವನ್ನು ಸೇರಿಸಿತ್ತು. ಆದರೆ, ಅದೇ ಪಠ್ಯಪುಸ್ತಕವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹರಿದು ಬಿಸಾಡಿದರು. ಇದು ನಾಡಪ್ರಭುವಿಗೆ ಮಾಡಿದ ಅವಮಾನವಲ್ಲವೇ?

ಇಂದು ಬೆಂಗಳೂರಿನ ನಿರ್ಮಾರ್ತೃ ಕೆಂಪೇಗೌಡ ಅವರ ಜಯಂತಿ. ಕಾಂಗ್ರೆಸ್ ಕೆಂಪೇಗೌಡರಿಗೆ ಅವಮಾನ ಮಾಡಿದ್ದು ಸರಿಯೇ? 6 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿದ್ದ ನಾಡಪ್ರಭು ಕೆಂಪೇಗೌಡ ಅವರ ಪಾಠವನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತೆಗೆದು ಹಾಕಲಾಯಿತು. ಕೆಂಪೇಗೌಡರಿಗೆ ಕಾಂಗ್ರೆಸ್ ನೀಡುವ ಗೌರವ ಇದೇನಾ? ಎಂದು ರಾಜ್ಯ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.

Exit mobile version