ಕೆಂಪೇಗೌಡ ಏರ್ಪೋರ್ಟ್ ಟರ್ಮಿನಲ್-2 ಅನ್ನು “ಟರ್ಮಿನಲ್ ಇನ್ ದಿ ಗಾರ್ಡನ್” ಎಂದು ಕರೆಯಲು ನಿರ್ಧಾರ

Bengaluru: ಬಹು ನಿರೀಕ್ಷಿತ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬೆಂಗಳೂರಿನ ಕೆಂಪೇಗೌಡ (BLR Airport terminal 2) ವಿಮಾನ ನಿಲ್ದಾಣದಲ್ಲಿರುವ

#KempegowdaInternationalAirportBengaluru ಟರ್ಮಿನಲ್‌-2 ನಲ್ಲಿ ಇನ್ಮುಂದೆ ಸಂಪೂರ್ಣ ಅಂತಾರಾಷ್ಟ್ರೀಯ ವಿಮಾನ ಸೇವೆಗೆ ಮೀಸಲಿಡಲಾಗಿದ್ದು, ಇಂದಿನಿಂದ (ಸೆ. ೧೨)

ಅಧಿಕೃತವಾಗಿ ಟರ್ಮಿನಲ್‌-2ನಿಂದ ವಿಮಾನಗಳು ಹಾರಾಟವಾಗಲಿದೆ. ಆಗಮನ ಮತ್ತು ನಿರ್ಗಮನ ಕಾರ್ಯಾಚರಣೆಯೂ ಟರ್ಮಿನಲ್‌-2 (Terminal-2) ನಿಂದಲೆ ನಡೆಯಲಿದ್ದು,

ಇನ್ನು ಟರ್ಮಿನಲ್‌-2ನ ವಿಶೇಷತೆಗಳೇನು? ಏನೆಲ್ಲಾ ಸೌಲಭ್ಯಗಳನ್ನು ಹೊಂದಿದೆ (BLR Airport terminal 2) ಎನ್ನುವ ಸಂಕ್ಷಿಪ್ತ ವಿವರ ತಿಳಿಯೋಣ.

ಕೆಂಪೇಗೌಡ ವಿಮಾನ ನಿಲ್ದಾಣದ @BLRAirport ಎಂ.ಡಿ ಹರಿಮಾರನ್ (Harimaran) ಅವರು ಇಂದಿನಿಂದ (ಸೆಪ್ಟೆಂಬರ್ 12) ಟರ್ಮಿನಲ್-2ನಿಂದ ವಿದೇಶಿ ವಿಮಾನಗಳ ಹಾರಾಟಕ್ಕೆ

ಚಾಲನೆನೀಡಲಿದ್ದು, ಬೆಳಗ್ಗೆ 10.45ಕ್ಕೆ ಟರ್ಮಿನಲ್-2ಗೆ ಮೊದಲ ವಿದೇಶಿ ವಿಮಾನ ಬಂದಿಳಿಯುವುದಲ್ಲದೆ ಇನ್ನು ಹಳೆಯ ಟರ್ಮಿನಲ್-1 (Terminal-1) ದೇಶಿಯ ವಿಮಾನಗಳ‌ ಹಾರಾಟಕ್ಕೆ

ಮೀಸಲಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಅತ್ಯಾಧುನಿಕ ತಂತ್ರಜ್ಞಾನವುಳ್ಳ ಟರ್ಮಿನಲ್-2
ಬೇರೆ ಬೇರೆ ಜಾತಿಯ ಸಸ್ಯಗಳು ಮತ್ತು ಮರಗಳಿಂದ ಅಲಂಕಾರಗೊಂಡ ಈ ಟರ್ಮಿನಲ್ ಅನ್ನು “ಟರ್ಮಿನಲ್ ಇನ್ ದಿ ಗಾರ್ಡನ್” (Terminal In the Garden) ಎಂದು ಕರೆಯಲು

