ಭಾರತದ ಕಟ್ಟಾ ವಿರೋಧಿಯನ್ನು ಭೇಟಿ ಮಾಡಿದ ರಾಹುಲ್ ಗಾಂಧಿ!

Jeremy corbyn

ಕಾಂಗ್ರೆಸ್ ಪಕ್ಷದ(Congress Party) ನಾಯಕ ರಾಹುಲ್ ಗಾಂಧಿ(Rahul Gandhi) ಇದೀಗ ಅಂತರಾಷ್ಟ್ರೀಯ(International) ಮಟ್ಟದಲ್ಲಿ ಭಾರೀ ಸುದ್ದಿಯಾಗಿದ್ದಾರೆ.

ಸದ್ಯ ಇಂಗ್ಲೆಂಡ್(England) ಪ್ರವಾಸದಲ್ಲಿರುವ ಅವರು ಅಲ್ಲಿನ ಸಂಸದ ಮತ್ತು ಭಾರತದ ಕಟ್ಟಾ ವಿರೋಧಿ ಎಂದೇ ಕುಖ್ಯಾತಿ ಪಡೆದಿರುವ ಲೇಬರ್ ಪಕ್ಷದ ಸಂಸದ ಜೆರೆಮಿ ಕಾರ್ಬಿನ್(Jerami Corbin) ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಲೇಬರ್ ಪಕ್ಷದ ಸಂಸದ ಜೆರೆಮಿ ಕಾರ್ಬಿನ್ ಸದಾ ಭಾರತ ವಿರೋಧಿ ನಿಲುವುಗಳಿಂದಲೇ ಇಂಗ್ಲೆಂಡ್‍ನಲ್ಲಿರುವ ಭಾರತೀಯ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಈ ಕಾರಣದಿಂದಲೇ ಅವರು ಸೋಲನ್ನು ಕಂಡಿದ್ದರು. ಇನ್ನು ಜಮ್ಮು ಮತ್ತು ಕಾಶ್ಮೀರ(Jammu & Kashmir) ಭಾರತದಿಂದ ಪ್ರತ್ಯೇಕ ಮಾಡಬೇಕು ಎಂದು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನದ(Pakistan) ಪರವಾಗಿ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾನೆ. ಇನ್ನು ಪಾಕಿಸ್ತಾನದ ಪ್ರತ್ಯೇಕತವಾದಿ ನಾಯಕರಿಗೆ ಇಂಗ್ಲೆಂಡ್‍ನಲ್ಲಿ ಬೆಂಬಲ ದೊರೆಯುವಂತೆಯೂ ಮಾಡಿದ್ದಾನೆ. ಅವರಿಗೆ ಬೇಕಾದ ನೆರವನ್ನು ನೀಡಿದ್ದಾನೆ.

ಇನ್ನು ಹಿಂದೂ ಧಾರ್ಮಿಕ ಭಾವನೆಗಳನ್ನು ಟೀಕಿಸುವ ಈತನ ವಿರುದ್ದ ಇಂಗ್ಲೆಂಡ್‍ನಲ್ಲಿರುವ ಭಾರತೀಯ ಸಮುದಾಯ ಅನೇಕ ಬಾರಿ ಪ್ರತಿಭಟನೆ ನಡೆಸಿದೆ. ಈತ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತಾ, ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪವೂ ಈತನ ಮೇಲಿದೆ. ಹೀಗೆ ಪಾಕಿಸ್ತಾನ ಮತ್ತು ಹಿಂದೂ ವಿರೋಧಿ ನೀತಿಗಳಿಂದ ಕುಖ್ಯಾತಿ ಪಡೆದಿರುವ ಜೆರೆಮಿ ಕಾರ್ಬಿನ್‍ನನ್ನು ರಾಹುಲ್ ಗಾಂಧಿ ಯಾವ ಉದ್ದೇಶಕ್ಕಾಗಿ ಭೇಟಿಯಾಗಿದ್ದಾರೆ ಎಂಬ ಸತ್ಯವನ್ನು ಬಹಿರಂಗ ಪಡಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ವ್ಯಕ್ತವಾಗಿದೆ.

ಇನ್ನು ರಾಹುಲ್ ಗಾಂಧಿಯ ಈ ನಡೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಭಾರತದ ವಿರೋಧಿಯನ್ನು ಭೇಟಿಯಾಗಿ ಚರ್ಚೆ ನಡೆಸುವ ಅವಶ್ಯಕತೆ ಏನಿತ್ತು? ಚರ್ಚೆ ನಡೆಸಲು ನಿಮ್ಮ ಬಳಿ ಇರುವ ವಿಷಯವಾದರು ಏನು? ಎಂದು ಪ್ರಶ್ನಿಸಿದೆ.

Exit mobile version