ಕಾಗೇರಿ, ಸುಧಾಕರ್, ಶೆಟ್ಟರ್ಗೆ ಒಲಿದ ಬಿಜೆಪಿ ಟಿಕೆಟ್: ಬಿಜೆಪಿಯ 5ನೇ ಪಟ್ಟಿ ಬಿಡುಗಡೆ

New Delhi: ಬಿಜೆಪಿ (BJP) ಹೈಕಮಾಂಡ್ 17 ರಾಜ್ಯಗಳ 111 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು (BJP Released 5th List) ಘೋಷಣೆ ಮಾಡಿದ್ದು, ರಾಜ್ಯದ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ

ಮಾಡಿದೆ. ಮಹತ್ವದ ಬೆಳವಣಿಗೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕೆ.ಸುಧಾಕರ್ (K Sudhakar), ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ವಿಶ್ವೇಶ್ವರ ಹೆಗಡೆ

ಕಾಗೇರಿ, ರಾಯಚೂರು ಲೋಕಸಭಾ ಕ್ಷೇತ್ರದಿಂದ ರಾಜಾ ಅಮರೇಶ್ವರ ನಾಯಕ್ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಅವರಿಗೆ

ಟಿಕೆಟ್ ನೀಡಲಾಗಿದೆ.

ಇನ್ನು ಚಿತ್ರದುರ್ಗ (Chitradurga) ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿಲ್ಲ. ಕ್ಷೇತ್ರದಲ್ಲಿ ಟಿಕೆಟ್ಗಾಗಿ ಹಾಲಿ ಸಂಸದ ಎ.ನಾರಾಯಣ ಸ್ವಾಮಿ (A. Narayana Swamy) ವರ್ಸಸ್

ಜನಾರ್ದನ ಸ್ವಾಮಿ ಮಧ್ಯೆ ತೀವ್ರ ಪೈಪೋಟಿ ಇದ್ದು, ಈ ಮಧ್ಯೆ ಹಿರಿಯ ನಾಯಕ ಗೋವಿಂದ ಕಾರಜೋಳ ಹೆಸರು ಕೂಡ ಕೇಳಿಬರುತ್ತಿದೆ. ಇನ್ನು ಕೋಲಾರ, ಮಂಡ್ಯ (Kolar, Mandya) ಹಾಗೂ ಹಾಸನ

ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ (BJP Released 5th List) ಮಿತ್ರಪಕ್ಷ ಜೆಡಿಎಸ್ಗೆ ಬಿಟ್ಟು ಕೊಟ್ಟಿದೆ.

ಮಂಡ್ಯದಿಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (H.D.Kumaraswamy) ಹಾಗೂ ಹಾಸನದಿಂದ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯುವುದು ಬಹುತೇಕ ಫಿಕ್ಸ್ ಎನ್ನಲಾಗಿದೆ. ಕೋಲಾರದ ಟಿಕೆಟ್ ಯಾರಿಗೆ

ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಸಿನಿಮಾ ನಟಿ ಕಂಗನಾ ರಣಾವತ್ ಅವರನ್ನು ಹಿಮಾಚಲ ಪ್ರದೇಶದ ಮಂಡಿಯಿಂದ, ರಾಮಾಯಣ ಧಾರಾವಾಹಿಯ ರಾಮನ ಪಾತ್ರಧಾರಿ ಅರುಣ್

ಗೋವಿಲ್ ಅವರನ್ನು ಮೀರತ್ನಿಂದ ಬಿಜೆಪಿ ಕಣಕ್ಕಿಳಿಸಿದೆ. ಈ ಮಧ್ಯೆ ಹಾಲಿ ಸಂಸದ ವರುಣ್ ಗಾಂಧಿ (Varun Gandhi) ಕೈಬಿಡಲಾಗಿದೆ.

ಆದರೆ ಅವರ ತಾಯಿ ಮೇನಕಾ ಗಾಂಧಿ (Menaka Gandhi) ತಮ್ಮ ಸುಲ್ತಾನ್ ಪುರ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ. ಜಾರ್ಖಂಡ್ ಮುಕ್ತಿ ಮೋರ್ಚಾ ತೊರೆದು ಬಿಜೆಪಿ ಸೇರಿರುವ ಸೀತಾ ಸೊರೆನ್

ಅವರು ದುಮ್ಕಾದಿಂದ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ನವೀನ್ ಜಿಂದಾಲ್ ಹರಿಯಾಣದ ಕುರುಕ್ಷೇತ್ರದಿಂದ, ಉಜಿಯಾರಪುರದಿಂದ ನಿತ್ಯಾನಂದ ರೈ, ಬೇಗುಸರಾಯ್ನಿಂದ ಗಿರಿರಾಜ್ ಸಿಂಗ್, ಪಾಟ್ನಾ

ಸಾಹಿಬ್ನಿಂದ ರವಿಶಂಕರ್ ಪ್ರಸಾದ್, ಸಂಬಲ್ಪುರದಿಂದ ಧರ್ಮೇಂದ್ರ ಪ್ರಧಾನ್, ಬಾಲಸೋರ್ನಿಂದ ಪ್ರತಾಪ್ ಸಾರಂಗಿ, ಭುವನೇಶ್ವರದಿಂದ ಅಪರಾಜಿತಾ ಸಾರಂಗಿ, ಪಿಲಿಭಿತ್ನಿಂದ ಜಿತಿನ್ ಪ್ರಸಾದ,

ಡಾರ್ಜಿಲಿಂಗ್ನಿಂದ ರಾಜು ಬಿಸ್ತಾ, ತಾಮ್ಲುಕ್ನಿಂದ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ, ಬರ್ಧಮಾನ್-ದುರ್ಗಾಪುರದಿಂದ ದಿಲೀಪ್ ಘೋಷ್ (Dilip Ghosh) ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ಇದನ್ನು ಓದಿ: ಮನುಷ್ಯನಾಗುವುದು ತನ್ನ ಗುಣದಿಂದ.. ಹುಟ್ಟಿನಿಂದಲೊ ಜುಟ್ಟಿನಿಂದಲೊ ಅಲ್ಲ –ನಟ ಕಿಶೋರ್

Exit mobile version