ಕೋಟ್ಯಾಂತರ ರೂಪಾಯಿ ಬೆಲೆಬಾಳುತ್ತೆ ಈ ತಿಮಿಂಗಿಲದ ವಾಂತಿ!

Blue whale

ಶ್ರೀಮಂತರಾಗಲು(Blue Whale) ಹಲವಾರು ದಾರಿಗಳಿವೆ. ಕೆಲವರು ದುಡಿದು ಹಣವನ್ನು ಸಂಗ್ರಹಿಸಿ ಸಾಕಷ್ಟು ಪ್ರಯತ್ನದ ನಂತರ ಶ್ರೀಮಂತರಾಗುತ್ತಾರೆ.

ಇನ್ನು ಕೆಲವರು ಅಡ್ಡದಾರಿಯ ಮೂಲಕ, ಲಾಟರಿಗಳ ಮೂಲಕ ಶ್ರೀಮಂತರಾಗುತ್ತಾರೆ. ಆದ್ರೆ, ಕಡಲ ತೀರದ ಜನರು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮೀನಿನ ವಾಂತಿಯಿಂದ ಶ್ರೀಮಂತರಾಗುತ್ತಿದ್ದಾರೆ. ವಾಂತಿ ಎಂದ ತಕ್ಷಣ ಅಸಹ್ಯಪಡಬೇಡಿ, ‘ಸ್ಪರ್ಮ್‌ ವೇಲ್‌’ ಅಥವಾ ಕ್ಯಾಚಲಾಟ್‌ ಹೆಸರಿನ ತಿಮಿಂಗಿಲಗಳು ಇತರೆ ಸಮುದ್ರ ಜೀವಿಗಳನ್ನು ಸೇವಿಸಿದಾಗ, ಗಟ್ಟಿಯಾದ ಪದಾರ್ಥವು ಅದರ ಕರುಳಿಗೆ ತಾಗದಂತೆ ‘ಆಂಬರ್‌ಗ್ರೀಸ್‌’(Amber Grease) ರಾಸಾಯನಿಕ(Chemical) ವಸ್ತುವು ರಕ್ಷಿಸುತ್ತದೆ.

ಬಳಿಕ ಜೀರ್ಣಗೊಳ್ಳದ ಆಹಾರವನ್ನು ವಾಂತಿಯ ರೂಪದಲ್ಲಿ ಹೊರಹಾಕಿದಾಗ, ಅದರ ಜತೆ ಅಂಬರ್‌ಗ್ರೀಸ್‌ ಸಹ ಹೊರಬೀಳುತ್ತದೆ. ತೆಳುವಾದ ಮೇಣದಂತಹ ಈ ವಸ್ತುವು ಮೊದಲು ತೇಲುತ್ತಿರುತ್ತದೆ, ನಂತರದಲ್ಲಿ ಘನರೂಪಕ್ಕೆ ಪರಿವರ್ತನೆಯಾಗುತ್ತದೆ.
ಅಂಬರ್‌ಗ್ರಿಸ್ ಎಂಬ ಪದವು ಫ್ರೆಂಚ್ ಪದ ಅಂಬರ್ ಮತ್ತು ಗ್ರಿಸ್‌ನಿಂದ ಬಂದಿದೆ. ತಿಮಿಂಗಿಲಗಳಿಂದ ತಾಜಾವಾಗಿ ಉತ್ಪತ್ತಿಯಾದಾಗ ಇದು ಸಮುದ್ರದ ವಾಸನೆ, ಮಲದ ವಾಸನೆಯನ್ನು ಹೊಂದಿರುತ್ತದೆ. ಗಟ್ಟಿಯಾಗುವ ಸಮಯದಲ್ಲಿ ಅದು ಮಧುರ ಪರಿಮಳವನ್ನು ಸೂಸುತ್ತದೆ.

