ಬೈಕ್ ಸವಾರನಿಗೆ ಹಿಗ್ಗಾಮುಗ್ಗಾ ಥಳಿಸಿದ ಬಿಎಂಟಿಸಿ ಚಾಲಕ ; ವಿಡಿಯೋ ವೈರಲ್

Yelahanka : ಬೆಂಗಳೂರು ನಗರದ ಯಲಹಂಕ ಸಮೀಪದಲ್ಲಿ ಬಿಎಂಟಿಸಿ(BMTC Bus Driver Video Viral) ಬಸ್ ಚಾಲಕ ಹಾಗೂ ಬೈಕ್ ಸವಾರನ ನಡುವೆ ಮಾತಿನ ಚಕಮಕಿ ಉಂಟಾಗಿ,

ಬಸ್ ಚಾಲಕ ಬೈಕ್ ಸವಾರನಿಗೆ ಹಿಗ್ಗಾಮುಗ್ಗಾ ಥಳಿಸಿರುವ ವೀಡಿಯೋ ಇದೀಗ ಭಾರಿ ವೈರಲ್ ಆಗಿದೆ.

ಡೆಕ್ಕನ್ ಹೆರಾಲ್ಡ್ ಮತ್ತು ಹಿಂದೂಸ್ಥಾನ್ ಟೈಮ್ಸ್(Hindustan Times) ವರದಿಗಳ ಅನುಸಾರ,

ಬೆಂಗಳೂರಿನ ಯಲಹಂಕ ನ್ಯೂ ಟೌನ್ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ವೇಳೆ ಬಿಎಂಟಿಸಿ ಬಸ್ ಚಾಲಕ ಮತ್ತೊಂದು ಬಿಎಂಟಿಸಿ ಬಸ್ಸಿನೊಡನೆ ಓವರ್ ಟೆಕ್ ಮಾಡಲು ಹಿಂದೆ ಮುಂದೆ ವೇಗವಾಗಿ ವಾಹನ ಚಲಾಯಿಸುತ್ತಿದ್ದರು ಎನ್ನಲಾಗಿದೆ.

ಈ ವೇಳೆ ಹಲ್ಲೆಗೊಳಗಾದ ಮೋಟಾರು ಬೈಕ್ ಸವಾರ 44 ವರ್ಷದ ಸಂದೀಪ್ ಬೋನಿಫೇಸ್ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಬಸ್ಸಿನ ಮುಂದೆ ವೇಗವಾಗಿ ವಾಹನವನ್ನು ಚಲಾಯಿಸಿಕೊಂಡು ಹೋಗಿದ್ದಾನೆ.

ಇದು ಬಸ್ ಚಾಲಕನಿಗೆ ಕೆರಳಿಸಿದೆ, ಬೈಕ್ ಸವಾರ ಸಂದೀಪ್ ಬಸ್ ಚಾಲಕನಿಗೆ ಕೈ ಸನ್ನೆಯನ್ನು ತೋರಿಸಿ ಮುಂದೆ ಸಾಗಿದ್ದಾನೆ.

ಇದನ್ನೂ ಓದಿ : https://vijayatimes.com/bjp-are-match-fixing/

ಇದರಿಂದ ಕುಪಿತಗೊಂಡ ಬಸ್ ಚಾಲಕ ಬೈಕ್ ಸವಾರನನ್ನು ಹಿಂದಿಕ್ಕಿ, ಆತನ ಬಳಿ ಹೋಗಿ ಮುಖಕ್ಕೆ ಹೊಡೆದಿದ್ದಾನೆ, ಹೊಡೆದ ರಭಸಕ್ಕೆ ವ್ಯಕ್ತಿಯ ಕಿವಿಯಲ್ಲಿ ರಕ್ತಸ್ರಾವವಾಗಿದೆ. ಇದಲ್ಲದೆ ಬೈಕ್‌ನ(Bike) ಕೀ ಮತ್ತು ಫೋನ್‌ ಕಸಿದುಕೊಂಡು ಹೋಗಿದ್ದಾರೆ.

ತನ್ನ ಬೈಕ್ ಕೀ ಪಡೆಯಲು ಬೈಕ್ ಸವಾರ ಮತ್ತೆ ಬಸ್ ಚಾಲಕನನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ.

ಕೀ ಮತ್ತು ಫೋನ್ ಕೇಳಲು ಬಸ್ಸಿನೊಳಗೆ ಹೋದಾಗ, ಬೈಕ್ ಸವಾರನ ಮಾತಿಗೆ ಕೆರಳಿದ ಬಸ್ ಚಾಲಕ, ಬಸ್ಸನ್ನು ಮಧ್ಯೆದಲ್ಲೇ ನಿಲ್ಲಿಸಿ, ಬೈಕ್ ಸವಾರನಿಗೆ ಮತ್ತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರು ಚಾಲಕನನ್ನು ತಡೆಯಲು ಪ್ರಯತ್ನಿಸಿದ್ದಾರೆ, ಆದ್ರೆ ಅದು ಕೂಡ ವಿಫಲಗೊಂಡಿದೆ. ಅಲ್ಲೇ ಕುಳಿತ್ತಿದ್ದ ಮಹಿಳೆಯೊಬ್ಬರು ಘಟನೆ ಕಂಡು ಕಿರುಚಾಡಿದ್ದಾರೆ.

ಈ ಘಟನೆಯ ದೃಶ್ಯವನ್ನು ಸ್ಮಾರ್ಟ್‌ಫೋನ್‌ನಲ್ಲಿ ಚಿತ್ರೀಕರಿಸಿದ ಟ್ವಿಟರ್(Twitter) ಬಳಕೆದಾರ ರಾಕೇಶ್ ಪ್ರಕಾಶ್ ತಮ್ಮ ಟ್ವೀಟರ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಸ್ಮಾರ್ಟ್‌ಫೋನ್‌ನಲ್ಲಿ ಚಿತ್ರೀಕರಿಸಿದ ವೀಡಿಯೊದಲ್ಲಿ ಚಾಲಕ ಪದೇ ಪದೇ ಹೊಡೆಯುವುದು ಮತ್ತು ಒದೆಯುವುದನ್ನು ಕಂಡು ಬಂದಿದೆ.

Tweet : https://twitter.com/rakeshprakash1/status/1595811107037360128?s=20&t=HV0W58UG7I9aGF2cwqO9ww

ಬೈಕ್ ಸವಾರ ಮತ್ತು ಬಸ್ ಚಾಲಕ ಇಬ್ಬರು ಕೂಡ ತಮ್ಮ ದೂರನ್ನು ಪೊಲೀಸರಿಗೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ಘಟನೆ ಸಂಭವಿಸಲು ಬೈಕ್ ಸವಾರ ತೋರಿಸಿದ ಬೆರಳಿನ ಸನ್ನೆಯೇ ಮೂಲ ಕಾರಣ ಎಂದು ಬಸ್ ಚಾಲಕ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆಯ ವೀಡಿಯೋ ಪರಿಶೀಲಿಸಿದ ಬಿಎಂಟಿಸಿ ಸಂಸ್ಥೆ ಬಸ್ ಚಾಲಕನನ್ನು ಅಮಾನತು ಮಾಡಿದೆ.

Exit mobile version