ಬಣ್ಣ ಬಣ್ಣದ ಚಿಟ್ಟೆಗಳು(Butterfly) ಕಣ್ಣಿಗೆ ಹಬ್ಬ, ಮನಸ್ಸಿಗೆ ಮುದ ನೀಡುತ್ತವೆ. ಚಿಟ್ಟೆಗಳು ಕೀಟಗಳಲ್ಲಿಯೇ ಅತ್ಯಂತ ಸುಂದರವಾದ ಜೀವಿಯಾಗಿದೆ.

ನೀವು ಎಷ್ಟೋ ಅಂದವಾದ ವಿಚಿತ್ರ ಬಣ್ಣದ ಚಿಟ್ಟೆಗಳನ್ನು ನೋಡಿರುತ್ತೀರಾ. ಅಂತಹ ವಿಚಿತ್ರ ಚಿಟ್ಟೆಗಳಲ್ಲಿ ಒಂದು ಈ ಓಕ್ಲೀಫ್ ಚಿಟ್ಟೆ(Oklif Butterfly). ಇದರ ದೇಹರಚನೆ ನೋಡಿದ್ರೆ ನೀವು ಖಂಡಿತವಾಗಿಯೂ ಅಚ್ಚರಿಗೊಳ್ಳುತ್ತೀರಾ. ಏಕೆಂದರೆ ಈ ಚಿಟ್ಟೆಯನ್ನು ನೋಡಿದಾಗ ಇದು ನಿಜವಾದ ಚಿಟ್ಟೆಯಾ? ಅಥವಾ ಒಣಗಿದ ಎಲೆಯಾ? ಎಂದು ಅನುಮಾನ ಮೂಡುತ್ತದೆ. ಮೊದಲನೇ ಸಲ ನೀವು ಈ ಚಿಟ್ಟೆಯನ್ನು ನೋಡಿದರೆ ಖಂಡಿತ ಅದು ಒಣಗಿದ ಮರದ ಎಲೆ ಎಂದು ನೀವು ಅಂದುಕೊಳ್ಳುವುದು ಖಂಡಿತ. ಅಷ್ಟೇ ಅಲ್ಲ ಈ ಚಿಟ್ಟೆ ಪ್ರಪಂಚದಲ್ಲಿ ಬಹಳ ಅಪರೂಪದ ಜಾತಿಯ ಚಿಟ್ಟೆಯಾಗಿದೆ.
ಈ ಚಿಟ್ಟೆಗಳನ್ನು ಹುಡುಕುವುದೂ ಒಂದೇ, ಸಮುದ್ರದ ನೀರನ್ನು ಅಳತೆ ಮಾಡುವುದೂ ಒಂದೇ. ಏಕೆಂದರೆ ಕಾಡಿನಲ್ಲಿ ಇರುವ ಎಲ್ಲಾ ಒಣಗಿದ ಎಲೆಗಳನ್ನು ಹಿಡಿದುಕೊಂಡು ನೋಡಬೇಕಾಗುತ್ತದೇ, ಇಲ್ಲವಾದರೇ ಅದು ಹಾರುತ್ತಿರುವಾಗ ಕಂಡುಹಿಡಿಯಬಹುದು. ಸಾಮಾನ್ಯವಾಗಿ ಇದು ನೆಲದ ಮೇಲಿದ್ದಾಗ ಕಂಡು ಹಿಡಿಯಲು ಸಾಧ್ಯವೇ ಇಲ್ಲ.
ಈ ಚಿಟ್ಟೆಗಳು ಹೊರಗಿನಿಂದ ಒಣಗಿದ ಎಲೆ ರೀತಿ ಕಂಡರೂ ಒಳಗೆ ಸುಂದರವಾದ ಬಣ್ಣ ಬಣ್ಣದ ರೆಕ್ಕೆಗಳನ್ನು ಹೊಂದಿರುತ್ತವೆ. ಇಂತಹ ಒಣಗಿದ ಎಲೆಯ ಬಣ್ಣದಿಂದ ಇದು ಮರದ ಮೇಲಿದ್ರೂ ಗಮನಿಸೋಕೆ ಬಹಳ ಕಷ್ಟ.

ಆದ್ದರಿಂದಲೇ ಕೆಲವೇ ಕೆಲವು ಅದೃಷ್ಟವಂತರು ಮಾತ್ರ ಈ ಚಿಟ್ಟೆಗಳನ್ನು ನೋಡಬಹುದು. ಇದು ಉಷ್ಣವಲಯದ ಕಾಡುಗಳಲ್ಲಿ, ಭಾರತದಿಂದ ಜಪಾನ್‌ವರೆಗೂ ಕಂಡುಬರುತ್ತದೆ. ಆದರೆ ಇತ್ತೀಚಿಗೆ ಈ ಚಿಟ್ಟೆಗಳ ಸಂಖ್ಯೆ ಕುಠಿಂತಗೊಳ್ಳುತ್ತಿದೆ ಎಂಬುದೇ ಬೇಸರದ ಸಂಗತಿ.
- ಪವಿತ್ರ ಸಚಿನ್