ಇದನ್ನು ಐಷಾರಾಮಿ ಸುಗಂಧ ದ್ರವ್ಯಗಳಲ್ಲಿ ಮತ್ತು ಕೆಲವು ಸಾಂಪ್ರದಾಯಿಕ ಔಷಧಿಗಳಲ್ಲಿಯೂ ಬಳಸಲಾಗುತ್ತದೆ.
ಹೀಗೆ ಘನರೂಪಕ್ಕೆ ಬಂದ ಅಂಬರ್‌ಗ್ರೀಸ್‌ ಹೆಚ್ಚು ವರ್ಷ ಕಾದಿರಿಸಿದಷ್ಟೂ ಅದರ ದುರ್ಗಂಧ ಮರೆಯಾಗಿ, ಸುವಾಸನೆ ಬೀರುತ್ತದೆ. ಹಾಗೆಯೇ ಸಿಹಿ ರೂಪಕ್ಕೆ ಮರಳುತ್ತದೆ. ಈ ವಸ್ತುವನ್ನು ಸೌಂದರ್ಯವರ್ಧಕ ಮತ್ತು ಸುಗಂಧ ದ್ರವ್ಯದಲ್ಲಿ ಬಳಕೆ, ಭಾರೀ ಬೇಡಿಕೆ, ಜಗತ್ತಿನ ಪ್ರತಿಷ್ಠಿತ ಕಂಪನಿಗಳು ತಯಾರಿಸುವ ಸುಗಂಧ ದ್ರವ್ಯಗಳಲ್ಲಿ ಈ ತಿಮಿಂಗಲದ ವಾಂತಿ (ಆ್ಯಂಬೆರ್ಗಿಸ್‌) ಬಳಕೆ ಮಾಡಲಾಗುತ್ತದೆ.

ಅತಿಹೆಚ್ಚು ಸಮಯದವರೆಗೆ ಸುಗಂಧವನ್ನು ಕಾಪಾಡಿಕೊಳ್ಳಲು ದ್ರವದೊಂದಿಗೆ ಇದನ್ನು ಮಿಶ್ರಣ ಮಾಡುವುದು ಅಗತ್ಯ ಎಂದು ತಯಾರಕರು ಹೇಳುತ್ತಾರೆ. ಅದಕ್ಕಾಗಿಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ಭಾರಿ ಬೇಡಿಕೆ ಇದೆ. ಇದು ಸಿಗುವುದು ಅಪರೂಪವಾದ ಕಾರಣ ದುಬಾರಿ ಬೆಲೆಯನ್ನು ಹೊಂದಿದೆ. ಪ್ರಾಚೀನ ಕಾಲದಲ್ಲಿ ಅಂಬರ್‌ಗ್ರಿಸ್ ಅನ್ನು ಸುಗಂಧ ದ್ರವ್ಯದಲ್ಲಿ ಬಳಸಲಾಗುತ್ತಿತ್ತು. ಈಜಿಪ್ಟಿನವರು ಇದನ್ನು ಧೂಪದ್ರವ್ಯವಾಗಿ ವಸ್ತುವನ್ನು ಸುಡುತ್ತಿದ್ದರು. ಚೀನಿಯರು ಇದನ್ನು ಡ್ರಾಗನ್ಸ್ ಸ್ಪಿಟಲ್ ಸುಗಂಧ ಎಂದು ಕರೆದರು.

ಸುಗಂಧ ದ್ರವ್ಯದ ವ್ಯಾಪಾರದಲ್ಲಿ ಅದರ ಅಪರೂಪ ಮತ್ತು ಬಳಕೆಯಿಂದಾಗಿ ಅಂಬೆರ್ರಿಸ್ ಹೆಚ್ಚಿನ ಮೌಲ್ಯದ ವಸ್ತುವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ 1 ಕೆಜಿ ಅಂಬರ್‌ಗ್ರೀಸ್‌ಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 1 ಕೋಟಿ ರೂಪಾಯಿ ಮೌಲ್ಯವಿದೆ. ಹೀಗಾಗಿ ಕಳ್ಳಸಾಗಾಣಿಕೆದಾರರು ಈ ವಸ್ತುವಿಗಾಗಿ ತಿಮಿಂಗಿಲಗಳನ್ನು ನಿರಂತರವಾಗಿ ಗುರಿಯಾಗಿಸಿಕೊಂಡಿದ್ದಾರೆ.

‘ಸ್ಪರ್ಮ್ ವೇಲ್’(SpermWhale) ಸಂರಕ್ಷಿತ ಜಾತಿಯಾಗಿರುವುದರಿಂದ ಅದರ ಬೇಟೆಯನ್ನು ನಿಷೇಧಿಸಲಾಗಿದೆ.

Exit mobile version