Black Rice: ಆರೋಗ್ಯ ಕಾಪಾಡುವಲ್ಲಿ ಬಲು ಸಹಕಾರಿ ಈ ಕಪ್ಪು ಅಕ್ಕಿ!

black rice health benefits
black rice

ಹಿಂದಿನ ಕಾಲದಿಂದಲೂ ನಮ್ಮಲ್ಲಿ ಆಹಾರಕ್ಕಾಗಿ (health)ಅಕ್ಕಿಯನ್ನು ಸತತವಾಗಿ ಬಳಕೆ ಮಾಡುತ್ತಲೇ ಇದ್ದೇವೆ. ಭಾರತೀಯರಲ್ಲಂತೂ ಅಕ್ಕಿಯ (Rice) ಬಳಕೆಯ ಹಿಂದೆ ದೊಡ್ಡ ಇತಿಹಾಸವೇ ಇದೆ.

ಹೀಗಾಗಿ ಅಕ್ಕಿಯ ವಿವಿಧ ಬಗೆಯ ಖಾದ್ಯಗಳು, ತರ ತರದ ತಿಂಡಿಗಳೂ ಕೂಡ ಬಹಳ ಜನಪ್ರಿಯವಾಗಿದೆ. ಅಕ್ಕಿಯಲ್ಲಿ ಕೂಡ ಹಲವಾರು ವಿಧಗಳಿವೆ, ಬಿಳಿ ಅಕ್ಕಿ, ಕಂದು ಬಣ್ಣದ ಅಕ್ಕಿ, ಕೆಂಪು ಅಕ್ಕಿ, ಕಪ್ಪು ಅಕ್ಕಿ (Black Rice)ಇತ್ಯಾದಿ.

ಹಾಗಾದರೆ ಯಾವ ಅಕ್ಕಿಯ ಬಳಕೆ ಒಳ್ಳೆಯದು ಎಂದು ಕೇಳಿದರೆ, ಎಲ್ಲ ರೀತಿಯ ಅಕ್ಕಿಯೂ ತನ್ನದೇ ಆದ ವಿಶಿಷ್ಟ ಪೋಷಕಾಂಶಗಳಿಂದ ಸಮೃದ್ಧವಾಗಿವೆ.

https://vijayatimes.com/russia-detains-islamic-state-terrorist/


ಇನ್ನು, ಮಧುಮೇಹಿಗಳಿಗೆ (Diabetic) ಆಹಾರದಲ್ಲಿ ಒಂದಷ್ಟು ಕಟ್ಟು ನಿಟ್ಟಿನ ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ. ಮಧುಮೇಹಿಗಳು ಹೆಚ್ಚು ಸಕ್ಕರೆಯ ಅಂಶವಿರುವ ಆಹಾರವನ್ನು ಸೇವಿಸುವಂತಿಲ್ಲ.

ಹೀಗಾಗಿ ಇವರಿಗೆ ಕಪ್ಪು ಅಕ್ಕಿಯ ಅನ್ನ ಹಾಗೂ ಆಹಾರ ಪದಾರ್ಥಗಳು ಹೆಚ್ಚು ಉಪಯುಕ್ತವಾಗಿದೆ. ಕಪ್ಪು ಅಕ್ಕಿಯಲ್ಲಿ ಸಕ್ಕರೆಯ (Sugar) ಪ್ರಮಾಣ ಕಡಿಮೆ ಇರುತ್ತದೆ, ಜೊತೆಗೆ ಆಂಟಿಆಕ್ಸಿಡೆಂಟ್‌ಗಳನ್ನು ಈ ಕಪ್ಪು ಅಕ್ಕಿ ಹೊಂದಿರುತ್ತದೆ.

ಹೀಗಾಗಿ ಮಧುಮೇಹಿಗಳು ಭಯವಿಲ್ಲದೆ ಈ ಕಪ್ಪು ಅಕ್ಕಿಯನ್ನು ಸೇವಿಸಬಹುದಾಗಿದೆ. ಅಲ್ಲದೆ ಈ ಕಪ್ಪು ಅಕ್ಕಿ ಗ್ಲುಟನ್‌ ಅಂಶವನ್ನು (Gluten content) ಹೊಂದಿರುವುದಿಲ್ಲ, ಹೀಗಾಗಿ ಕರುಳಿನ ಸಮಸ್ಯೆ ಇದ್ದವರೂ ಕೂಡ ಇದನ್ನು ಸೇವಿಸಬಹುದಾಗಿದೆ.

ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು (Heart health) ಕಾಪಾಡಿಕೊಳ್ಳಲು ಈ ಕಪ್ಪು ಅಕ್ಕಿಯ ಅನ್ನ ಸಹಾಯ ಮಾಡುತ್ತದೆ.

ಕೆಟ್ಟ ಕೊಲೆಸ್ಟ್ರಾಲ್‌ ದೇಹದಲ್ಲಿ ಶೇಖರಣೆಯಾದರೆ ಹೃದಾಯಾಘಾತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
https://vijayatimes.com/russia-detains-islamic-state-terrorist/

ಕಣ್ಣಿನ ಪೊರೆ ಮತ್ತು ಡಯಾಬಿಟಿಕ್ ರೆಟಿನೋಪತಿಯ ಅಪಾಯವನ್ನು ಕೂಡ ಈ ಕಪ್ಪು ಅಕ್ಕಿ ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಆದ್ದರಿಂದ ಕಪ್ಪು ಅಕ್ಕಿಯ ಬಳಕೆಯಿಂದ ಕಣ್ಣಿನ ಆರೋಗ್ಯವನ್ನೂ ಕೂಡ ಹೆಚ್ಚಿಸಿಕೊಳ್ಳಬಹುದಾಗಿದೆ.

ಕಪ್ಪು ಅಕ್ಕಿಯ ಅನ್ನ ಸೇವನೆಯಿಂದ ಅಧಿಕ ರಕ್ತದೊತ್ತಡವೂ ನಿಯಂತ್ರಣಕ್ಕೆ ಬರುತ್ತದೆ. ಹೀಗಾಗಿ ಹೃದಯವನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಕಪ್ಪು ಅಕ್ಕಿಯ ಬಳಕೆ ಒಳ್ಳೆಯದು.

Black Rice

ಬದಲಾದ ಜೀವನಶೈಲಿ ಹಾಗೂ ಜಂಕ್‌ಫುಡ್‌ಗಳ ಸೇವನೆಯಿಂದ ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಣೆಯಾಗುತ್ತದೆ. ಇದನ್ನು ತಪ್ಪಿಸಲು ಕೂಡ ಕಪ್ಪು ಅಕ್ಕಿ ಸಹಾಯಕ.

ಕಪ್ಪು ಅಕ್ಕಿಯಲ್ಲಿರುವ ಆಂಥೋಸಯಾನಿನ್‌ಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿವೆ. ಅಧ್ಯಯನಗಳ ಪ್ರಕಾರ ಆಂಥೋಸಯಾನಿನ್-ಭರಿತ ಆಹಾರಗಳ ಹೆಚ್ಚಿನ ಸೇವನೆಯು ಕರುಳಿನ ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡುತ್ತದೆ.

ಕಪ್ಪು ಅಕ್ಕಿಯಲ್ಲಿ ಹೇರಳವಾದ ಫೈಬರ್‌ ಮತ್ತು ಪ್ರೋಟೀನ್‌ ಅಂಶವಿದೆ, ಇದು ದೇಹದ ಅತಿಯಾದ ತೂಕ, ಬೊಜ್ಜು ಎರಡನ್ನೂ ಕಡಿಮೆ ಮಾಡಲು ಸಹಕಾರಿಯಾಗಿದೆ.
ಈ ಕುರಿತು ನಡೆದ ಅಧ್ಯಯನದಲ್ಲಿ, ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕೂಡ ಕಡಿಮೆ ಮಾಡಲು ಈ ಕಪ್ಪು ಅಕ್ಕಿ ಸಹಕಾರಿ ಎನ್ನುವುದು ತಿಳಿದು ಬಂದಿದೆ.

ಪವಿತ್ರ

Exit mobile version