ಬಿಜೆಪಿ ಟಿಕೆಟ್: ಪ್ರತಾಪ್, ಡಿವಿಎಸ್ ಔಟ್, ಯದುವೀರ್, ಡಾ. ಮಂಜುನಾಥ್ ಇನ್

Bengaluru: ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ಬಿಜೆಪಿ (BJP Tickets Update) ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಕೆಲ ಹಾಲಿ ಸಂಸದರನ್ನು ಕೈಬಿಟ್ಟು, ಹೊಸ ಮುಖಗಳಿಗೆ ಬಿಜೆಪಿ ಹೈಕಮಾಂಡ್

ಮಣೆ ಹಾಕಿದೆ. ಕರ್ನಾಟಕದ 20 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ಮೈಸೂರಿ-ಕೊಡಗು (Mysore – Kodagu) ಲೋಕಸಭಾ ಕ್ಷೇತ್ರದಿಂದ ಯದುವೀರ್ ಒಡೆಯರ್, ಬೆಂಗಳೂರು

ಗ್ರಾಮಾಂತರದಿಂದ ಡಾ.ಮಂಜುನಾಥ್, ದಕ್ಷಿಣ ಕನ್ನಡದಿಂದ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ (Nalin Kumar) ಬದಲಿಗೆ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ಸಿಕ್ಕಿದೆ. ಕೊಪ್ಪಳ ಟಿಕೆಟ್

ನಿರೀಕ್ಷೆಯಲ್ಲಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಕೈ ತಪ್ಪಿದ್ದು (BJP Tickets Update) ಬಸವರಾಜ್ ಕ್ಯಾವತೂರು ಅವರಿಗೆ ಸಿಕ್ಕಿದೆ.

ಇನ್ನು ಹಾವೇರಿಯಿಂದ ಮಾಜಿ ಸಿಎಂ ಬೊಮ್ಮಾಯಿ (Bommai), ಉಡುಪಿ ಚಿಕ್ಕಮಗಳೂರಿನ ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರ ಟಿಕೆಟ್ ಸಿಕ್ಕಿದರೆ, ಕೋಟಾ ಶ್ರೀನಿವಾಸ

ಪೂಜಾರಿ ಅವರಿಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ನೀಡಲಾಗಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಗಾಯತ್ರಿ ಸಿದ್ದೇಶ್ವರ, ಚಾಮರಾಜನಗರದಿಂದ ಎಸ್ ಬಾಲರಾಜ್ ಅವರಿಗೆ ಟಿಕೆಟ್ ಸಿಕ್ಕಿದೆ.

ಬೆಳಗಾವಿ, ಉತ್ತರ ಕನ್ನಡ, ಕೋಲಾರ, ಚಿತ್ರದುರ್ಗ, ರಾಯಚೂರು (Raichur), ಚಿಕ್ಕಬಳ್ಳಾಪುರ ಕ್ಷೇತ್ರಗಳ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ :
ಮೈಸೂರು – ಯದುವೀರ್ ಕೃಷ್ಣದತ್ತ ಒಡೆಯರ್
ಚಾಮರಾಜನಗರ – ಎಸ್ ಬಾಲರಾಜ್
ಬೆಂಗಳೂರು ಗ್ರಾಮಾಂತರ- ಸಿಎನ್ ಮಂಜುನಾಥ (C.N Manjunath)
ಕೊಪ್ಪಳ: ಬಸವರಾಜ್ ಕ್ಯಾವತೂರು
ಬಳ್ಳಾರಿ- ಶ್ರೀರಾಮುಲು

ಉಡುಪಿ ಚಿಕ್ಕಮಗಳೂರು- ಕೋಟಾ ಶ್ರೀನಿವಾಸ ಪೂಜಾರಿ
ಬಾಗಲಕೋಟೆ: ಗದ್ದಿಗೌಡರ್
ಬಿಜಾಪುರ – ರಮೇಶ್ ಜಿಗಜಿಣಗಿ
ಹಾವೇರಿ- ಬಸವರಾಜ ಬೊಮ್ಮಾಯಿ
ಧಾರವಾಡ – ಪ್ರಹ್ಲಾದ್ ಜೋಷಿ
ದಾವಣಗೆರೆ (Davanagere) – ಗಾಯತ್ರಿ ಸಿದ್ದೇಶ್ವರ
ಚಿಕ್ಕೋಡಿ – ಅಣ್ಣಾಸಾಹೇಬ್ ಜೊಲ್ಲೆ


ತುಮಕೂರು (Tumkuru) – ಸೋಮಣ್ಣ
ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ
ಬೆಂಗಳೂರು ಕೇಂದ್ರ – ಪಿಸಿ ಮೋಹನ್
ಕಲಬುರಗಿ – ಉಮೇಶ್ ಜಾಧವ್
ಬೀದರ್ (Bidar) – ಭಗವಂತ ಖೂಬಾ
ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ
ಶಿವಮೊಗ್ಗ – ಬಿವೈ ರಾಘವೇಂದ್ರ
ದಕ್ಷಿಣ ಕನ್ನಡ – ಕ್ಯಾ.ಬ್ರಿಜೇಶ್ ಚೌಟ

ಇದನ್ನು ಓದಿ: ಲೋಕಸಮರ 2024: ಬಿಜೆಪಿಯಿಂದ ಯಾವ ಜಾತಿಗೆ ಎಷ್ಟು ಟಿಕೆಟ್..?

Exit mobile version