Paris: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi attacks bjp) ಅವರು ಭಾನುವಾರ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘದ
ವಿರುದ್ಧ ವಾಗ್ದಾಳಿ ನಡೆಸಿದ್ದು, “ಹಿಂದುತ್ವಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಬಿಜೆಪಿ (BJP) ಏನು ಮಾಡುತ್ತದೆ ಎಂಬುದರಲ್ಲಿ ಹಿಂದುತ್ವ ಏನೂ ಇಲ್ಲ ಎಂದು ಹೇಳಿದ್ದಾರೆ. ಪ್ಯಾರಿಸ್ನ
ಸೈನ್ಸಸ್ ಪಿಒ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು ದೇಶದೊಳಗಿನ ವಿರೋಧ ಪಕ್ಷದ ನಾಯಕರ ಧ್ವನಿಯನ್ನು ಹತ್ತಿಕ್ಕಲು ವ್ಯಾಪಕ ಟೀಕೆಗೆ ಗುರಿಯಾದ
ಸರ್ಕಾರದ ವಿರುದ್ಧ ಗುಡುಗಿದ ಅವರು ಬಿಜೆಪಿಯವರು (BJP) ಏನೇ ಮಾಡಿಯಾದರೂ ಅಧಿಕಾರ ಪಡೆಯಬೇಕು ಎಂದು ಹೊರಟಿದ್ದಾರೆ ಎಂದಿದ್ದಾರೆ.
ಭಾನುವಾರ ಫ್ರಾನ್ಸ್ನಲ್ಲಿ (France) ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ನಾನು ಗೀತೆ, ಹಲವಾರು ಉಪನಿಷತ್ತುಗಳು ಮತ್ತು ಅನೇಕ ಹಿಂದೂ ಪುಸ್ತಕಗಳನ್ನು ಓದಿದ್ದೇನೆ
ಅಲ್ಲದೆ ನಿಮಗಿಂತ ದುರ್ಬಲರನ್ನು ನೀವು ಭಯಭೀತಗೊಳಿಸಬೇಕು ಅಥವಾ ಹಾನಿಗೊಳಿಸಬೇಕು ಎಂದು ನಾನು ಯಾವುದೇ ಹಿಂದೂ ಪುಸ್ತಕದಲ್ಲಿ ಎಲ್ಲಿಯೂ ಓದಿಲ್ಲ ಅಥವಾ ಯಾವುದೇ ಹಿಂದೂ
ವ್ಯಕ್ತಿಯಿಂದ ಕೇಳಿಲ್ಲ. ಈ ಕಲ್ಪನೆ ಈ ಪದ – ‘ಹಿಂದೂ ರಾಷ್ಟ್ರೀಯವಾದಿ’ – ಇದು ತಪ್ಪು ಪದ. ಅವರು ಹಿಂದೂ ರಾಷ್ಟ್ರೀಯವಾದಿಗಳಲ್ಲ… ಅವರಿಗೂ ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ
ಎಂದು ರಾಹುಲ್ ಬಿಜೆಪಿ ವಿರುದ್ಧ (Rahul Gandhi attacks bjp) ವಾಗ್ದಾಳಿ ನಡೆಸಿದ್ದಾರೆ.
ದೇಶದ ಹೆಸರನ್ನು ಭಾರತ್ (Bharath) ಎಂದು ಬದಲಾಯಿಸಲು ಯೋಜಿಸಲಾಗಿದೆ ಎಂಬ ಊಹಾಪೋಹಗಳ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ ಅವರು ಭಾನುವಾರ ಕೇಂದ್ರ ಸರ್ಕಾರವನ್ನು
ತರಾಟೆಗೆ ತೆಗೆದುಕೊಂಡಿದ್ದು, ರಾಹುಲ್ ಅವರಲ್ಲಿ ಜನಪ್ರಿಯ ಹೆಸರನ್ನು ಬದಲಿಸುತ್ತಿರುವುದರ ಕುರಿತು ಕೇಳಲಾಗಿತ್ತು ಇದಕ್ಕೆ ಅವರು ಎರಡೂ “ಸಂಪೂರ್ಣವಾಗಿ ಸ್ವೀಕಾರಾರ್ಹ” ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ರಾಹುಲ್ ಗಾಂಧಿ ಅವರು ಈ ರೀತಿ ಉತ್ತರಿಸಿದ್ದು, ಸಂವಿಧಾನವು ವಾಸ್ತವವಾಗಿ ಎರಡೂ ಹೆಸರುಗಳನ್ನು ಬಳಸುತ್ತದೆ, ಅಲ್ಲವೇ?
ಹಾಗಾದರೆ ಸಂವಿಧಾನದಲ್ಲಿನ ಮೊದಲ ಸಾಲು ‘India, that is Bharat, shall be a Union of States’ ಎಂದು ಇದೆ. ಹಾಗಾಗಿ ನಾನು ನಿಜವಾಗಿಯೂ ಇದರಲ್ಲಿ ಸಮಸ್ಯೆ ಇದೆ ಎಂದು ಹೇಳಲ್ಲ. ಎರಡೂ ಸಂಪೂರ್ಣವಾಗಿ ಸ್ವೀಕಾರಾರ್ಹ ಎಂದಿದ್ದಾರೆ.
ಅಲ್ಲದೆ ಸ್ವಲ್ಪ ಹೊತ್ತು ಮಾತು ನಿಲ್ಲಿಸಿ ತದ ನಂತರ ಮುಗುಳ್ನಕ್ಕು ಮಾತು ಮುಂದುವರಿಸಿದ ರಾಹುಲ್ ಅವರು ನಾವು ನಮ್ಮ ಒಕ್ಕೂಟಕ್ಕೆ ‘ಇಂಡಿಯಾ’ (India) ಎಂದು ಹೆಸರಿಟ್ಟಿದ್ದರಿಂದ ನಾವು
ಸರ್ಕಾರವನ್ನು ಸ್ವಲ್ಪ ಕೆರಳಿಸಿದ್ದೇವೆ ಎಂದ ಭಾವಿಸುತ್ತೇನೆ. ಹಾಗೂ ಇದರಿಂದ ಅವರು ರೊಚ್ಚಿಗೆದ್ದು ದೇಶದ ಹೆಸರನ್ನು ಬದಲಾಯಿಸಲು ನಿರ್ಧರಿಸಿದ್ದಾರೆ ಎಂದರು.
- ಭವ್ಯಶ್ರೀ ಆರ್.ಜೆ