2021-22ರಲ್ಲಿ ಬಿಜೆಪಿಯ ಒಟ್ಟು ಆದಾಯ 1917.12 ಕೋ : ಶೇ.154.82 ರಷ್ಟು ಏರಿಕೆ ಕಂಡ ಆದಾಯ !

New Delhi : ಚುನಾವಣಾ ಆಯೋಗದಿಂದ ಅಧಿಕೃತ ಮಾನ್ಯತೆ ಪಡೆದ ಎಂಟು ರಾಷ್ಟ್ರೀಯ ಪಕ್ಷಗಳು 2021-22ರ ಆರ್ಥಿಕ ವರ್ಷದಲ್ಲಿ ಭಾರತದಾದ್ಯಂತ ಒಟ್ಟು 3289.34 ಕೋಟಿ ಆದಾಯವನ್ನು ಸಂಗ್ರಹಿಸಿವೆ (bjp total income) ಎಂದು ಘೋಷಿಸಿವೆ.

ಅದರಲ್ಲಿ ಆಡಳಿತರೂಢ ಬಿಜೆಪಿ (BJP)ಅರ್ಧಕ್ಕಿಂತ ಹೆಚ್ಚು ಆದಾಯವನ್ನು ಹೊಂದಿದೆ ಎಂದು ಚುನಾವಣಾ ಸುಧಾರಣೆಗಳಿಗಾಗಿ ಕೆಲಸ ಮಾಡುವ ಪ್ರಮುಖ ಎನ್‌ಜಿಒ ತಿಳಿಸಿದೆ.

ಎಂಟು ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದ ಶೇ 16.59 ರಷ್ಟಿರುವ 545.745 ಕೋಟಿಗಳ ಎರಡನೇ ಅತಿ ಹೆಚ್ಚು

ಆದಾಯವನ್ನು ತೃಣಮೂಲ ಕಾಂಗ್ರೆಸ್(Congress) ಘೋಷಿಸಿದೆ ಎಂದು ಪಕ್ಷಗಳು ಚುನಾವಣಾ (bjp total income) ಆಯೋಗದೊಂದಿಗೆ ಹಂಚಿಕೊಂಡ ದಾಖಲೆಗಳನ್ನು ಉಲ್ಲೇಖಿಸಿ,

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ತಿಳಿಸಿದೆ. 2021-22ರಲ್ಲಿ ಬಿಜೆಪಿ ಒಟ್ಟು 1917.12 ಕೋಟಿ ಆದಾಯವನ್ನು ಘೋಷಿಸಿದೆ. ಅದರಲ್ಲಿ 854.467 ಕೋಟಿ ಖರ್ಚು ಮಾಡಿದೆ.

ಕಾಂಗ್ರೆಸ್‌ನ ಒಟ್ಟು ಆದಾಯ 541.275 ಕೋಟಿ ಆಗಿದ್ದು, 400.414 ಕೋಟಿ ಅಥವಾ ಆದಾಯದ ಶೇ 73.98 ಖರ್ಚು ಮಾಡಿದೆ. 2020-2021ನೇ ಸಾಲಿಗೆ ಹೋಲಿಸಿದರೆ ಬಿಜೆಪಿಯ ಆದಾಯ ಶೇಕಡಾ 154.82ರಷ್ಟು ಹೆಚ್ಚಾಗಿದೆ.

ಚುನಾವಣಾ ಆಯೋಗವು ರಾಷ್ಟ್ರೀಯ ಸ್ಥಾನಮಾನವನ್ನು ನೀಡಿದ ಎಂಟು ಪಕ್ಷಗಳಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ), ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ),

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ಸಿಪಿಐ-ಎಂ, ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಇಪಿ) ಸೇರಿವೆ.

ಎಂಟು ರಾಷ್ಟ್ರೀಯ ಪಕ್ಷಗಳ ಪೈಕಿ ನಾಲ್ಕು – ಬಿಜೆಪಿ, ಟಿಎಂಸಿ, ಕಾಂಗ್ರೆಸ್ ಮತ್ತು ಎನ್‌ಸಿಪಿ – 2021-22ರ ವರ್ಷದಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ 1811.9425 ಕೋಟಿಗಳನ್ನು ಸಂಗ್ರಹಿಸಿವೆ.

ಬಿಜೆಪಿ 1033.70 ಕೋಟಿ, ಟಿಎಂಸಿ 528.143 ಕೋಟಿ, ಕಾಂಗ್ರೆಸ್ 236.0995 ಕೋಟಿ ಮತ್ತು ಎನ್‌ಸಿಪಿ 14 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳ ಮೂಲಕ ದೇಣಿಗೆ ಪಡೆದಿವೆ.

ಎಸ್‌ಬಿಐ ಹಂಚಿಕೊಂಡ ಮಾಹಿತಿಯ ಪ್ರಕಾರ, 2673.0525 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು 2021-22ನೇ ಹಣಕಾಸು ವರ್ಷದಲ್ಲಿ ಪಕ್ಷಗಳು ರಿಡೀಮ್ ಮಾಡಿದ್ದು,

ಇದರಲ್ಲಿ 67.79 ಪ್ರತಿಶತವನ್ನು ರಾಷ್ಟ್ರೀಯ ಪಕ್ಷಗಳು ರಿಡೀಮ್ ಮಾಡಿಕೊಂಡಿವೆ.

Exit mobile version