ಡಿಕೆಶಿ ಅವರೇ, ‘ಲಕ್ಷ್ಮೀ ಜಪ’ ಮಾಡುವುದು ಮಹಿಳಾ ಸಬಲೀಕರಣವೇ? : ಬಿಜೆಪಿ ವ್ಯಂಗ್ಯ!

DKS

ವಿಧಾನಪರಿಷತ್ ಚುನಾವಣೆಯಲ್ಲಿ(VidhanaParishath) ಯಾವುದೇ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡದಿರುವ ರಾಜ್ಯ ಕಾಂಗ್ರೆಸ್(State Congress) ನಡೆಗೆ, ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯೇ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇದೀಗ ಬಿಜೆಪಿ(BJP) ಕಾಂಗ್ರೆಸ್‍ನ ಮಹಿಳಾ ಸಬಲೀಕರಣದ(Woman Empowerment) ಕುರಿತು ಟ್ವೀಟ್ ಮೂಲಕ ವ್ಯಂಗ್ಯವಾಡಿದೆ. ಸರಣಿ ಟ್ವೀಟ್‍ಗಳ ಮೂಲಕ ರಾಜ್ಯ ಕಾಂಗ್ರೆಸ್ ಕಾಲೆಳೆದಿದೆ.

ಬಿಜೆಪಿ ಟ್ವೀಟ್‍ಗಳು : “ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ಹೊಂದಿರುವ ಮಹಿಳಾ ನಾಯಕಿಯೇ ರಾಜ್ಯ ಕಾಂಗ್ರೆಸ್ ವಿರುದ್ದ ಪಕ್ಷದ ಮಹಿಳಾ ವಿರೋಧಿ ನೀತಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹಾಗಾದರೆ, ಕಾಂಗ್ರೆಸ್ ಪಕ್ಷದ ಸಾಮಾನ್ಯ ಮಹಿಳಾ ಕಾರ್ಯಕರ್ತರು?” “ಡಿಕೆಶಿ ಬಣಕ್ಕೆ ಮಹಿಳಾ ಸಬಲೀಕರಣ ಅಂದರೆ ಬೆಳಗಾವಿ ಬೇನಾಮಿ ಅಧ್ಯಕ್ಷೆ ಮಾತ್ರ. ಮಾನ್ಯಡಿಕೆ ಶಿವಕುಮಾರ್ ಅವರೇ, ಲಕ್ಷ್ಮೀ ಜಪ ಮಾಡುವುದೇ ಮಹಿಳಾ ಸಬಲೀಕರಣವೇ?” “ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಮಹಿಳೆಯರಿಗೆ ಬೆಲೆಯೇ ಇಲ್ಲ.

ಇವರಿಗೆ ಮಹಿಳೆಯರು ನೆನಪಾಗುವುದು, ಚುನಾವಣೆಯ ಸಂದರ್ಭದಲ್ಲಿ ಅಥವಾ ಪ್ರತಿಭಟನೆ ಮಾಡುವಾಗ ಮಾತ್ರ. ಕಾರ್ಯಾಧ್ಯಕ್ಷರಲ್ಲೂ ಮಹಿಳೆಯರಿಗೆ ಸ್ಥಾನವಿಲ್ಲ, ಪರಿಷತ್ ಚುನಾವಣೆಗೂ ಮಹಿಳಾ ಅಭ್ಯರ್ಥಿ ಇಲ್ಲ. ಮಹಿಳಾ ಸಬಲೀಕರಣ ಬರೇ ಬೂಟಾಟಿಕೆಯೇ?”, ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ(Koppala) ಜಿಲ್ಲೆಯಲ್ಲಿ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದ ಹೇಮಲತಾ ನಾಯಕ್(Hemalatha Nayak) ಅವರನ್ನು ಬಿಜೆಪಿ ಗುರುತಿಸಿದೆ. ತಳಮಟ್ಟದ ಕಾರ್ಯಕರ್ತರನ್ನು ನಮ್ಮ ಪಕ್ಷ ಮುಂಚೂಣಿಯಲ್ಲಿ ನಿಲ್ಲಿಸಿದೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವುದು ನಮಗೆ ಕೇವಲ ಬಾಯಿಮಾತಿನ ಘೋಷಣೆಯಲ್ಲ.”

ಧೈರ್ಯಕ್ಕೆ ದುರ್ಗೆ, ಶಕ್ತಿಗೆ ಪಾರ್ವತಿ, ಸಹನೆಗೆ ಸೀತೆ, ವಿದ್ಯೆಗೆ ಸರಸ್ವತಿ,
ಎಂದು ಸ್ತ್ರೀಯರಿಗೆ ಗೌರವ ಕೊಡುವ ಸಂಸ್ಕೃತಿ ನಮ್ಮದು.
ಆದರೆ ಕಾಂಗ್ರೆಸ್ ಪಕ್ಷದಲ್ಲಿ ಬೆಳಗಾವಿಯ ‘ಲಕ್ಷ್ಮಿ’ಗೆ ಮಾತ್ರ ಗೌರವ.
ಇದು ಮಹಿಳಾ ಸಬಲೀಕರಣ ವಿಚಾರಕ್ಕೆ ಕಾಂಗ್ರೆಸ್ ಮಾಡುತ್ತಿರುವ ಅವಮಾನವಲ್ಲದೆ ಮತ್ತೇನು? ಉತ್ತರಪ್ರದೇಶ – ಮೈ ಲಡ್ಕಿ ಹೂ, ಮೈ ಲಡ್ ಸಕ್ತಿ ಹೂ?

ಕರ್ನಾಟಕ ನಾ ನಾಯಕಿ ಮಹಿಳಾ ಸಬಲೀಕರಣ ಬಗ್ಗೆ ಉದ್ದುದ್ದ ಭಾಷಣ ಮಾಡುವ ಕಾಂಗ್ರೆಸ್ ನಾಯಕರು ಒಬ್ಬ ಮಹಿಳಾ ಅಭ್ಯರ್ಥಿಯನ್ನೂ ಪರಿಷತ್ತಿಗೆ ಆಯ್ಕೆ ಮಾಡಿಲ್ಲ. ಮಹಿಳಾ ಸಬಲೀಕರಣ ಬರೇ ಭಾಷಣಕ್ಕೆ ಸೀಮಿತವೇ?”

Exit mobile version