ನಿರಾಧಾರಿಸಿದ್ದು, ಈ ಟರ್ಮಿನಲ್ನಲ್ಲಿ 180 ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಜಾತಿಯ ಸಸ್ಯಗಳಿವೆ. ಹಾಗೂ 3,600 ಕ್ಕೂ ಹೆಚ್ಚು ಸಸ್ಯ ಪ್ರಭೇದಗಳು, ಬಿದಿರು, 620 ಸ್ಥಳೀಯ ಸಸ್ಯಗಳು,

7,700 ಕಸಿ ಮರಗಳು, 96 ಕಮಲ ಇದ್ದು, ಇನ್ನೂ ಹಲವಾರು ಬಗೆ ಬಗೆಯ ಸಸ್ಯಗಳಿಂದ ಈ ಟರ್ಮಿನಲ್ ಕೂಡಿದೆ.

10 ಸಾವಿರ ಚದರ‌ ಮೀಟರ್ ಹಸಿರು ಗೋಡೆ, ಕೃತಕ ವಾಟರ್ ಫಾಲ್ಸ್ (Water falls) ಜೊತೆ ನೂರಾರು ವರ್ಷಗಳ ಹಳೆಯ ಮರವನ್ನು ಟರ್ಮಿನಲ್-2 ನಲ್ಲಿ ಇಡಲಾಗಿರುವುದಲ್ಲದೆ 2 ಲಕ್ಷ 55

ಸಾವಿರದ 661 ಚದರ್ ಮೀಟರ್ನ ನೂತನ ಟರ್ಮಿನಲ್-2 ನಲ್ಲಿ ಪ್ರತ್ಯೇಕ ವಿಮಾನ ಆಗಮ‌ನ ಹಾಗೂ ನಿರ್ಗಮನದ 2 ಹಂತಗಳನ್ನು ಹೊಂದಿದ್ದು, 5.ಜಿ ನೆಟ್ವರ್ಕ್ ಸೇರಿದಂತೆ ಅತ್ಯಾಧುನಿಕ

ತಂತ್ರಜ್ಞಾನದ ಚೆಕ್ ಇನ್, ಬ್ಯಾಗೇಜ್ ಡ್ರಾಪ್ ಕೌಂಟರ್ (Baggage drop Counter) ವ್ಯವಸ್ಥೆಯನ್ನು ಇದು ಹೊಂದಿದೆ.

ಪ್ರಧಾನಿ ಮೋದಿ (Modi) ಅವರು ಕಳೆದ ವರ್ಷ ನವೆಂಬರ್ನಲ್ಲಿ 5 ಸಾವಿರ ಕೋಟಿ ‌ವೆಚ್ಚದಲ್ಲಿ‌ ಮಾಡಲಾದ ಗಾರ್ಡನ್ ಟರ್ಮಿನಲ್ 2 ಉದ್ಘಾಟಿಸಿದ್ದರು. ಅಲ್ಲದೆ ಆಗಸ್ಟ್‌ 31 ರಿಂದಲೇ ಟರ್ಮಿನಲ್‌-2 ರಿಂದ

ಅಂತರರಾಷ್ಟ್ರೀಯ ವಿಮಾನಯಾನ ಅಧಿಕೃತವಾಗಿ ಪ್ರಾರಂಭವಾಗಬೇಕಿತ್ತು ಆದರೆ ತಾಂತ್ರಿಕ ಅಡೆತಡೆ ಹಾಗೂ ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ವಿಮಾನ ನಿಲ್ದಾಣದ ನಿರ್ವಹಣಾ

ಮಂಡಳಿ ಮುಂದೂಡಲಾಗಿತ್ತು.

ಇದನ್ನು ಓದಿ: ರಾಹುಲ್ ಗಾಂಧಿ ವಾಗ್ದಾಳಿ: ಹಿಂದುತ್ವಕ್ಕೂ, ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ರಾಹುಲ್ ಗಾಂಧಿ ವಾಗ್ದಾಳಿ

Exit mobile version