ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರದ ಹೊಸ ಘೋಷಣೆ. ನೌಕರರ ಸಂಬಳಕ್ಕಿಲ್ಲ ಗ್ಯಾರಂಟಿ (bjp-slams-congress-3). ಇದು ಉಚಿತ, ಖಚಿತ, ನಿಶ್ಚಿತ. BMTC ನೌಕರರಿಗೆ
ತಿಂಗಳು ಮುಗಿದು ಎರಡು ವಾರಗಳಾದರೂ ಸಂಬಳ ಕೈ ಸೇರಿಲ್ಲ, KSRTC ನೌಕರರು ಸಂಬಳವಿಲ್ಲದೆ ಡಿಪೋ ಬಿಟ್ಟು ಮನೆಗೆ ಹೋಗುತ್ತಿಲ್ಲ, ಮೂರು ತಿಂಗಳು ಕಳೆದರೂ ಅತಿಥಿ
ಉಪನ್ಯಾಸಕರು (bjp-slams-congress-3) ಸಂಬಳವನ್ನೇ ಕಂಡಿಲ್ಲ,

ಇಂದಿರಾ ಕ್ಯಾಂಟೀನ್ (Indira Canteen) ಸಿಬ್ಬಂದಿಗಳಿಗೂ ಸಂಬಳ ಸಿಕ್ಕಿಲ್ಲ, ಸರ್ಕಾರಿ ಶಾಲಾ ಶಿಕ್ಷಕರಿಗೂ ತಿಂಗಳಾದರೂ ಖಾತೆಗೆ ಜಮೆ ಆಗದ ಸಂಬಳ, ಗುತ್ತಿಗೆ ಆಧಾರದ ಸರ್ಕಾರಿ ನೌಕರರಿಗೆ
ತಲುಪಿಲ್ಲ ಸಂಬಳ, ಇನ್ನೂ ಹಲವು ಇಲಾಖೆಗಳ ಸರ್ಕಾರಿ ನೌಕರರು ಸಂಬಳ ಸಿಗದೆ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ (BJP) ಲೇವಡಿ ಮಾಡಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ರಾಜ್ಯದ ಜನರ ಕಿವಿ ಮೇಲೆ ಹೂ ಇಟ್ಟ ಸಿದ್ದರಾಮಯ್ಯ (Siddaramaiah) ಅವರ ಸರ್ಕಾರ, ಗ್ಯಾರಂಟಿಯ ಹಣ ಕೊಡುವುದು ಹಾಗಿರಲಿ, ಮೊದಲು ನೌಕರರ
ಲೋಕಸಮರ ಗೆಲ್ಲಲು ಬಿಜೆಪಿ-ಜೆಡಿಎಸ್ ನಾಯಕರಿಗೆ ಗಾಳ ಹಾಕುತ್ತಿದೆ ಕಾಂಗ್ರೆಸ್..!
ಸಂಬಳವನ್ನು ಜಾರಿಗೊಳಿಸಿ ಸ್ವಾಮಿ. ರಾಜ್ಯದ ಕಾಂಗ್ರೆಸ್ (Congress) ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರ ಜೀವನಚರಿತ್ರೆಯುಳ್ಳ ಪಠ್ಯವನ್ನು ತೆಗೆಯುವಲ್ಲಿ ತೋರಿದ ಉತ್ಸಾಹ ಮತ್ತು ಕಾಳಜಿಯನ್ನು
ಸರ್ಕಾರಿ ಶಾಲೆಗಳು, ಮಕ್ಕಳು ಹಾಗೂ ಶಿಕ್ಷಕರ ಮೇಲೆ ತೋರುತ್ತಿಲ್ಲ. ಆಗಸ್ಟ್ (August) ಅರ್ಧ ತಿಂಗಳು ಮುಗಿಯುತ್ತಾ ಬಂದರೂ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಮೂರು ತಿಂಗಳಿಂದ ಸಂಬಳವೇ ಆಗಿಲ್ಲ.

ಶಿಕ್ಷಣ ಸಚಿವ ಮಧು ಬಂಗಾರಪ್ಪರವರೇ (Madhu Bangarappa), ನಿಮ್ಮ ಎಟಿಎಂ ಸರ್ಕಾರದ ವರ್ಗಾವಣೆ ದಂಧೆ ಮುಗಿದಿದ್ದರೆ. ಕೊಂಚ ಈ ಕಡೆ ಗಮನಹರಿಸಿ.ಅವಾಸ್ತವಿಕ ಶಕ್ತಿ ಯೋಜನೆಯ
ಅನುಷ್ಠಾನದಿಂದ ಸಾರಿಗೆ ನೌಕರರು ಬೀದಿಗೆ ಬಂದಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರ ಸಾರಿಗೆ ನಿಗಮಗಳಿಗೆ ಸೂಕ್ತ ಅನುದಾನ ನೀಡದೆ ಬರ್ಬಾದ್ ಮಾಡಲು ಹೊರಟಿದೆ.
ಸರಿಯಾದ ಸಮಯಕ್ಕೆ ತಿಂಗಳ ಪಗಾರ ಸಾರಿಗೆ ನೌಕರರ ಕೈ ಸೇರಿಲ್ಲ. ತಿಂಗಳ ಇಎಂಐ (EMI), ಮನೆ ಬಾಡಿಗೆ, ಮಕ್ಕಳ ಸ್ಕೂಲ್ ಫೀಸ್ (School Fees), ಮನೆಗೆ ರೇಷನ್ ಇಲ್ಲದೆ ನೌಕರರು
ಡಿಪೋಗಳಲ್ಲೇ ಕಾಲಕಳೆಯುವಂತೆ ಮಾಡಿದೆ ಕಾಂಗ್ರೆಸ್ ಸರ್ಕಾರ. ಕೂಡಲೇ ಕಾಂಗ್ರೆಸ್ ಸರ್ಕಾರ ಕಲೆಕ್ಷನ್ (Collection) ಮಾಡುವ ಕೆಲಸಕ್ಕೆ ಬ್ರೇಕ್ ಹಾಕಿ ನೌಕರರ ಸಂಬಳವನ್ನು ಬಿಡುಗಡೆ
ಮಾಡಬೇಕು ಎಂದು ಒತ್ತಾಯಿಸಿದೆ.
ಮಹೇಶ್