1 ಲಕ್ಷ ಕೋಟಿ ಸಾಲ ಮಾಡಿ ರಾಜ್ಯವನ್ನೇ ಸಾಲದ ಶೂಲಕ್ಕೇರಿಸಿದ್ದು ಹೇಗೆ ಮರೆಯಲು ಸಾಧ್ಯ ಸಿದ್ದರಾಮಯ್ಯನವರೇ? : ಬಿಜೆಪಿ

bjp

Bengaluru : ಅಧಿಕಾರದುದ್ದಕ್ಕೂ ನಿದ್ದೆ ಮಾಡುತ್ತಾ 1 ಲಕ್ಷ ಕೋಟಿಗೂ ಅಧಿಕ ಮೊತ್ತದ ಸಾಲ ಮಾಡಿ ರಾಜ್ಯವನ್ನೇ ಸಾಲದ ಶೂಲಕ್ಕೇರಿಸಿದ್ದು ಹೇಗೆ ಮರೆಯಲು ಸಾಧ್ಯ ಸಿದ್ದರಾಮಯ್ಯನವರೇ?(Siddaramaiah) ಎಂದು ರಾಜ್ಯ ಬಿಜೆಪಿ(State BJP) ಪ್ರಶ್ನಿಸಿದೆ.

“ಸಾಲರಾಮಯ್ಯ” ಎಂಬ ಹ್ಯಾಶ್ ಟ್ಯಾಗ್(Hashtag) ಬಳಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿರುವ ರಾಜ್ಯ ಬಿಜೆಪಿ, ಅಧಿಕಾರದುದ್ದಕ್ಕೂ ನಿದ್ದೆ ಮಾಡುತ್ತಾ 1 ಲಕ್ಷ ಕೋಟಿಗೂ ಅಧಿಕ ಮೊತ್ತದ ಸಾಲ ಮಾಡಿ ರಾಜ್ಯವನ್ನೇ ಸಾಲದ ಶೂಲಕ್ಕೇರಿಸಿದ್ದು ಹೇಗೆ ಮರೆಯಲು ಸಾಧ್ಯ.

ಇದನ್ನೂ ಓದಿ : https://vijayatimes.com/dhoni-entertainment-has-started/

ಕಾಂಗ್ರೆಸ್ಸಿನ(Congress) ತುಘಲಕ್ ದರ್ಬಾರಿನಲ್ಲಿ ಪ್ರತಿಯೊಬ್ಬ ಪ್ರಜೆಯ ಮೇಲೆಯೂ ₹ 44,769/- ಸಾಲದ ಹೊರೆ ಹೊರೆಸಿದ್ದನ್ನು ಮರೆತಿರಾ? ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಾವು ಮಾಡಿದ ಸಾಲದ ಬಗ್ಗೆ ಜಾಣ ಮರೆವು ಏಕೆ? 2013 – 20 ಸಾವಿರ ಕೋಟಿ 2014 – 21 ಸಾವಿರ ಕೋಟಿ 2015 – 21 ಸಾವಿರ ಕೋಟಿ 2016 – 28 ಸಾವಿರ ಕೋಟಿ 2017 – 35 ಸಾವಿರ ಕೋಟಿ.

ನಿಮಗೆ ಮರೆತು ಹೋಗಿರಬಹುದು, ರಾಜ್ಯದ ಜನತೆ ಮರೆತಿಲ್ಲ 2013 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಕೇವಲ 22 ತಿಂಗಳಿನಲ್ಲಿ 39,161 ಕೋಟಿ ಸಾಲ ಮಾಡಿದ್ದರು ಎಂದು ಟೀಕಿಸಿದೆ. ಈ ಹಿಂದಿನ ಮುಖ್ಯಮಂತ್ರಿಗಳ ಅಧಿಕಾರಾವಧಿಗೆ ಹೋಲಿಸಿದರೆ ಸಿದ್ದರಾಮಯ್ಯ ಅವರೇ ಸಾಲ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದರು.

ಇದನ್ನೂ ಓದಿ : https://vijayatimes.com/bengaluru-couple-high-drama/

ಸಾಲ ಮಾಡಿ ನೀವು ಮಾಡಿದ್ದೇನು ಸಿದ್ದರಾಮಯ್ಯ? ಮಾನ್ಯ ಸಿದ್ದರಾಮಯ್ಯ ಅವರೇ, ನಿಮ್ಮ ಸಾಲದ ಇತಿಹಾಸ ತೆರೆದಿಡುತ್ತಿದ್ದೇವೆ. ಮೋದಿ ಸರ್ಕಾರ ಸಾಲ ಮಾಡಿ ತನ್ನ ಪರಿವಾರದ ಜೋಳಿಗೆ ತುಂಬಿಸಿಕೊಂಡಿಲ್ಲ “ನಕಲಿ ಗಾಂಧಿ ಪರಿವಾರದಂತೆ”. ದೇಶವಿಂದು ವೈಭವದಿಂದ ಕಂಗೊಳಿಸುತ್ತಿದೆ, ಕಾಂಗ್ರೆಸ್ಸಿಗರಿಗೆ ಹೊಟ್ಟೆಕಿಚ್ಚೇಕೆ? ಎಂದು ಲೇವಡಿ ಮಾಡಿದೆ.

Exit mobile version